Advertisement

ಮೌನಯೋಗಿ ಶ್ರೀ ಕಾಡಸಿದ್ದೇಶ್ವರ ಶ್ರೀಗಳು ಲಿಂಗೈಕ್ಯ

10:06 AM Mar 16, 2020 | sudhir |

ಗುಳೇದಗುಡ್ಡ : ಸ್ಥಳೀಯ ಶ್ರೀ ಮರಡಿಮಠದ 10ನೇ ಪೀಠಾಧಿಪತಿಗಳಾದ ಮೌನಯೋಗಿ ಶ್ರೀ ಕಾಡಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು (81) ರವಿವಾರ ರಾತ್ರಿ ಲಿಂಗೈಕ್ಯರಾಗಿದ್ದಾರೆ.

Advertisement

ಶ್ರೀ ಕಾಡಸಿದ್ದೇಶ್ವರ ಶಿವಾಚಾರ್ಯ ಶ್ರೀಗಳು 1961ರಲ್ಲಿ ಶ್ರೀ ಮರಡಿಮಠದ 10ನೇ ಪೀಠಾಧಿಪತಿಗಳಾಗಿ ಅಧಿಕಾರ ವಹಿಸಿಕೊಂಡು ಶ್ರೀಮಠದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಮಹಾನ್ ಜೀವಿ. ನಡೆದಾಡುವ ದೇವರೆಂದೇ ಈ ಭಾಗದಲ್ಲಿ ಗುರುತಿಸಿಕೊಂಡಿದ್ದರು.

ಶ್ರೀಗಳು 1939 ಜನೇವರಿ 2ರಂದು ರೋಣ ತಾಲೂಕಿನ ಕಳಕಾಪುರ ಗ್ರಾಮದಲ್ಲಿ ಜನಿಸಿದ್ದಾರೆ. ಹಡಗಲಿ ಗ್ರಾಮದ ಮರಡಿಮಠದ ಮೂಲ ಮಠವಾಗಿದ್ದು, ಗುಳೇದಗುಡ್ಡ ಪಟ್ಟಣದಲ್ಲಿ ಮಠವು ಸೇರಿ 24 ಶಾಖಾ ಮಠಗಳನ್ನು ಕಾಡಸಿದ್ದೇಶ್ವರ ಶಿವಾಚಾರ್ಯ ಶ್ರೀಗಳು ಸ್ಥಾಪಿಸಿದ್ದರು.

ಅಂತಿಮ ಕ್ರೀಯ ಸಂಸ್ಕಾರ: ಕಾಡಸಿದ್ದೇಶ್ವರ ಶಿವಾಚಾರ್ಯ ಶ್ರೀಗಳ ಅಗಲಿಕೆ ಇಡೀ ಭಕ್ತ ಸಮೂಹಕ್ಕೆ ತುಂಬಲಾರದ ನಷ್ಟವಾಗಿದ್ದು, ಕಾಡಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಪಾರ್ಥಿವ ಶರೀರ ದರ್ಶನಕ್ಕೆ ಭಕ್ತಾಧಿಗಳಿಗೆ ಶ್ರೀಮಠದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಸೋಮವಾರ ಮಧ್ಯಾಹ್ನ 2ಗಂಟೆಯವರೆಗೆ ದರ್ಶನ ನಡೆಯಲಿದ್ದು, 2ಗಂಟೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ಸಂಜೆ 5ಗಂಟೆಗೆ ವೀರಶೈವ ಲಿಂಗಾಯತ ವಿಧಿಯಂತೆ ಕ್ರೀಯಾ ಸಂಸ್ಕಾರ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next