Advertisement

ಬೀರೂರು ಪುರಸಭೆಗೆ ಶೇ.77 ಮತದಾನ

03:54 PM Nov 13, 2019 | Team Udayavani |

ಕಡೂರು: ಬೀರೂರು ಪುರಸಭೆಯ 22 ವಾರ್ಡ್‌ಗಳಿಗೆ ಮಂಗಳವಾರ ನಡೆದ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಶೇ.77.84ರಷ್ಟು ಮತ ಚಲಾವಣೆಯಾಗಿದೆ.

Advertisement

ಪಟ್ಟಣದ 23 ವಾರ್ಡ್‌ಗಳ ಪೈಕಿ 16ನೇ ವಾರ್ಡ್‌ನಲ್ಲಿ ಏಕೈಕ ಅಭ್ಯರ್ಥಿ ಕಣದಲ್ಲಿ ಇದ್ದುದರಿಂದ ನಡೆಯಲಿಲ್ಲ. ಅದನ್ನು ಹೊರತುಪಡಿಸಿ ಒಟ್ಟಾರೆ 17,866 ಮತದಾರರ ಪೈಕಿ 13,908 ಮಂದಿ ಮತ ಚಲಾಯಿಸಿದ್ದಾರೆ. 22 ವಾರ್ಡ್‌ಗಳಿಗೆ ಒಟ್ಟು 22 ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಅಂಗವಿಕಲರಿ ಗಾಗಿ ವ್ಹೀಲ್‌ಚೇರ್‌, ಮತಗಟ್ಟೆಗಳಲ್ಲಿ ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿತ್ತು. ಪುರಸಭೆ ವತಿಯಿಂದ ಮತದಾರರ ಅನುಕೂಲ ಕ್ಕಾಗಿ ಗುರುತಿನ ಪತ್ರಗಳನ್ನು ಮನೆ ಮನೆಗೆ ವಿತರಿಸಿದ ಕಾರಣ ಮತ ಚಲಾಯಿಸುವವರು ಹೆಚ್ಚು ಪರದಾಡಬೇಕಾದ ಸಂದರ್ಭ ಒದಗಿ ಬರಲಿಲ್ಲ.

ಮತದಾರರ ಓಲೈಕೆ ಯತ್ನ: ವೃದ್ಧರನ್ನು ಮತ್ತು ಅಶಕ್ತರನ್ನು ವಾಹನಗಳ ಮೂಲಕ ಮತಗಟ್ಟೆಗಳ ಬಳಿ ಕರೆದೊಯ್ಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಎಲ್ಲೆಡೆ ಅಭ್ಯರ್ಥಿಗಳು ಎದುರು ಬದುರು ನಿಂತು ಮತ ಚಲಾಯಿಸಲು ಬರುವವರನ್ನು ಓಲೈಸುತ್ತಿದ್ದ ದೃಶ್ಯ ಕಂಡು ಬಂತು. 2 ಅತೀ ಹೆಚ್ಚು ಶೇ.87.01 ಮತಗಳು ದಾಖಲಾಗಿದ್ದರೆ, ವಾರ್ಡ್‌ 11 ಅತೀ ಕಡಿಮೆ ಶೇ.61.95ರಷ್ಟು ಮತದಾನವಾಗಿದೆ.

ಬಿಗಿ ಭದ್ರತೆ: ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಕೊಪ್ಪಳದಿಂದ ಒಂದು ಭಾರತೀಯ ಮೀಸಲು ಪಡೆ ತುಕಡಿ, ಚಿಕ್ಕಮಗಳೂರು ಸಶಸ್ತ್ರ ಮೀಸಲು ಪಡೆಯ 2 ತುಕಡಿಗಳು ಕರ್ತವ್ಯ ನಿರ್ವಹಿಸಿದವು. ಬೀರೂರು ಸರ್ಕಲ್‌ ಇನ್‌ಸ್ಪೆಕ್ಟರ್‌ ಸತ್ಯನಾರಾಯಣಸ್ವಾಮಿ, ಪಿಎಸ್‌ಐ ಕೆ.ವಿ.ರಾಜಶೇಖರ್‌ ಮತ್ತು ಸಿಬ್ಬಂದಿ ಎಲ್ಲ ವಾರ್ಡ್‌ಗಳಿಗೂ ತೆರಳಿ ಭದ್ರತೆ ಮತ್ತು ಸುರಕ್ಷತೆಯ ನಿರ್ವಹಣೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next