ಕಡಬ : ನೂತನ ಕಡಬ ತಾಲೂಕು ಅನುಷ್ಠಾನಕ್ಕೆ ಸಂಬಂಧಿಸಿ ಕಡಬದಲ್ಲಿ ಬುಧವಾರ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ ಪುತ್ತೂರು ಸಹಾಯಕ ಕಮಿಷನರ್ ಕೃಷ್ಣಮೂರ್ತಿ ಅವರು ವಿವಿಧ ಇಲಾಖೆಗಳಿಗೆ ಜಮೀನು ಕಾದಿರಿಸಿದ ಮರ್ದಾಳ ಗ್ರಾ.ಪಂ.ಗೆ ಒಳಪಟ್ಟ ಬಂಟ್ರ ಗ್ರಾಮದ ಮುಂಚಿಕಾಪು ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ನೂತನ ತಾಲೂಕು ಕೇಂದ್ರದಲ್ಲಿ ಅಗ್ನಿಶಾಮಕ ಠಾಣೆ, ನ್ಯಾಯಾಲಯ ಸಮುಚ್ಚಯ, ಲೋಕೋಪಯೋಗಿ, ತೋಟಗಾರಿಕಾ ಇಲಾಖೆ ಸಹಿತ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಕಚೇರಿಗಳನ್ನು ತೆರೆಯಲು ಜಮೀನು ಅಗತ್ಯವಿದ್ದು, ಮುಂಚಿಕಾಪುವಿನಲ್ಲಿ ಇರುವ
ಸುಮಾರು 9 ಎಕರೆ ಜಮೀನನ್ನು ಆ ಉದ್ದೇಶಗಳಿಗಾಗಿ ಬಳಸುವ ಸಾಧ್ಯತೆಯ ಬಗ್ಗೆ ಸಹಾಯಕ ಕಮಿಷನರ್ ಮಾಹಿತಿ
ಪಡೆದುಕೊಂಡರು.
ಕಡಬ ಪ್ರಭಾರ ತಹಶೀಲ್ದಾರ್ ಅನಂತ ಶಂಕರ್, ಪುತ್ತೂರು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಜಗದೀಶ್, ತಾ| ಆರೋಗ್ಯಾಧಿಕಾರಿ ಡಾ| ಅಶೋಕ್‌ಕುಮಾರ್ ರೈ,ಕಡಬ ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ಭೂ ಮಾಪನ ಇಲಾಖೆಯ ಪರ್ಯಾವೇಕ್ಷಕ ಪ್ರಕಾಶ್, ಭೂ ಮಾಪಕ ನವೀನ್, ಗ್ರಾಮ ಕರಣಿಕ ರಂಜನ್ ಕಲ್ಕುದಿ, ಕಡಬ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ಗೌಡ ಕಜೆಮೂಲೆ ಹಾಜರಿದ್ದರು.