Advertisement
ಕಡಿಯಾಳಿ ದೇಗುಲದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಶರ್ವಾಣಿ ಮಂಟಪದಲ್ಲಿ ರವಿವಾರ ಹಮ್ಮಿಕೊಂಡ ದೇವಸ್ಥಾನಗಳ ವ್ಯವಸ್ಥಾಪನ ಸಮಿತಿ ಅಧ್ಯಕ್ಷ, ಸದಸ್ಯರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಗುಲಗಳ ಮೂಲಕ ಸಮಾಜವನ್ನು ಕಟ್ಟುವ ಕೆಲಸ ವಾಗಬೇಕು. 3 ವರ್ಷಗಳಿಂದ ಧಾರ್ಮಿಕ ದತ್ತಿ ಇಲಾಖೆಯಿಂದ ಅದ್ಭುತ ಕೆಲಸಗಳಾಗಿವೆ. ವ್ಯವಸ್ಥಾಪನ ಸಮಿತಿಗಳ ಅಧಿಕಾರವಧಿಯನ್ನು 5 ವರ್ಷಕ್ಕೇರಿಸುವತ್ತ ಪ್ರಯತ್ನಿಸಲಾಗುತ್ತಿದೆ ಎಂದರು.
ದೇಗುಲಗಳ ಲೆಕ್ಕಪತ್ರ, ಹಣಕಾಸು ವ್ಯವಹಾರಕ್ಕೆ ಕೇಂದ್ರೀಕೃತ ಸಾಫ್ಟ್ ವೇರ್ ಸಿಸ್ಟಮ್ ಅಳವಡಿಸಲಾಗಿದ್ದು, ಅದನ್ನು ಇನ್ನಷ್ಟು ಮೇಲ್ದರ್ಜೆಗೇರಿಸುವ ಗುರಿ ಇದೆ. “ಭಾರತ್ ಗೌರವ್ ಯೋಜನೆ’ಯನ್ನು ಜಾರಿಗೆ ತರಲಾಗಿದ್ದು, ಇದರ ಮೂಲಕ ರೈಲಿನಲ್ಲಿ ಯಾತ್ರಾ ಸ್ಥಳಗಳಿಗೆ ತೆರಳುವ ಯಾತ್ರಾರ್ಥಿಗಳಿಗೆ ಮತ್ತು ಕಾಶೀಯಾತ್ರೆಗೆ ತೆರಳು ವವ ರಿಗೆ 5 ಸಾವಿರ ರೂ. ನೆರವು ಒದಗಿಸಲಾಗುತ್ತಿದೆ. ಅಲ್ಲದೆ ಸಪ್ತಪದಿ ಯೋಜನೆಯನ್ನು ಜನತೆ ಸದುಪ ಯೋಗಿಸಿ ಕೊಳ್ಳಬೇಕು ಎಂದವರು ತಿಳಿಸಿದರು. ವ್ಯವಸ್ಥಾಪನ ಸಮಿತಿಗೆ ಶಕ್ತಿ ಬೇಕು
ದೇಗುಲದ ಅಭಿವೃದ್ಧಿಗಾಗಿ ವ್ಯವ ಸ್ಥಾಪನ ಸಮಿತಿಯನ್ನು ನೇಮಿಸಲಾಗುತ್ತದೆ. ಹಿಂದೆ ಈ ಸಮಿತಿಯ ಅಧಿ ಕಾರಾವಧಿ ಐದು ವರ್ಷ ಇತ್ತು, ಪ್ರಸ್ತುತ 3 ವರ್ಷಕ್ಕೆ ಇಳಿಸಲಾಗಿದೆ. ಇದರಿಂದ ಯಾವುದೇ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ದೇಗುಲದ ಅಭಿ ವೃದ್ಧಿಗೆ ಸಂಬಂಧಪಟ್ಟಂತೆ ನಿರ್ಣಯ ತೆಗೆದುಕೊಳ್ಳಲು ಸಮಿತಿಗೆ ಪೂರ್ಣಾಧಿ ಕಾರದ ಅಗತ್ಯವಿದೆ. ದೇಗುಲಗಳು ಆರೋಗ್ಯ, ಶಿಕ್ಷಣ, ಧಾರ್ಮಿಕ ಕೈಂಕರ್ಯ, ಸಮಾಜಮುಖೀಯಾಗಿ ಕೆಲಸ ಮಾಡಲು ಸರಕಾರ ಮತ್ತು ಇಲಾಖೆ ಅನುವು ಮಾಡಿಕೊಡಬೇಕಾಗಿದೆ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ಅಭಿಪ್ರಾಯಪಟ್ಟರು.
“ಕರಾವಳಿ ಜಿಲ್ಲೆಗಳ ದೇವಸ್ಥಾನಗಳ ಒಕ್ಕೂಟ’ ರಚಿಸುವ ಚಿಂತನೆ ನಡೆಸ ಲಾಗಿದ್ದು, ಈ ಬಗ್ಗೆ ಎಲ್ಲ ದೇವಸ್ಥಾನಗಳ ವ್ಯವಸ್ಥಾಪನ ಸಮಿತಿಯ ಸಹಕಾರ ಬೇಕು ಎಂದು ಅಧ್ಯಕ್ಷತೆ ವಹಿಸಿದ್ದ ಕಡಿಯಾಳಿ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ| ಕಟ್ಟೆ ರವಿರಾಜ್ ವಿ. ಆಚಾರ್ಯ ಹೇಳಿದರು.
Related Articles
Advertisement
ದೇವಸ್ಥಾನಗಳ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು, ಸದಸ್ಯರು ಅತಿಥಿ ಗಳೊಂದಿಗೆ ಸಂವಾದ ನಡೆಸಿದರು. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಕೆ. ಮೋಹನ ಉಪಾಧ್ಯ ಸ್ವಾಗತಿಸಿ, ಪ್ರಸ್ತಾವನೆಗೈದರು. ವಾಸುದೇವ ಭಟ್ ಪೆರಂಪಳ್ಳಿ ನಿರೂಪಿಸಿದರು. ಕೆ. ನಾಗರಾಜ ಶೆಟ್ಟಿ ವಂದಿಸಿದರು.
ಪ್ರಮುಖ ನಿರ್ಣಯಗಳು– ವ್ಯವಸ್ಥಾಪನ ಸಮಿತಿಗೆ ದೇವಸ್ಥಾನದ ಆಡಳಿತ ನಡೆಸಲು ಹೆಚ್ಚಿನ ಸ್ವಾಯತ್ತತೆ ಬೇಕು.
– ದೇವಸ್ಥಾನಗಳ ಭೂ ದಾಖಲೆ ಗಳಲ್ಲಿ ಆಯಾ ದೇವಸ್ಥಾನಗಳ ಹೆಸರೇ ಸ್ಪಷ್ಟವಾಗಿ ನಮೂದಿ ಸಲ್ಪಡ ಬೇಕು.
-ಮುಜರಾಯಿ ಇಲಾಖೆಯಲ್ಲಿ ಶೀಘ್ರ ಖಾಯಂ ಅಧಿಕಾರಿಗಳ ನೇಮಕವಾಗಬೇಕು.
– ಮಹತ್ವದ ಕಡತಗಳ ವಿಲೇವಾರಿ ಯಲ್ಲಿ ವಿಳಂಬ ಧೋರಣೆ ಕೊನೆಯಾಗಬೇಕು.
-“ಎ’ ಗ್ರೇಡ್ ದೇವಸ್ಥಾನಗಳು ವಾರ್ಷಿಕ ಆದಾಯದಿಂದ ಜೀರ್ಣ ವಾಗಿರುವ ದೇವಸ್ಥಾನ ಗಳನ್ನು ದತ್ತು ಪಡೆದು ಜೀರ್ಣೋದ್ಧಾರಗೊಳಿಸಲು ವ್ಯವಸ್ಥೆ ರೂಪಿಸಬೇಕು.
– ದೊಡ್ಡ ದೇವಸ್ಥಾನಗಳ ದೈನಂದಿನ ವ್ಯವಹಾರಗಳಲ್ಲಿ ಸೋರಿಕೆ ತಡೆಗಟ್ಟಿ ಪಾರದರ್ಶಕತೆ ಕಾಯ್ದು ಕೊಳ್ಳಲು ಏಕರೂಪದ ತಂತ್ರಜ್ಞಾನ ಅಳವಡಿಸಬೇಕು. ಸಾವಿರಾರು ಭಕ್ತರ ಭೇಟಿ
ಕಡಿಯಾಳಿ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ದಿನೇ ದಿನೇ ಭಕ್ತರ ಆಗಮನ ಹೆಚ್ಚುತ್ತಿದೆ. ಕಡಿಯಾಳಿ ದೇವಸ್ಥಾನ ಕೂಡುವ ಕಲ್ಸಂಕ- ಮಣಿಪಾಲ ರಾ.ಹೆ.ಯಲ್ಲಿ ವಾಹನ, ಭಕ್ತರ ದಂಡು ಕಂಡುಬರುತ್ತಿದೆ. ಜೂ. 1ರಂದು 4,000 ಭಕ್ತರು ಭೋಜನ ಪ್ರಸಾದ ಸ್ವೀಕರಿಸಿದ್ದರು. ಅನಂತರ ಹೆಚ್ಚುತ್ತ ಬಂದು ಜೂ. 5ರಂದು ಮಧ್ಯಾಹ್ನ 16,000 ಮತ್ತು ರಾತ್ರಿ 4,000 ಭಕ್ತರು ಭೋಜನ ಸ್ವೀಕರಿಸಿದರು. ಕಡಿಯಾಳಿ ಹಿ.ಪ್ರಾ. ಶಾಲೆ, ಶರ್ವಾಣಿ ಮಂಟಪದಲ್ಲಿ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ. ಜೂ. 9ರ ವರೆಗೆ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಸ್ಥಾನದ ಪ್ರಕಟನೆ ತಿಳಿಸಿದೆ.