Advertisement

ಪತ್ನಿಯನ್ನು ಕೆಎಎಸ್ ಅಧಿಕಾರಿಯಯನ್ನಾಗಿಸಿದ್ದ ಕಡ್ಡಿ ಸೀನಾ ಕೋವಿಡ್ ಗೆ ಬಲಿ

10:36 AM May 27, 2021 | Team Udayavani |

ಶಿವಮೊಗ್ಗ: ಆತ ಸೀನಾ ಅಲಿಯಾಸ್ ಕಡ್ಡಿ ಸೀನಾ, ತನ್ನ ಅಕ್ಕನ ಮಗಳನ್ನೇ ವಿವಾಹವಾಗಿದ್ದ. ತಾನು ಓದಿಲ್ಲ ಆದರೆ ತನ್ನ ಪತ್ನಿಯಾದರೂ ಚೆನ್ನಾಗಿ ಓದಿ ದೊಡ್ಡ ಅಧಿಕಾರಿಯಾಗಬೇಕು ಎಂದು ಕನಸು ಕಂಡಿದ್ದ. ಆದರೆ ಕನಸು  ನನಸಾಗಿ ಕೆಲವೇ ದಿನಗಳಲ್ಲಿ ಸೀನಾ ಕೋವಿಡ್ ಗೆ ಬಲಿಯಾಗಿದ್ದಾರೆ.

Advertisement

ಶಿವಮೊಗ್ಗದ ಸವಾರ್ ಲೈನ್ ರಸ್ತೆಯ ಸೀನಾ ಅಲಿಯಾಸ್ ಕಡ್ಡಿ ಸೀನಾ ಮೃತ ದುರ್ದೈವಿ.

ಇದನ್ನೂ ಓದಿ:ಕೋವಿಡ್ ನಿಧಿಗೆ ದಾನ ಮಾಡಲು ತನ್ನ ಪ್ರೀತಿಯ ಆಡುಗಳನ್ನು ಮಾರಿದ 61 ರ  ವೃದ್ಧೆ.!

ನಾನಂತೂ ಓದಿಲ್ಲ ಹಾಗಾಗಿ ಹೆಂಡತಿಯನ್ನು ಕೆಎಎಸ್ ಅಧಿಕಾರಿಯನ್ನಾಗಿಸಬೇಕು‌ ಎಂದು ಸೀನಾ ಕನಸುಕಂಡಿದ್ದ‌ರು. ಹೀಗಾಗಿ ಹೆಂಡತಿಗೆ ಹಿಂದಿನಿಂದಲೂ ಕೆಎಎಸ್ ಪೂರ್ವಬಾವಿ ತರಬೇತಿ ಕೊಡಿಸಿದ್ದ. ಇದರಂತೆ ಚೆನ್ನಾಗಿ ಓದಿದ ಪತ್ನಿ ಅಶ್ವಿನಿ ಕಳೆದ ವರ್ಷ ಕೆಎಎಸ್ ಪಾಸ್ ಮಾಡಿ ಆರು ತಿಂಗಳ ಹಿಂದೆ ಬೆಂಗಳೂರಿನಲ್ಲಿ ತಹಸೀಲ್ದಾರ್ ಹುದ್ದೆಗೇರಿದ್ದರು. ಆದರೆ ಇದೀಗ ಸೀನಾ ಕರೋನಾ ಸೋಂಕಿನಿಂದ ಮೃತಪಟ್ಟಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next