Advertisement

ಮಂಗಳೂರು ಪಂಪ್ ವೆಲ್ ಬಳಿ ಒಂಬತ್ತು ಮಂದಿಯ ಬಂಧನ

09:39 AM Aug 18, 2019 | Hari Prasad |

ಮಂಗಳೂರು : ಪಂಪ್ ವೆಲ್ ಬಳಿ ಇರುವ ಕಟ್ಟಡವೊಂದರಲ್ಲಿದ್ದ ಕೇಂದ್ರ ರಾಷ್ಟ್ರೀಯ ತನಿಖಾ ದಳ( NIA )ವೆಂದು ಹೇಳಿ ವಂಚಿಸುತ್ತಿದ್ದ ನಕಲಿ ತಂಡವೊಂದನ್ನು ಸಾರ್ವಜನಿಕರೇ ಪತ್ತೆ ಹಚ್ಚಿ ಅದರ ಒಂಬತ್ತು ಮಂದಿ ಸದಸ್ಯರನ್ನು ಕದ್ರಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

Advertisement

ಅವರೆಲ್ಲಾ ಸಾರ್ವಜನಿಕರಿಗೆ ತಾವು ಎನ್ಐಎ ತಂಡದವರೆಂದು ಹೇಳಿ ವಂಚಿಸುತ್ತಿದ್ದರು ಎನ್ನಲಾಗಿದೆ. ಕೇಂದ್ರ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಎಂದು ಕನ್ನಡ, ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ನಾಮ ಫಲಕ ಹಾಕಿಕೊಂಡಿದ್ದ ಕಾರು ಹಾಗೂ ಪಿಸ್ತೂಲನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಬಂಧಿತರು ಮಡಿಕೇರಿ ಕೇರಳ ಮತ್ತು ಮಂಗಳೂರು ಭಾಗದವರು ಎನ್ನಲಾಗುತ್ತಿದೆ.

ಬಂಧಿತರಾದವರು ಮೊದಲು ಉಗ್ರಗಾಮಿ ಸಂಘಟನೆಗೆ ಸೇರಿದವರು ಎಂಬ ವದಂತಿ ಹಬ್ಬಿತ್ತು. ಆದರೀಗ ದರೋಡೆ ಗ್ಯಾಂಗ್ ನವರು ಎನ್ನಲಾಗುತ್ತಿದ್ದು, ರೌಡಿ ಹಿನ್ನೆಲೆ ಹೊಂದಿದ್ದರೆನ್ನಲಾಗಿದೆ. ಈ ಮಧ್ಯೆ ಪೊಲೀಸರು ಹೆಚ್ಚಿನ ತನಿಖೆ ನಡೆಸಿದ್ದು, ಇನ್ನಷ್ಟು ಮಾಹಿತಿ ಬರಬೇಕಿದೆ.

ಹೆಚ್ಚಿದ ಆತಂಕ
ಸಂಜೆಯಷ್ಟೇ ನಗರದಲ್ಲಿ ಪೊಲೀಸರು ಬಂದೋಬಸ್ತ್ ಚುರುಕುಗೊಳಿಸಿದ್ದರು. ಈ ಮಧ್ಯೆ ಪೊಲೀಸ್ ಮೂಲಗಳು ‘ಮೈ ಬೀಟ್ ಮೈ ಪ್ರೈಡ್’ ಎಂಬ ಕಾರ್ಯಕ್ರಮದಡಿ ಈ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದವು. ಇವೆಲ್ಲವೂ ಸ್ವಲ್ಪ ಅನುಮಾನಕ್ಕೆ ಕಾರಣವಾಗಿತ್ತು. ಇದರ ಮಧ್ಯೆಯೇ ಈ ಒಂಬತ್ತು ಮಂದಿ ಬಂಧನ ಸುದ್ದಿ ಹರಡಿದ ಕೂಡಲೇ ವದಂತಿ ಮತ್ತಷ್ಟು ವೇಗಕ್ಕೆ ಹಬ್ಬಿತು. ಬಂಧಿತರು ಉಗ್ರಗಾಮಿಗಳಾಗಿರಬೇಕು ಎಂಬ ಮಾತುಗಳೂ ಕೇಳಿಬಂದಿದ್ದವು.

ಹೈ ಅಲರ್ಟ್‌ಗೂ ಶುಕ್ರವಾರ ಒಂಬತ್ತು ಮಂದಿಯನ್ನು ವಶಕ್ಕೆ ಪಡೆಯಲಾಗಿರುವುದಕ್ಕೂ ಸಂಬಂಧವಿಲ್ಲ. ಆದರೂ ಕೂಲಂಕಷ ತನಿಖೆ ನಡೆಸಲಾಗುತ್ತಿದೆ.
– ಡಾ| ಹರ್ಷ ಪಿ.ಎಸ್‌., ಪೊಲೀಸ್‌ ಆಯುಕ್ತರು

Advertisement
Advertisement

Udayavani is now on Telegram. Click here to join our channel and stay updated with the latest news.

Next