Advertisement
ಆಲಂಗಾರು ಚರ್ಚ್‌ನ ವಂ| ವಾಲ್ಟರ್ ಡಿ’ಸೋಜಾ, ಆಲಂಗಾರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವೇ|ಮೂ| ಈಶ್ವರ ಭಟ್ ಹಾಗೂ ಪುತ್ತಿಗೆ ನೂರಾನಿ ಮಸೀದಿಯ ಧರ್ಮಗುರು ಮೌಲಾನ ಝಿಯ್ನಾಲ್ಲಾ ವಿಶೇಷ ಪ್ರಾರ್ಥನೆಯೊಂದಿಗೆ ಉದ್ಘಾಟಿಸಿದರು. ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ್ ಎಂ. ಅಧ್ಯಕ್ಷತೆ ವಹಿಸಿದ್ದರು.
ಕಂಬಳ ಸಮಿತಿಯ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಮಾತನಾಡಿ, ಬಡಗಿನ ಬಾರಕೂರಿನಿಂದ ತೆಂಕಿನ ಚಂದ್ರಗಿರಿವರೆಗಿನ ತುಳುವರೆಲ್ಲ ಒಂದಾಗಿ ಸೇರಿದ್ದರಿಂದ ಮೂಡುಬಿದಿರೆಯಲ್ಲಿ ಕಂಬಳ ಅತ್ಯಂತ ವ್ಯವಸ್ಥಿತವಾಗಿ ನಡೆಯಲು ಸಾಧ್ಯವಾಗಿದೆ ಎಂದರು. 5 ಕೋಟಿ ರೂ: ಐವನ್
ವಿಧಾನಪರಿಷತ್ ಸದಸ್ಯ ಐವನ್ ಡಿ’ಸೋಜಾ ಮಾತನಾಡಿ, “ಕಳೆದ ಬಜೆಟ್‌ನ ಸಂದರ್ಭ ಕಂಬಳವನ್ನು ಉಳಿಸಿ ಬೆಳೆಸಲು 5 ಕೋಟಿ ರೂ.ಗಳನ್ನು ಮೀಸಲಿರಿಸಲು ತಾವು ಸರಕಾರವನ್ನು ಆಗ್ರಹಿಸಿದ್ದು ಅದಕ್ಕೆ ಮುಖ್ಯಮಂತ್ರಿ ಸಮ್ಮತಿಸಿದ್ದಾರೆ. ಕಂಬಳ ಕ್ಷೇತ್ರದ ಸಾಧಕರಿಗೆ ಕ್ರೀಡಾರತ್ನ ಪ್ರಶಸ್ತಿ ನೀಡುವ ಜತೆಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲು
ಸರಕಾರವನ್ನು ಆಗ್ರಹಿಸಿರುವುದಾಗಿಯೂ ತಿಳಿಸಿದರು.
Related Articles
ಕಂಬಳಕ್ಕೆ ರಾತ್ರಿ ಆಗಮಿಸಿದ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರು, “ಕೋಣಗಳಿಗೆ ಹೊಡೆಯುವುದಿಲ್ಲ; ಆದರೆ ಬೆತ್ತವನ್ನು ಹಿಡಿಯಲು ಬಿಡಿ’ ಎಂದು ನ್ಯಾಯಾಲಯವನ್ನು ನಾವೆಲ್ಲ ಕೋರಿಕೊಳ್ಳಬೇಕಾಗಿದೆ’ ಎಂದರು.
ಗಣ್ಯರಾದ ಕೆ.ಪಿ. ಸುಚರಿತ ಶೆಟ್ಟಿ, ಸುಜಾತಾ ಕೆ.ಪಿ., ವಂ| ಮೆಲ್ವಿನ್ ನೊರೋನ್ಹಾ, ದಿನೇಶ್ ಕುಮಾರ್ ಆನಡ್ಕ, ಜಿ. ಉಮೇಶ್ ಪೈ, ಡಾ| ರಮೇಶ್, ಪ್ರವೀಣ್ ಜೈನ್, ವಿನ್ಸೆಂಟ್ ಡಿ’ಸೋಜಾ, ಡಾ| ನಿತ್ಯಾನಂದ ಶೆಟ್ಟಿ, ಹೆರಾಲ್ಡ್ ತಾವ್ರೋ ಮೊದಲಾದವರಿದ್ದರು.
Advertisement
ಸಮಿತಿಯ ಕೋಶಾಧಿಕಾರಿ ಭಾಸ್ಕರ ಎಸ್. ಕೋಟ್ಯಾನ್ ಹಾಗೂ ಪ್ರಧಾನ ಕಾರ್ಯದರ್ಶಿ ಕೆ. ಗುಣಪಾಲ ಕಡಂಬ,ಮೇಘನಾಥ ಶೆಟ್ಟಿ ಅವರು ಕಂಬಳ ಕೋಣಗಳ ಯಜಮಾನರನ್ನು ಸೀಯಾಳ, ವೀಳ್ಯದೆಲೆ, ಅಡಿಕೆ ನೀಡಿ ಸ್ವಾಗತಿಸಿದರು. ಬೆತ್ತ ಹಿಡಿಯದೆಯೇ ಕಂಬಳ ನಡೆಯಿತು
ಸುಪ್ರೀಂ ಕೋರ್ಟ್ ಆದೇಶದಂತೆ ಬೆತ್ತ ಹಿಡಿಯದೆಯೇ ಕೋಟಿ - ಚೆನ್ನಯ ಕಂಬಳ ಯಶಸ್ವಿಯಾಗಿ ನಡೆದಿದ್ದು 146 ಜೋಡಿ ಕೋಣಗಳು ಭಾಗವಹಿಸಿದ್ದವು. ಜನಸಾಗರವೇ ಹರಿದುಬಂದು ರಾತ್ರಿ ಒಂಟಿಕಟ್ಟೆ ಆಸುಪಾಸಿನ ರಸ್ತೆಗಳಲ್ಲಿ ವಾಹನ ದಟ್ಟಣೆ ಕಂಡುಬಂತು.