ಕಡೂರು: ತಾಲೂಕಿನ ಮಲ್ಲೇಶ್ವರದ ಗ್ರಾಮದೇವತೆ ಶ್ರೀ ಸ್ವರ್ಣಾಂಬಾ ದೇವಿ ಬ್ರಹ್ಮರಥೋತ್ಸವವು ಕಳೆದೆರೆಡು ವರ್ಷಗಳಿಂದಕೊರೊನಾದಿಂದ ಸರಳವಾಗಿ ಆಚರಣೆನಡೆದಿದ್ದು ಈ ಬಾರಿ ಸಾವಿರಾರುಭಕ್ತರು ಶ್ರದ್ಧಾಭಕ್ತಿಯೊಂದಿಗೆ ಸಂಭ್ರಮ-ಸಡಗರದಿಂದ ದೇವಿಯವರ ರಥವನ್ನೆಳೆದುಸಂಭ್ರಮಿಸಿದರು.
ಶುಕ್ರವಾರ ಬೆಳಗ್ಗೆ ದೇವಿಗೆ ಅಭಿಷೇಕ,ನಿತ್ಯಪೂಜೆ, ಆರ್ಚನೆ, ಶ್ರೀಮಾತೆಗೆಸಂಪ್ರದಾಯದಂತೆ ನಡೆದ ಪೂಜೆಯನಂತರ ಶ್ರೀದೇವಿಯ ಉತ್ಸವಮೂರ್ತಿಯನ್ನು ಭಕ್ತರು ಹೊತ್ತು ತಂದಾಗನೆರೆದಿದ್ದ ಸಾವಿರಾರು ಭಕ್ತರು ಉತ್ಸಾಹದಿಂದದೇವಿಯ ಮೇಲೆ ಅರಿಶಿನ- ಕುಂಕುಮಎರಚಿ ಸಂಭ್ರಮಿಸಿದರು.ಶ್ರೀ ಸ್ವರ್ಣಾಂಬಾ, ಶ್ರೀ ಅರಳೀಮರದಮ್ಮಮತ್ತು ಚೌಡ್ಲಾಪುರದ ಶ್ರೀ ಕರಿಯಮ್ಮದೇವಿಯನ್ನು ಭಕ್ತರು ದೇವಾಲಯದಮುಂಭಾಗದಲ್ಲಿ ಮೂರು ಸುತ್ತುಪ್ರದರ್ಶನ ಮಾಡಿದಾಗ ಭಕ್ತರು ಎರಚಿದಅರಿಶಿನ- ಕುಂಕುಮದಿಂದ ದೇವರನ್ನುಹೊತ್ತವರು ಅರಿಶಿನ ಕುಂಕುಮದಿಂದಮುಳುಗಿ ಹೋಗಿದ್ದ ದೃಶ್ಯ ನಯನಮನೋಹರವಾಗಿತ್ತು.
ಶಕ್ತಿ ದೇವತೆ ಶ್ರೀ ಸ್ವರ್ಣಾಂಬಾ ದೇವಿಯುಹುತ್ತದಲ್ಲಿ ನೆಲೆಸಿದ್ದು, ತವರು ಮನೆಯಿಂದಹೊರಟ ಹೆಣ್ಣು ಮಗಳಿಗೆ ಅರಿಶಿನಕುಂಕುಮ ನೀಡುವ ಭಾವನೆಯಲ್ಲಿ ಭಕ್ತರುದೇವಿಗೆ ಅರಿಶಿನ ಸಮರ್ಪಣೆ ಮಾಡುತ್ತಾರೆ.ದಕ್ಷಿಣ ಭಾರತದಲ್ಲೇ ದೇವರಿಗೆ ಅರಿಶಿನಮತ್ತು ಕುಂಕುಮ ಎರಚುವುದು ತಾಲೂಕಿನಮಲ್ಲೇಶ್ವರ ಜಾತ್ರಾ ಮಹೋತ್ಸವದಲ್ಲಿಎನ್ನುವುದು ಈ ಜಾತ್ರಾ ಮಹೋತ್ಸವದವಿಶೇಷವಾಗಿದೆ.ಬೆಳಗ್ಗೆ ಸಾಂಪ್ರದಾಯಿಕ ರಥಪೂಜೆಮತ್ತು ಬಲಿಪೂಜೆ ನಡೆದ ನಂತರಶ್ರೀದೇವಿಯ ವಿಗ್ರಹವನ್ನು ರಥಾರೋಹಣಮಾಡಿಸಲಾಯಿತು.
ನೆರೆದ ಭಕ್ತರುಬಾಳೆಹಣ್ಣುಗಳನ್ನು ರಥದ ಕಳಸಕ್ಕೆಎಸೆದು ಭಕ್ತಿ ಸಮರ್ಪಿಸುತ್ತಿದ್ದಂತೆಯೇಭಕ್ತರು ಹರ್ಷೋದ್ಗಾರಗಳ ನಡುವೆರಥವನ್ನು ಎಳೆದರು. ನಂತರ ನಾಡಿನನಾನಾ ಮೂಲೆಗಳಿಂದ ಬಂದ ಭಕ್ತರುಶ್ರೀದೇವಿಗೆ ಹೂವು- ಹಣ್ಣು ಸಮರ್ಪಿಸಿಪೂಜೆ ಸಲ್ಲಿಸಿದರು. ಶ್ರೀ ಸ್ವರ್ಣಾಂಬಾದೇವಾಲಯದ ಧರ್ಮದರ್ಶಿ ಮಂಡಳಿಅಧ್ಯಕ್ಷ ಡಾ| ಎಂ.ಟಿ.ಸತ್ಯನಾರಾಯಣ,ಸದಸ್ಯರು, ಮಲ್ಲೇಶ್ವರ ಗ್ರಾಮಸ್ಥರು ಮತ್ತುರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದಭಕ್ತರು ದೇವಿಯ ಕೃಪೆಗೆ ಪಾತ್ರರಾದರು.