Advertisement

ಖಾಸಗಿ ಕ್ಲಿನಿಕ್‌ಗೆ ಭೇಟಿ-ಪರಿಶೀಲನೆ

01:01 PM Mar 08, 2020 | Team Udayavani |

ಕಡೂರು: ಜಿಲ್ಲಾ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೋಂದಣಿ ಪ್ರಾಧಿಕಾರದ ಸೂಚನೆಯ ಮೇರೆಗೆ ಯಗಟಿಯಲ್ಲಿರುವ ಲಲಿತಾ ಕ್ಲಿನಿಕ್‌ಗೆ ಶನಿವಾರ ದಿಢೀರ್‌ ಭೇಟಿ ನೀಡಿದ ತಾಲೂಕು ವೈದ್ಯಾಧಿಕಾರಿ ಡಾ| ಪಿ.ಕೆ. ಹರೀಶ್‌ ಅವರು ಸಮಗ್ರ ಪರಿಶೀಲನೆ ನಡೆಸಿದರು.

Advertisement

ಆಯುರ್ವೇದ ಚಿಕಿತ್ಸೆ ನೀಡುವ ಕ್ಲಿನಿಕ್‌ನಲ್ಲಿ ಆಲೋಪತಿ ಔಷಧಗಳನ್ನು ಕೊಡುತ್ತಿರುವ ಬಗ್ಗೆ ಮತ್ತು ರೋಗಿಗಳಿಗೆ ಸ್ಟೆರಾಯ್ಡಗಳನ್ನು ನೀಡುವ ಬಗ್ಗೆ ದೂರು ದಾಖಲಾದ ಹಿನ್ನೆಲೆಯಲ್ಲಿ ಭೇಟಿ ನೀಡಿಪರಿಶೀಲನೆ ನಡೆಸಿದರು. ಈ ವೇಳೆ ಆಯುರ್ವೇದ ಔಷಧಗಳಿಗಿಂತ ಹೆಚ್ಚು ಆಲೋಪತಿ ಔಷಧಗಳು ಮತ್ತು ಸ್ಟೆರಾಯ್ಡ್ಗಳು ಇರುವುದನ್ನು ಕಂಡು ಡಾ| ಹರೀಶ್‌ ಅವರು ದಂಗಾದರು.

ಈ ವೇಳೆ ಮಾತನಾಡಿದ ಅವರು, ಈ ಹಿಂದೆ ಜನವರಿ 21ರಂದು ಕ್ಲಿನಿಕ್‌ಗೆ ಭೇಟಿ ನೀಡಿದಾಗ ಆಲೋಪತಿ ಔಷಧಗಳನ್ನು ಮತ್ತು ಸ್ಟೆರಾಯ್ಡಗಳನ್ನು ಬಳಸಬಾರದು ಎಂದು ಎಚ್ಚರಿಕೆ ನೀಡಿದ್ದರೂ ಸಹ ಅದನ್ನೇ ಮುಂದುವರಿಸಿರುವುದು ಕಾನೂನು ಉಲ್ಲಂಘನೆಯಾಗುತ್ತದೆ. ಯಾವುದೇ ಕಾರಣಕ್ಕೂ ಇನ್ನು ಮುಂದೆ ಆಯುರ್ವೇದ ಔಷಧಗಳನ್ನು ಬಿಟ್ಟು ಸ್ಟೆರಾಯ್ಡ ಅಥವಾ ಅಲೋಪತಿ ಔಷಧಗಳನ್ನು ಬಳಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಕ್ಲಿನಿಕ್‌ ವೈದ್ಯ ಡಾ| ಮಂಜುನಾಥ್‌ ಅವರಿಗೆ ಎಚ್ಚರಿಕೆ ನೀಡಿದರು.

ಇದಲ್ಲದೇ, ಪರವಾನಗಿ ಇಲ್ಲದೆ ಹಾಗೂ ಸೂಕ್ತ ದಾಖಲೆಗಳಿಲ್ಲದೆ ಔಷಧಗಳನ್ನು ದಾಸ್ತಾನು ಮಾಡಿರುವುದು ಸಹ ಕಾನೂನಿನ ಸ್ಪಷ್ಟ ಉಲ್ಲಂಘನೆ ಎಂದು ಪರಿಗಣಿಸಲಾಗುವುದು. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಔಷಧ ನಿಯಂತ್ರಣ ಅ ಧಿಕಾರಿಗಳ ಗಮನಕ್ಕೆ ತಂದರು. ಅಲ್ಲದೆ, ತರೀಕೆರೆ ಉಪವಿಭಾಗಾಧಿಕಾರಿ ಬಿ.ಆರ್‌.ರೂಪಾ ಅವರಿಗೆ ಪ್ರಕರಣದ ಮಾಹಿತಿಯನ್ನು ದೂರವಾಣಿ ಮೂಲಕ ನೀಡಿದರು.

ಕ್ಲಿನಿಕ್‌ಗೆ ಬಂದು ಹೋಗುವ ಹೊರ ಮತ್ತು ಒಳ ರೋಗಿಗಳ ದಾಖಲೆ ಪುಸ್ತಕ ತೆರೆಯದಿರುವ ಬಗ್ಗೆ ಕ್ಲಿನಿಕ್‌ ವೈದ್ಯ ಡಾ| ಮಂಜುನಾಥ್‌ ಅವರನ್ನು ಪ್ರಶ್ನಿಸಿದರು. ನಂತರ ಯಗಟಿಯಲ್ಲಿರುವ ಮತ್ತೂಂದು ಶ್ರೀ ಮಲ್ಲಿಕಾರ್ಜುನಸ್ವಾಮಿ ಖಾಸಗಿ ಕ್ಲಿನಿಕ್‌ ಗೆ ಅನೌಪಚಾರಿಕ ಭೇಟಿ ನೀಡಿದ ಡಾ| ಹರೀಶ್‌, ಈ ಖಾಸಗಿ ಕ್ಲಿನಿಕ್‌ ವಿರುದ್ಧ ಯಾವ ದೂರುಗಳು ಬಂದಿಲ್ಲ. ಆದರೆ ಇಲ್ಲಿ ಔಷಧ ತ್ಯಾಜ್ಯವನ್ನು ಸಮರ್ಪಕವಾಗಿ ಮಾಡಿಲ್ಲದಿರುವುದು ಕಂಡುಬಂದಿದೆ. ತ್ಯಾಜ್ಯ ವಿಲೇವಾರಿಯನ್ನು ಸಮರ್ಪಕವಾಗಿ ಮಾಡಲು ಅಲ್ಲಿನ ವೈದ್ಯ ಡಾ| ವಿಶ್ವನಾಥ್‌ ಅವರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿಗಳ ಕಚೇರಿಯ ಅಧಿಕಾರಿ ಮಲ್ಲಿಕಾರ್ಜುನ್‌ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next