Advertisement

ಧವನ್‌ ಜತೆ ಅನುಚಿತ ವರ್ತನೆ: ಕಾಗಿಸೊ ರಬಾಡಾಗೆ ದಂಡ

06:45 AM Feb 15, 2018 | |

ಪೋರ್ಟ್‌ ಎಲಿಜಬೆತ್‌: ಪೋರ್ಟ್‌ ಎಲಿಜಬೆತ್‌ ಪಂದ್ಯದ ವೇಳೆ ಭಾರತದ ಆರಂಭಕಾರ ಶಿಖರ್‌ ಧವನ್‌ ಜತೆ ಅಸಭ್ಯವಾಗಿ ವರ್ತಿಸಿದ ದಕ್ಷಿಣ ಆಫ್ರಿಕಾ ವೇಗಿ ಕಾಗಿಸೊ ರಬಾಡ ಅವರಿಗೆ ಪಂದ್ಯ ಸಂಭಾವನೆಯ ಶೇ. 15ರಷ್ಟು ದಂಡ ವಿಧಿಸಲಾಗಿದೆ. ಜತೆಗೆ ಒಂದು “ದುರ್ನಡತೆಯ ಅಂಕ’ವನ್ನೂ ನೀಡಲಾಗಿದೆ.

Advertisement

ಭಾರತೀಯ ಇನ್ನಿಂಗ್ಸಿನ 8ನೇ ಓವರ್‌ ವೇಳೆ ಈ ಘಟನೆ ನಡೆದಿತ್ತು. ಶಿಖರ್‌ ಧವನ್‌ ವಿಕೆಟ್‌ ಕಿತ್ತ ಬಳಿಕ ರಬಾಡ ಟಾಟಾ ಎನ್ನುವ ರೀತಿಯಲ್ಲಿ ಹೀಯಾಳಿಸಿದ್ದಾರೆ. ಜತೆಗೆ ಅಸಭ್ಯ ಭಾಷೆಯಲ್ಲಿ ಏನನ್ನೋ ಹೇಳಿದ್ದಾರೆ. ಇದರಿಂದ ರೊಚ್ಚಿಗೆದ್ದ ಧವನ್‌ ಕೂಡ ಪ್ರತ್ಯುತ್ತರ ನೀಡಿದ್ದಾರೆ.

ಇದನ್ನು ಗಂಭೀರವಾಗಿ ಪರಿಗಣಿಸಿದ ಅಂಗಳದ ಅಂಪಾಯರ್‌ಗಳಾದ ಇಯಾನ್‌ ಗೂಲ್ಡ್‌ ಮತ್ತು ಶಾನ್‌ ಜಾರ್ಜ್‌, ಥರ್ಡ್‌ ಅಂಪಾಯರ್‌ ಅಲೀಮ್‌ ದಾರ್‌, 4ನೇ ಅಂಪಾಯರ್‌ ಬೊಂಗನಿ ಜೆಲೆ ಸೇರಿಕೊಂಡು ರಬಾಡ ವಿರುದ್ಧ ಐಸಿಸಿ ಮ್ಯಾಚ್‌ ರೆಫ್ರಿ ಆ್ಯಂಡಿ ಪೈಕ್ರಾಫ್ಟ್ಗೆ ದೂರು ಸಲ್ಲಿಸಿದ್ದಾರೆ. ಯಾವುದೇ ವಿಚಾರಣೆ ನಡೆಯದೆ ರಬಾಡ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ.

ಕಾಗಿಸೊ ರಬಾಡ ಈಗ ಒಟ್ಟು 5 “ದುರ್ನಡತೆ ಅಂಕ’ಗಳನ್ನು ಹೊಂದಿದಂತಾಗಿದೆ. ಇದು 4ಕ್ಕೆ ಏರಿದಾಗಲೊಮ್ಮೆ ಅವರಿಗೆ ನಿಷೇಧ ಹೇರಲಾಗಿತ್ತು. ಇದರಿಂದ ಕಳೆದ ಜುಲೈಯಲ್ಲಿ ನಡೆದ ಇಂಗ್ಲೆಂಡ್‌ ವಿರುದ್ಧದ ಲಾರ್ಡ್ಸ್‌ ಟೆಸ್ಟ್‌ ಪಂದ್ಯದಿಂದ ಹೊರಗುಳಿದಿದ್ದರು. ಈ ಅಂಕ 8ಕ್ಕೆ ಏರಿದರೆ ರಬಾಡ ಇನ್ನೂ ದೊಡ್ಡ ಮಟ್ಟದ ನಿಷೇಧಕ್ಕೊಳಗಾಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next