Advertisement

ಕದಲೀಪುರ ಲಕ್ಷ್ಮೀ ವೆಂಕಟೇಶ್ವರ

12:30 AM Mar 09, 2019 | |

ಜುಳುಜುಳು ಹರಿಯುವ ಶಿಂಷಾನದಿ ತಟದಲ್ಲಿರುವ ಕದಲೀಪುರ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯವು
 ಭಕ್ತರ ಪಾಲಿಗೆ ಸಕಲ ಇಷ್ಟಾರ್ಥಗಳನ್ನು ನೆರವೇರಿಸುವ ಪುಣ್ಯ ಕ್ಷೇತ್ರವಾಗಿದೆ. 

Advertisement

ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕದಲೀಪುರದಲ್ಲಿ ನಿರ್ಮಿಸಲಾಗಿರುವ ಈ ಸುಂದರ ದೇಗುಲಕ್ಕೆ ಇದು ರಾಜ್ಯದಲ್ಲಿಯೇ ಅಪರೂಪದ್ದು ಎನ್ನುವ ಹೆಗ್ಗಳಿಕೆ ಇದೆ.  ವಿಶಿಷ್ಟ ಮೂರ್ತಿಯನ್ನು ಕಣ್ತುಂಬಿಕೊಳ್ಳಲು ಪ್ರತಿನಿತ್ಯ ರಾಜ್ಯದ ವಿವಿಧೆಡೆಗಳಿಂದ ನೂರಾರು ಸಂಖ್ಯೆಯಲ್ಲಿ ಈ ಭಕ್ತರು ಆಗಮಿಸುವುದು ಇಲ್ಲಿನ ವಿಶೇಷ. 

ಚಾರಿತ್ರಿಕ ಹಿನ್ನೆಲೆ
 ಕ್ರಿ.ಶ 780ರಲ್ಲಿ ಶ್ರೀರಾಮಾನುಜಚಾರ್ಯರು ಶಿಂಷಾನದಿ ದಡದಲ್ಲಿ ಈ ದೇವಾಲಯ ಸ್ಥಾಪಿಸಿದರಂತೆ. ಅದರಲ್ಲಿ ನಾಲ್ಕು ಕಲ್ಲಿನ ಸ್ತಂಭಗಳ ನೆರವಿನಿಂದ,  ಪುಟ್ಟ ಇಟ್ಟಿಗೆಗೋಡೆಯ ದೇಗುಲ ನಿರ್ಮಿಸಿ 4ಅಡಿ ಎತ್ತರವಿರುವ ಶ್ರೀ ಲಕ್ಷಿ$¾àವೆಂಕಟೇಶ್ವರಸ್ವಾಮಿಯನ್ನು ಪ್ರತಿಷ್ಠಾಪಿಸಿದರು.  ವೆಂಕಟೇಶ್ವರಸ್ವಾಮಿಯ ಹೃದಯ ಭಾಗದಲ್ಲಿ ಲಕ್ಷಿ$¾ದೇವಿ,  ಎಡತೊಡೆಯ ಮೇಲೆ  ಭೂದೇವಿ ಹಾಗೂ ಬಲತೊಡೆ ಮೇಲೆ  ಶ್ರೀದೇವಿ ಸಮೇತ ಇದ್ದು, ತನ್ನ ಅನುಪಮ ಸೌಂದರ್ಯದಿಂದ ಮೂರ್ತಿ ಕಂಗೊಳಿಸುತ್ತಿದೆ. 

ಈ ದೇವಾಲಯ ಸ್ಥಾಪನೆಯ ಹಿಂದಿರುವ ಪೌರಾಣಿಕ ಹಿನ್ನೆಲೆ ಹುಡುಕಲು ಹೊರಟರೆ, ರೋಚಕ ಇತಿಹಾಸವೇ ಎದುರಾಗುತ್ತದೆ.

Advertisement

 ಒಮ್ಮೆ ಕದಂಬ ಮಹಾಮುನಿಗಳು ಈ ಭಾಗದಲ್ಲಿ ಸಂಚಾರ ಮಾಡುವಾಗ ಕದಲೀಪುರದ ಶಿಂಷಾ ನದಿಯ ದಡದಲ್ಲಿ ವೆಂಕಟೇಶ್ವರಸ್ವಾಮಿಯನ್ನು ಕಾಣಲು ತಪಸ್ಸನ್ನು ಮಾಡಿದರು. ಭಗವಂತವನು ಪ್ರತ್ಯಕ್ಷವಾಗಿ,  ಮಹಾಮುನಿಗಳಿಗೆ ಅಭಯ ಹಸ್ತವನ್ನು ನೀಡಿ ವರ ಕೇಳಿದಾಗ, ಕದಂಬ ಮಹಾಮುನಿಗಳು “ಪಶ್ಚಿಮ ಮುಖವಾಗಿ ಹರಿಯುತ್ತಿರುವ ಕದಂಬ ನದಿ (ಶಿಂಷಾ ನದಿ) ತೀರದಲ್ಲಿ ಭಕ್ತರ ಅಭೀಷ್ಟೆ, ಇಷ್ಟಾರ್ಥಗಳನ್ನು ನೆರವೇರಿಸಲು ಮಹಾಲಕ್ಷಿ$¾à ಸಮೇತನಾಗಿ ನೆಲಸಲು ವಿಷ್ಣುವನ್ನು ಪ್ರಾರ್ಥಿಸಿದರಂತೆ.  ಅದರಂತೆ ಶ್ರೀ ವೆಂಕಟೇಶ್ವರಸ್ವಾಮಿ ತನ್ನ ಹೃದಯಕಮಲದಲ್ಲಿ ಲಕ್ಷಿ$¾ ಸಮೇತನಾಗಿ ಇಲ್ಲಿ ನಲೆಯಾದನು ಎಂಬ ಪೌರಾಣಿಕ ಐತಿಹ್ಯವಿದೆ. 
ಹೊಯ್ಸಳರ ಕಾಲದಲ್ಲಿ ರಾಮಾನುಜ ಚಾರ್ಯರಿಂದ ನಿರ್ಮಾಣವಾಗಿದ್ದ ಈ ದೇಗುಲ ದಿನಗಳೆದಂತೆ  ಜೀರ್ಣಾವಸ್ಥೆ ತಲುಪಿತು.  ಇದನ್ನು ಮನಗಂಡ ಇದೇ ಗ್ರಾಮದವರಾದ ಉದ್ಯಮಿ ಕೆ.ಟಿ.ಶಿವರಾಮು ನೂತನ ದೇಗುಲ ನಿರ್ಮಾಣಕ್ಕೆ ಅಡಿಯಿಟ್ಟರು. 

ಈಗ, ಭಕ್ತರ ನೆರವಿನೊಂದಿಗೆ 65 ಲಕ್ಷ$ರೂಪಾಯಿ ವೆಚ್ಚದಲ್ಲಿ  ಸುಂದರ ದೇಗುಲ ನಿರ್ಮಾಣವಾಗಿದೆ.  ಪುರಾತನ ವಾಸ್ತು ಶಾಸ್ತ್ರಜ್ಞರನ್ನು ನಿರ್ಮಾಣ ಕಾರ್ಯದಲ್ಲಿ ಬಳಸಿಕೊಂಡಿದ್ದರಿಂದ ದೇವಸ್ಥಾನದ ಸೌಂದರ್ಯ ವಿಭಿನ್ನವಾಗಿ ರೂಪುಗೊಂಡಿದೆ.
 
 ಈ ದೇಗುಲದಲ್ಲಿ ಶ್ರಾವಣ ಮಾಸ, ಕಾರ್ತಿಕ ಮಾಸಗಳಲ್ಲಿ ವಿಶೇಷ ಪೂಜೆ, ಉತ್ಸವಗಳು ನಡೆಯುತ್ತವೆ. ಪ್ರತಿ ವರ್ಷ  ವೈಕುಂಠ ಏಕಾದಶಿಯಂದು ಶ್ರೀಕ್ಷೇತ್ರಕ್ಕೆ  ಸಾವಿರಾರು ಭಕ್ತರು ಆಗಮಿಸಿ ವೆಂಕಟೇಶ್ವರಸ್ವಾಮಿಗೆ ವಿಶೇಷಪೂಜೆ ಸಲ್ಲಿಸುವರು. 
ನವದಂಪತಿ  ಶಿಂಷಾನದಿಯಲ್ಲಿ ಮಿಂದು,  ಮಡಿವಸ್ತ್ರದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರೆ ಸಂತಾನಪ್ರಾಪ್ತಿ ಎಂಬ ಪುರಾತನ ನಂಬಿಕೆ ಇಲ್ಲಿ ಜನಜನಿತವಾಗಿದೆ.

ಮಾರ್ಗ-  ಬೆಂಗಳೂರಿನಿಂದ ಮೈಸೂರಿಗೆ ಹೋಗುವ ಮಾರ್ಗದಲ್ಲಿ ಸೋಮನಹಳ್ಳಿ ಬಳಿ ತುಮಕೂರು ಹೆ¨ªಾರಿಗೆ ತಿರುವು ತೆಗೆದುಕೊಳ್ಳಬೇಕು. ನಂತರ, ಹುಳುಗನಹಳ್ಳಿ ಮಾರ್ಗವಾಗಿ ಕೇವಲ 1.5 ಕಿ.ಮೀ ದೂರದಲ್ಲಿ ಈ ಸುಂದರ ದೇಗುಲವಿದೆ. 

ಬಿ.ಎಲ್‌.ಮಧುಸೂದನ

Advertisement

Udayavani is now on Telegram. Click here to join our channel and stay updated with the latest news.

Next