Advertisement
ಅವರು ಮಂಗಳವಾರ ಜರಗಿದ ರಾಮಕುಂಜದ ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ದಶಮಾ ನೋತ್ಸವ ಸಂಭ್ರಮದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು.
Related Articles
Advertisement
ಪ್ರಾಂಶುಪಾಲ ಡಾ| ಸಂಕೀರ್ತ ಹೆಬ್ಟಾರ್ ಸ್ವಾಗತಿಸಿ, ದಶಮಾನೋತ್ಸವ ಸಮಿತಿ ಅಧ್ಯಕ್ಷ ಮಾಧವ ಆಚಾರ್ ಇಜ್ಜಾವು ಪ್ರಸ್ತಾವನೆಗೈದರು. ಉಪನ್ಯಾಸಕ ಲತನ್ ರೈ ಪರಿಚಯಿಸಿದರು. ಉಪನ್ಯಾಸಕ ಮೋಹನ ಕಲ್ಲೂರಾಯ ನಿರೂಪಿಸಿ, ಉಪನ್ಯಾಸಕ ಗುರುಕಿರಣ್ ವಂದಿಸಿದರು.
ಗೌರವಾರ್ಪಣೆಎಸ್.ಎಲ್. ಭೋಜೇಗೌಡ, ಎಸ್.ಕೆ. ಆನಂದ, ಪುತ್ತೂರು ಶಾಸಕ ಸಂಜೀವ ಮಠಂದೂರು, ಮಹಾವಿದ್ಯಾಲಯದ ಅಭಿವೃದ್ಧಿಗೆ ಸಹಕರಿಸಿದ ಮಾಧವ ಆಚಾರ್ ಇಜ್ಜಾವು, ಶೇಷಪ್ಪ ರೈ, ಟಿ. ನಾರಾಯಣ ಭಟ್, ದುರ್ಗಾಪ್ರಸಾದ್ ಸುಣ್ಣಾಲ, ಪ್ರೊ| ವೇದವ್ಯಾಸ ರಾಮಕುಂಜ ಹಾಗೂ ಉಪನ್ಯಾಸಕರನ್ನು ಸಮ್ಮಾನಿಸಿ ಗೌರವಿಸಲಾಯಿತು. ಕಲಿಕೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಉಪನ್ಯಾಸಕಿ ರಮ್ಯಾ ಪ್ರತಿಭಾವಂತ ವಿದ್ಯಾರ್ಥಿಗಳ ಹೆಸರು ವಾಚಿಸಿದರು. ದಶಮಾನೋತ್ಸವದ ಸವಿನೆನಪಿಗಾಗಿ ಹೊರತಂದ ದಶ ಪ್ರಣತಿ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು ಸಿದ್ಧಗಂಗಾ ಮಠದ ಮಾದರಿಯಲ್ಲಿ ವಿದ್ಯಾಸಂಸ್ಥೆ
ಮಠದ ವತಿಯಿಂದ ರಾಜ್ಯದ ವಿವಿಧೆಡೆ ಶಿಕ್ಷಣ ಸಂಸ್ಥೆಗಳಿವೆ. ಗ್ರಾಮೀಣ ಪ್ರದೇಶ ವಾದ ರಾಮಕುಂಜದಲ್ಲಿರುವ ವಿದ್ಯಾಸಂಸ್ಥೆ ಯಲ್ಲಿ ಹಾಸ್ಟೆಲ್ ಸಹಿತ ಇನ್ನೂ ಹೆಚ್ಚಿನ ಸೌಕರ್ಯ, ಸೌಲಭ್ಯ ನೀಡಿ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ತುಮಕೂರಿನ ಸಿದ್ಧಗಂಗಾ ಮಠದ ವಿದ್ಯಾಸಂಸ್ಥೆಯ ಮಾದರಿಯಲ್ಲೇ ದೊಡ್ಡ ಪ್ರಮಾಣದಲ್ಲಿ ಬೆಳೆಸುವ ಸಂಕಲ್ಪವಿದೆ. ಈ ಮೂಲಕ ರಾಮಕುಂಜ ರಾಜ್ಯದಲ್ಲಿಯೇ ಮಾದರಿ ವಿದ್ಯಾಸಂಸ್ಥೆಯಾಗಬೇಕು. ಇದಕ್ಕೆ ಎಲ್ಲರೂ ಸಹಕರಿಸಬೇಕು. ಚಿಕ್ಕಮಗ ಳೂರಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಕೊಡಿಸಿದ 5 ಎಕ್ರೆ ಜಾಗದಲ್ಲಿ ನಡೆಯುತ್ತಿರುವ ಮಠದ ವಿದ್ಯಾಸಂಸ್ಥೆಯನ್ನು ವಸತಿ ಶಾಲೆಯನ್ನಾಗಿ ಪರಿವರ್ತಿಸುವ ಚಿಂತನೆಯೂ ಇದೆ ಎಂದು ಪೇಜಾವರ ಶ್ರೀಗಳು ಹೇಳಿದರು. 5 ಲಕ್ಷ ರೂ. ಅನುದಾನ
ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮಾತನಾಡಿ, ಆಂಗ್ಲ ಭಾಷೆಯ ವ್ಯಾಮೋಹದಿಂದಾಗಿ ರಾಜ್ಯದಲ್ಲಿ ಸರಕಾರಿ ಶಾಲೆಗಳು ಮುಚ್ಚುವ ಪರಿಸ್ಥಿತಿ ಬಂದಿದೆ. ಆದರೆ ವ್ಯಾವಹಾರಿಕವಾಗಿ ಇಂಗ್ಲಿಷ್ ಕಲಿಕೆಯೂ ಅಗತ್ಯವಿದೆ. ಈ ನಿಟ್ಟಿನಲ್ಲಿಯೇ ಸರಕಾರ ಪ್ರಾಯೋಗಿಕವಾಗಿ 1,000 ಶಾಲೆ ಗಳಲ್ಲಿ ಆಂಗ್ಲಭಾ ಷೆಯಲ್ಲಿ ಶಿಕ್ಷಣ ಆರಂಭಿ ಸುತ್ತಿದೆ. ಅದಕ್ಕೆ ಸಾಹಿತಿಗಳು ವಿರೋಧ ಸರಿಯಲ್ಲ. ಎಲ್ಲರಿಗೂ ಸಮಾನ ಶಿಕ್ಷಣ ಲಭಿಸಬೇಕು ಎಂದರು. ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಶ್ರೀ ರಾಮಕುಂಜೇಶ್ವರ ಶಿಕ್ಷಣ ಸಂಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪ ಡಿಸಿದ ಭೋಜೇಗೌಡರು, ಸಂಸ್ಥೆಯ ಅಭಿವೃದ್ಧಿಗೆ 5 ಲಕ್ಷ ರೂ. ಅನುದಾನ ನೀಡುವುದಾಗಿ ಪ್ರಕಟಿಸಿದರು.