Advertisement

ಕದ್ರಿ ಕ್ಷೇತ್ರದಲ್ಲಿ ವೈಭವದ ರಥೋತ್ಸವ

12:50 AM Jan 23, 2019 | Harsha Rao |

ಮಂಗಳೂರು: ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವಾರ್ಷಿಕ ಮಹೋತ್ಸವದ ಅಂಗವಾಗಿ ಮಂಗಳವಾರ ರಥೋತ್ಸವ ನಡೆಯಿತು.

Advertisement

ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ದೇವರ ಉತ್ಸವಮೂರ್ತಿ ರಥಾರೋಹಣವಾಯಿತು. ಸಂಜೆ ಶ್ರೀಮನ್ಮಹಾರಥೋತ್ಸವ, ಬೆಳ್ಳಿ ರಥೋತ್ಸವ, ಚಂದ್ರಮಂಡಲ ಉತ್ಸವ, ಮಹಾಪೂಜೆ, ಭೂತಬಲಿ ಮತ್ತು ಕವಾಟ ಬಂಧನ ಜರಗಿತು. ಲಕ್ಷಾಂತರ ಮಂದಿ ಭಕ್ತರು ದೇವರ ದರ್ಶನ ಪಡೆದರು.

ಜ. 23ರಂದು ಅವಭೃಥ ಉತ್ಸವ ನಡೆಯಲಿದ್ದು, ಬೆಳಗ್ಗೆ 7 ಗಂಟೆಗೆ ಶ್ರೀ ಮಂಜುನಾಥ ದೇವರ ಕವಾಟೋದ್ಘಾಟನೆ ಮತ್ತು ಮಹಾಪೂಜೆ ಅನಂತರ ತುಲಾಭಾರ ಸೇವೆ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ, ತ್ರಿಶೂಲ ಸ್ನಾನ ನಡೆಯಲಿದೆ. ರಾತ್ರಿ 7.30ಕ್ಕೆ ಉತ್ಸವ ಬಲಿ, ಚಂದ್ರಮಂಡಲ ಉತ್ಸವ, ರಾತ್ರಿ 10.30ಕ್ಕೆ ಅವಭೃಥಸ್ನಾನ, ಧ್ವಜಾವರೋಹಣ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next