ಸಾಗರ : ನೆರೆಯಿಂದ ಮಳೆ ಕಳೆದುಕೊಂಡವರಿಗೆ ಸರ್ಕಾರ ತಕ್ಷಣ 5 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹೋರಾಟ ನಡೆಸಲಾಗುತ್ತದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಎಚ್ಚರಿಕೆ ನೀಡಿದ್ದಾರೆ.
ತಾಲೂಕಿನ ಆನಂದಪುರಂ ಹೋಬಳಿಯ ಗೌತಮಪುರ, ಆಚಾಪುರ, ಹೊಸೂರು ಇನ್ನಿತರೆ ಭಾಗಗಳಿಗೆ ಭೇಟಿ ನೀಡಿ ಆಚಾಪುರದಲ್ಲಿ ಗಾಳಿಮಳೆಗೆ ಮನೆ ಕಳೆದುಕೊಂಡ ಪ್ಯಾರಿಜಾನ್ ಎಂಬ ಮಹಿಳೆಗೆ ವೈಯಕ್ತಿಕ ಧನ ಸಹಾಯ ನೀಡಿ ಅವರು ಮಾತನಾಡುತ್ತಿದ್ದರು.
ನೆರೆಯಿಂದ ವಿಪರೀತ ಹಾನಿಯಾಗಿದೆ. ರಸ್ತೆ, ಸೇತುವೆ, ಮನೆ, ಕೊಟ್ಟಿಗೆ, ಕೃಷಿ ಜಮೀನು ವಿಪರೀತ ಮಳೆಯಿಂದ ಕೊಚ್ಚಿ ಹೋಗಿದೆ. ಸಂಬಂಧಪಟ್ಟ ಇಲಾಖೆಗಳು ತಕ್ಷಣ ನಷ್ಟದ ಅಂದಾಜು ತಯಾರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಹಾನಿಗೊಳಗಾದ ಪ್ರದೇಶಗಳನ್ನು ಪುನಶ್ಚೇತನಗೊಳಿಸುವತ್ತ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರತ್ನಾಕರ ಹೊನಗೋಡು ಮಾತನಾಡಿ, ನೆರೆಹಾನಿಗೊಳಗಾದ ಪ್ರದೇಶಗಳಿಗೆ ಕಾಗೋಡು ತಿಮ್ಮಪ್ಪ ಅವರ ನೇತೃತ್ವದಲ್ಲಿ ಅಪಾರ ಹಾನಿಯಾಗದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಮನೆ ಬಿದ್ದವರಿಗೆ ತಕ್ಷಣ ೫ ಲಕ್ಷ ರೂಪಾಯಿ ಸರ್ಕಾರ ಮಂಜೂರು ಮಾಡಿ, ಮನೆ ನಿರ್ಮಿಸಲು ಸಹಾಯ ಮಾಡಬೇಕು. ಕೆರೆಕಟ್ಟೆ ಹಾನಿ, ನೆರೆಯಿಂದ ಫಸಲು ಕಳೆದುಕೊಂಡವರಿಗೆ ತಕ್ಷಣ ಪರಿಹಾರ ನೀಡಬೇಕು. ಈ ಬಗ್ಗೆ ಕಾಗೋಡು ತಿಮ್ಮಪ್ಪ ಅವರು ಜಿಲ್ಲಾಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಪರಿಹಾರ ನೀಡುವುದನ್ನು ವಿಳಂಬ ಮಾಡಿದರೆ ಕಾಗೋಡು ತಿಮ್ಮಪ್ಪ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ : ಬ್ಯಾಟರಾಯನಪುರ: ಶಿಥಿಲಾವಸ್ಥೆಯಲ್ಲಿದ್ದ ಗೋಡೆ ಕುಸಿದು ಇಬ್ಬರ ಸಾವು
ಈ ಸಂದರ್ಭದಲ್ಲಿ ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಜ್ಯೋತಿ ಕೋವಿ, ಯಶೋದಮ್ಮ, ಪ್ರಮುಖರಾದ ರೇವಪ್ಪ ಪಟೇಲ್, ಗಣಪತಿ ಇರುವಕ್ಕಿ, ಶರತ್ ನಾಗಪ್ಪ, ನವೀನ್, ಮಂಜುನಾಥ ದಾಸನ್, ನಾಗರತ್ನ, ಬಸವರಾಜ್, ಹಾಜಿರಾಬಿ, ನಟರಾಜ್, ಶಿವಾನಂದ, ಕಲಿಮುಲ್ಲಾ, ಮೋಹನ್ ಇನ್ನಿತರರು ಹಾಜರಿದ್ದರು.