Advertisement
ಸಮಗ್ರ ಜೀರ್ಣೋದ್ಧಾರಗೊಳ್ಳುತ್ತಿ ರುವ ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಪ್ರಯುಕ್ತ ‘ಮನೆಮನೆ ಭಜನೆ -ಗ್ರಾಮ ಭಜನೆ’ಯನ್ನು ಶನಿವಾರ ಶ್ರೀಪಾದರು ಉದ್ಘಾಟಿಸಿ ಆಶೀರ್ವಚನ ನೀಡಿದರು.
Related Articles
Advertisement
ಅರ್ಚಕ ದುರ್ಗಾಪ್ರಸಾದ್ ಉಪಾ ಧ್ಯಾಯ ಮತ್ತು ಶಾಂತಿ ಸುಧೀಂದ್ರ ತುಮಕೂರು ಅವರು ಸುಬ್ರಹ್ಮಣ್ಯ ದೇವರ ಗುಡಿಗೆ ಸ್ವರ್ಣಕಲಶದ ಬಾಬ್ತು 60 ಗ್ರಾಂ ಚಿನ್ನವನ್ನು ಸಮರ್ಪಿಸಿದರು.
ನಿತ್ಯ 60 ಮನೆಗಳಲ್ಲಿ ಭಜನೆ
ಮೊದಲ ದಿನ ಸುಮಾರು 65 ಮನೆಗಳಲ್ಲಿ ಭಜನೆ ನಡೆಯಿತು. ಪ್ರತೀ ಭಜನೆ ತಂಡದಲ್ಲಿ ತಲಾ 30 ರಿಂದ 40ರ ತನಕ ಮಹಿಳೆಯರು, ಮಕ್ಕಳು, ಯುವಕರು, ಹಿರಿಯರು ವಿಶೇಷ ಆಸಕ್ತಿಯಿಂದ ಪಾಲ್ಗೊಂಡರು. ಇಂತಹ ಐದು ತಂಡ ನಿತ್ಯ 60 ಮನೆಗಳನ್ನು ಭಜನೆ ಮೂಲಕ ಸಂಪರ್ಕಿಸಲಿದೆ. ಒಂದು ತಿಂಗಳ ಕಾಲ ಇದು ನಡೆಯಲಿದೆ. ಪ್ರತಿಯೊಂದು ಮನೆಯಲ್ಲಿ ದೀಪ ಹಚ್ಚಿ, ರಂಗವಲ್ಲಿ ಬಿಡಿಸಿ ಊದುಬತ್ತಿ ಹಚ್ಚಿ ಹೃದಯಾಂತರಾಳದಿಂದ ಸ್ವಾಗತಿಸಲಾಯಿತು. ಕೆಲವು ಮನೆಯಲ್ಲಿ ಹಣ್ಣು-ಹಂಪಲುಗಳೊಂದಿಗೆ ಪಾನಕದ ವ್ಯವಸ್ಥೆ ಮಾಡಿದ್ದರು. ಭಜನೆ ತಂಡದವರು ಮನೆಮನೆಗೆ ಶ್ರೀದೇವರ ಕುಂಕುಮ ಪ್ರಸಾದ ಪಂಚಕಜ್ಜಾಯ ಕಟ್ಟು, ಭಜನ ಪುಸ್ತಕವನ್ನು ಮತ್ತು ಬ್ರಹ್ಮಕಲಶೋತ್ಸವದ ಸ್ಟಿಕ್ಕರ್ ನೀಡುತ್ತಾರೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ತಂಡದ ಮುಖ್ಯಸ್ಥರಾದ ಜೀವರತ್ನ ದೇವಾಡಿಗ, ಗೀತಾ ನಾಯಕ್, ಸುಮಾ ಉದಯ, ಅಶ್ವಿನಿ ಪೈ, ಶಕುಂತಳಾ ಶೆಟ್ಟಿಯವರಿಗೆ ಪ್ರಸಾದದ ಪರಿಕರಗಳನ್ನು ಹಸ್ತಾಂತರಿಸಿದರು.