ನಡೆದಿದ್ದು, ಪರಿಹಾರ ಧನ ಅವೈಜ್ಞಾನಿಕವಾಗಿದೆ. ಹಾಗಾಗಿ, ಜಿಲ್ಲಾ ಧಿಕಾರಿಗಳು ಸಮಾಲೋಚನಾ ಸಭೆ ಕರೆದು ಭೂಮಿ ಕಳೆದುಕೊಳ್ಳುವ ರೈತರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕೆಂದು ಯಗಟಿ ಜಿಪಂ ಸದಸ್ಯ ಶರತ್ ಕೃಷ್ಣಮೂರ್ತಿ ಒತ್ತಾಯಿಸಿದರು.
Advertisement
ಪ್ರವಾಸಿ ಮಂದಿರದಲ್ಲಿ ನಡೆದ ಭೂಮಿ ಕಳೆದುಕೊಂಡ ರೈತರ ಸಭೆಯಲ್ಲಿ ಮಾತನಾಡಿದರು.ರಾಷ್ಟ್ರೀಯ ಹೆದ್ದಾರಿಗಾಗಿ ವಶಪಡಿಸಿಕೊಂಡಿರುವ ಜಮೀನುಗಳು ಕಸಬಾ ಹೋಬಳಿಯ ತಂಗಲಿ, ಮಲ್ಲಪ್ಪನಹಳ್ಳಿ, ಕೆ.ತಿಮ್ಮಾಪುರ, ಮಲ್ಲೇಶ್ವರ, ತುರುವನಹಳ್ಳಿ, ಉಳ್ಳಿನಾಗರೂ ಗ್ರಾಮ ಮತ್ತು ಬೀರೂರು ಕಾವಲು ಕಂದಾಯ ಗ್ರಾಮಗಳಾಗಿವೆ. ಈ ಗ್ರಾಮಗಳು ಕಡೂರು ಪುರಸಭೆ ವ್ಯಾಪ್ತಿಯಿಂದ ಒಂದುವರೆ ಕಿ.ಮೀ. ಒಳಗೆ ಇವೆ. ಕೆ.ತಿಮ್ಮಾಪುರ ಗ್ರಾಮದಲ್ಲಿ ವಶಪಡಿಸಿಕೊಂಡಿರುವ ಆಸ್ತಿಯಲ್ಲಿ ಪ್ರತಿ ಚ.ಮೀಟರ್‌ಗೆ 485 ರೂ. ಮೂಲ ದರಕ್ಕೆ ಲೆಕ್ಕ ಹಾಕಿ ಕೆಲವು ರೈತರಿಗೆ ಪರಿಹಾರ ನಿಗ ಪಡಿಸಿ ಪಾವತಿ ಸಹ ಮಾಡಲಾಗಿದೆ. ಆದರೆ, ಕೆ.ತಿಮ್ಮಾಪುರ
ಆಸ್ತಿಯಿಂದ ಸುಮಾರು 100 ಮೀ. ಸಮೀಪ ಇರುವ ಮಲ್ಲಪ್ಪನಹಳ್ಳಿ ಗ್ರಾಮದ ಆಸ್ತಿಗಳಿಗೆ ಪ್ರಾಧಿಕಾರದವರು ಸುಮಾರು 323 ರೂ. (ಪ್ರತಿ ಚ.ಮೀ.ಗೆ)ಮತ್ತು ಮಲ್ಲೇಶ್ವರ ಗ್ರಾಮದ ಆಸ್ತಿಗಳಿಗೆ 293 ರೂ. ಮೂಲ ದರ ನಿಗದಿ ಪಡಿಸಿ ಪಾವತಿ ಮಾಡಿರುವ ಅನೇಕ ಉದಾಹರಣೆ
ಗಳಿವೆ ಎಂದು ತಿಳಿಸಿದರು.
Related Articles
ಕನಿಷ್ಟ 80 ವರ್ಷಗಳೆಂದು ಅಂದಾಜಿಸಬಹುದಾಗಿದೆ.
Advertisement
ಇದರಂತೆ ಒಂದು ಅಡಕೆ ಮರಕ್ಕೆ 75 ಸಾವಿರ ದಿಂದ 1.5 ಲಕ್ಷ ರೂ. ನಿಗದಿಪಡಿಸಬೇಕು. ಪ್ರತಿತೆಂಗಿನ ಮರಕ್ಕೆ 3 ಲಕ್ಷ ರೂ. ನಿಗದಿಪಡಿಸಬೇಕೆಂದು ಆಗ್ರಹಿಸಿದರು. ಎಪಿಎಂಸಿ ನಿರ್ದೇಶಕ ಲಕ್ಕಣ್ಣ ಮಾತನಾಡಿ, 2016(ಕಂದಾಯ)ರಲ್ಲಿ ಜಮೀನಿಗೆ ಇದ್ದ ದರವನ್ನೇ ಈಗಲೂ ನಿಗದಿಪಡಿಸಿರುವುದು ರೈತರಿಗೆ ಸಮಸ್ಯೆ ತಂದೊಡ್ಡಿದೆ. ಇವೆಲ್ಲ ಪಿತಾರ್ಜಿತ ಆಸ್ತಿಗಳಾಗಿದ್ದು, ವ್ಯವಹಾರ ಹೆಚ್ಚಿಗೆ ನಡೆದಿಲ್ಲ ಎಂಬ ಅಂಶವನ್ನು ಪರಿಗಣಿಸಿಲ್ಲ ಎಂದರು. ಮಲ್ಲೇಶ್ವರ ಗ್ರಾಮದ ಒಂದು ಎಕರೆ ಭೂಮಿಗೆ 13 ಲಕ್ಷ ರೂ. ಪರಿಹಾರ ನೀಡಲಾಗಿದೆ. ಇದು ಪುರಸಭೆ ವ್ಯಾಪ್ತಿಗೆ ಸೇರುವುದರಿಂದ ಈ ಜಮೀನನ್ನೇ ನಿವೇಶನಗಳಾಗಿ ಮಾರ್ಪಡಿಸಿದರೆ ಲಕ್ಷಾಂತರ ರೂ. ರೈತರಿಗೆ ದೊರೆಯಲಿದೆ. ಇಂತಹ ಪ್ರಕರಣಗಳಿದ್ದರೆ ಡಿಸಿ ನ್ಯಾಯಾಲಯದಲ್ಲಿ ತಕರಾರು ಅರ್ಜಿ ಸಲ್ಲಿಸಬೇಕೆಂದು ರೈತರಿಗೆ ಕರೆ ನೀಡಿದರು. ಕಡೂರು
ಪುರಸಭೆ ಸದಸ್ಯ ಈರಳ್ಳಿ ರಮೇಶ್, ತೋಟದ ಮನೆ ಮೋಹನ್, ದಂಡವತಿ ಬಾಬಣ್ಣ, ಪೇಟೆಯ ತಮ್ಮಯಣ್ಣ ಮುಂತಾದವರು ಹಾಜರಿದ್ದರು.