Advertisement

ಕೃಷಿ ಭೂಮಿ ಮಣ್ಣಿನ ಶೋಷಣೆ ಬಗ್ಗೆ ಚಿಂತನೆ ಅಗತ್ಯ : ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ

10:07 PM Jul 09, 2022 | Team Udayavani |

ರಬಕವಿ-ಬನಹಟ್ಟಿ: ಭಾರತದಲ್ಲಿಯ ಶೇ. 23 ಭೂಮಿ ಇಂದು ಬಿತ್ತನೆ ಮಾಡಲು ಅಯೋಗ್ಯವಾಗಿದೆ. ಇನ್ನೂ ಮುಂದಿನ ದಿನಗಳಲ್ಲಿ ಮತ್ತೆ ಶೇ. 18 ಭೂಮಿ ಬಿತ್ತನೆಗೆ ಬರುವುದಿಲ್ಲ. ರೈತರು ಮಣ್ಣಿನ ಸಂರಕ್ಷಣೆ ಕುರಿತು ಚಿಂತನೆ ಮಾಡುತ್ತಿಲ್ಲ. ನಮ್ಮ ರೈತರ ಮಣ್ಣು ತೀವ್ರ ನಿಗಾ ಘಟಕದಲ್ಲಿದೆ. ಆದ್ದರಿಂದ ನಮ್ಮ ರೈತರು ಬೇರೆ ಯಾವುದೆ ವಿಷಯದ ಬಗ್ಗೆ ವಿಚಾರ ಮಾಡದೆ ಮಣ್ಣಿನ ಶೋಷಣೆ ತಡೆಗಟ್ಟಿ ಅದನ್ನು ಸತ್ವಯುತವನ್ನಾಗಿ ಮಾಡಲು ಚಿಂತನೆ ಮಾಡಬೇಕು ಎಂದು ಕೊಲ್ಲಾಪುರ ಕಣೇರಿಯ ಸಿದ್ಧಗಿರಿ ಸಂಸ್ಥಾನ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ನುಡಿದರು.

Advertisement

ಶನಿವಾರ ಅವರು ಸ್ಥಳೀಯ ಭದ್ರನವರ ಕಲ್ಯಾಣ ಮಂಟಪದಲ್ಲಿ ಸಿದ್ಧಗಿರಿ ಸಂಸ್ಥಾನ ಮಠ ಹಾಗೂ ರಬಕವಿಯ ಡಾ.ಪದ್ಮಜೀತ ನಾಡಗೌಡ ಪಾಟೀಲ ಫೌಂಢೇಶನ್ ಹಮ್ಮಿಕೊಂಡ ರೈತ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಲ್ಲಕ್ಕಿಂತ ಮುಖ್ಯವಾಗಿ ರೈತರಲ್ಲಿ ನಾನು ಒಕ್ಕಲಿಗೆ ಎಂಬ ಕೀಳರಿಮೆ ಬೇಡ. ನಾವು ಮಾಡುವ ಒಕ್ಕಲುತನದ ಬಗ್ಗೆ ನಮ್ಮಲ್ಲಿ ಅಭಿಮಾನವಿರಬೇಕು. ರೈತರು ಒಕ್ಕಲುತನದ ದೊಡ್ಡ ಸಾಮಗ್ರಿಗಳಾದ ಮಣ್ಣು, ನೀರು, ಬೀಜ ಮತ್ತು ಗೊಬ್ಬರದ ಬಹಳಷ್ಟು ಕಾಳಜಿ ವಹಿಸಬೇಕು. ಮಣ‍್ಣು ಕಲ್ಲಾಗುವ ಪ್ರಕ್ರಿಯೆ ನಡೆದಿದೆ. ಮಣ್ಣಿನಲ್ಲಿಯ ಆಮ್ಲ ಮತ್ತು ಸ್ಪರ್ಶಗುಣ ಕಡಿಮೆಯಾಗುತ್ತಿದೆ. ಕೃಷಿಯಲ್ಲಿ ಮಣ‍್ಣಿನ ಆರೋಗ್ಯ ಬಹಳಷ್ಟು ಮಹತ್ವದ್ದಾಗಿದೆ. ಮಣ್ಣಿನ ರಕ್ಷಣೆಗಾಗಿ ಆಕಳುಗಳ ಶೆಗಣಿ, ಮೂತ್ರ, ಹಾಲು, ಮೊಸರು ಮತ್ತು ತುಪ್ಪದಿಂದ ಮಾಡಿದ ಪಂಚಗವ್ಯವನ್ನು ತಯಾರು ಮಾಡಿ ಭೂಮಿಗೆ ನೀಡುವುದರಿಂದ ಮಣ್ಣಿನಲ್ಲಿ ಫಲವತ್ತತೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಜವಾರಿ ಆಕಳುಗಳು ಶೆಗಣಿ ಬಹಳಷ್ಟು ಉಪಯುಕ್ತವಾಗಿದೆ. ಇದರಿಂದ 100ಕ್ಕೂ ಹೆಚ್ಚು ಪದಾರ್ಥಗಳನ್ನು ಮಾಡಲು ಸಾಧ್ಯವಾಗಿದೆ. ಭೂಮಿಯಲ್ಲಿ ಸಾಕಷ್ಟು ಗಿಡಗಳನ್ನು ಬೆಳೆಸಬೇಕು. ಸಾವಯವ ವಸ್ತುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅವುಗಳನ್ನು ನಾವೆಲ್ಲರೂ ಬಳಸಬೇಕು ಎಂದು ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಡಾ.ಎಸ್‍.ಐ. ಅಥಣಿ, ಡಾ.ಎಸ್‍.ಶಶಿಕುಮಾರ, ಡಾ.ಐ.ಜಿ.ಬಿರಾದಾರ, ಡಾ.ಎಸ್‍.ಎಂ.ಪ್ರಸನ್ನ, ಸಾಹಿತಿ ಸಿದ್ಧರಾಜ ಪೂಜಾರಿ, ಡಾ.ನಾಡಗೌಡಪಾಟೀಲ ಮಾತನಾಡಿದರು.

ಬನಹಟ್ಟಿಯ ಹಿರೇಮಠದ ಶರಣಬಸವ ಶಿವಾಚಾರ್ಯರು, ಹಳಿಂಗಳಿಯ ಕಮರಿಮಠದ ಶಿವಾನಂದ ಸ್ವಾಮೀಜಿ, ಹೊಸೂರಿನ ಶರಣರು, ಹಳಿಂಗಳಿಯ ಅವಧೂತ ಶರಣರು ಸಾನ್ನಿಧ್ಯ ವಹಿಸಿದ್ದರು. ಡಾ.ಎ.ಬಿ.ನಾಡಗೌಡಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ಭೀಮಶಿ ಮಗದುಮ್, ಬಸವರಾಜ ದಲಾಲ, ಡಿ.ಆರ್‍.ಪಾಟೀಲ, ಈಶ್ವರ ಬಿದರಿ ಇದ್ದರು.
ಮಲ್ಲಿಕಾರ್ಜುನ ಗಡೆನ್ನವರ ರೈತ ಗೀತೆ ಹಾಡಿದರು. ಡಾ.ಪದ್ಮಜೀತ ನಾಡಗೌಡ ಪಾಟೀಲ ಸ್ವಾಗತಿಸಿದರು. ಎಸ್‍.ಎಂ.ದಾಶ್ಯಾಳ ನಿರೂಪಿಸಿದರು. ರಾಜೇಶ ನೋಟದ ವಂದಿಸಿದರು.

Advertisement

ಕಾರ್ಯಕ್ರಮದಲ್ಲಿ ಶಂಕರ ಸೋರಗಾವಿ, ರಾಜಶೇಖರ ಮಾಲಾಪುರ, ಪ್ರಕಾಶ ಮಂಡಿ, ಶಂಕರ ಜಾಲಿಗಿಡದ, ಸತ್ಯಪ್ಪ ಮಗದುಮ್, ಪ್ರವೀಣ ನಾಡಗೌಡಪಾಟೀಲ, ನಿಲೇಶ ದೇಸಾಯಿ, ಹರ್ಷವರ್ಧನ ಪಟವರ್ಧನ, ಸಂಜಯ ಅಮ್ಮಣಗಿಮಠ, ಬಾಳೇಶ ಹೊಸೂರ ಸೇರಿದಂತೆ ರಬಕವಿ ಬನಹಟ್ಟಿ, ಜಮಖಂಡಿ, ಮುಧೋಳ, ಅಥಣಿ ಹಾಗೂ ರಾಯಬಾಗ ತಾಲ್ಲೂಕಿನ ರೈತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next