Advertisement
ಲಾಕ್‌ಡೌನ್ ಹಿನ್ನೆಲೆಯಲ್ಲಿ ಜೂ. 28 ರಂದು ಕಡಬ ಪೊಲೀಸರು ವಾಹನ ತಪಾಸಣೆೆ ಮಾಡುತ್ತಿದ್ದ ವೇಳೆ ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಮಿನಿ ಲಾರಿ ಢಿಕ್ಕಿ ಹೊಡೆದು ಆತ ಮೃತಪಟ್ಟಾಗ ಕಿಡಿಗೇಡಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿ, ದಾನಿಗಳ ನೆರವಿನಿಂದ ನಿರ್ಮಾಣವಾಗಿದ್ದ ಪೊಲೀಸ್ ಚೌಕಿಯನ್ನು ಧ್ವಂಸ ಮಾಡಿ ವಿಕೃತಿ ಮೆರೆದಿದ್ದರು. ಹೆಚ್ಚಿನ ಬಲದೊಂದಿಗೆ ಸ್ಥಳಕ್ಕೆ ಧಾವಿಸಿದ್ದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದರು. ಘಟನೆಗೆ ಸಂಬಂಧಿಸಿ 20ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಒಟ್ಟು 16 ಜನರ ಬಂಧನವಾಗಿತ್ತು. ಘಟನೆಯ ಮರುದಿನವೇ ಪೊಲೀಸ್ ಚೌಕಿಯನ್ನು ಮರು ನಿರ್ಮಿಸುವ ಉದ್ದೇಶದಿಂದ ಲೋಕೋಪಯೋಗಿ ಇಲಾಖಾಧಿಕಾರಿಗಳ ನೇತೃತ್ವದಲ್ಲಿ ಕಂದಾಯ ಇಲಾಖಾಧಿಕಾರಿಗಳು ಸರ್ವೇ ಕಾರ್ಯ ಮಾಡಿ ಜಾಗ ಗುರುತಿಸಿಲಾಗಿತ್ತು. ದಾನಿಗಳ ನೆರವಿನಿಂದ ಮರಳು, ಜಲ್ಲಿ, ಕೆಂಪುಕಲ್ಲು ಸೇರಿದಂತೆ ಆಗತ್ಯ ಸಾಮಗ್ರಿಗಳನ್ನು ತರಿಸಿ ಚೌಕಿ ನಿರ್ಮಾಣಕ್ಕೆ ಅಡಿಪಾಯ ತೋಡುವ ಕಾರ್ಯ ಕೂಡ ನಡೆಯಿತು. ಆದರೆ ಇಷ್ಟೆಲ್ಲ ಆಗಿ ತಿಂಗಳು ಕಳೆದರೂ ತಳಪಾಯದ ಹಂತದಿಂದ ಕಾಮಗಾರಿ ಮುಂದುವರಿಯಲಿಲ್ಲ.
Related Articles
Advertisement
ಲಾಕ್‌ಡೌನ್ ವೇಳೆ ಆತೂರಿನಲ್ಲಿ ಪೊಲೀಸ್ ಚೆಕ್‌ಪೋಸ್ಟ್ ರಚನೆ ಮಾಡಲಾಗಿತ್ತು. ಬಳಿಕ ಸ್ಥಳೀಯ ಬೀಟ್ ಪೊಲೀಸ್ ಹರೀಶ್ ಅವರ ಮುತು ವರ್ಜಿಯಲ್ಲಿ ದಾನಿಗಳ ನೆರವಿನಿಂದ ತಾತ್ಕಲಿಕ ನೆಲೆಯಲ್ಲಿ ಪೊಲೀಸ್ ಚೌಕಿ ನಿರ್ಮಿಸಲಾಗಿತ್ತು. ಅದು ದನ ಕಳ್ಳರು, ಮರಗಳ್ಳರು, ಅಕ್ರಮ ದಂಧೆಕೋರರು ಹಾಗೂ ಪುಂಡು ಪೋಕರಿಗಳಿಗೆ ತಲೆನೋವಾಗಿ ಪರಿಣಮಿಸಿತ್ತು. ಚೆಕ್ ಪೋಸ್ಟ್‌ನಲ್ಲಿ ವಾಹನ ತಪಾಸಣೆ ಕಟ್ಟುನಿಟ್ಟಾದಾಗ ಅಕ್ರಮ ದಂಧೆಕೋರರು ಪೊಲೀಸರ ವಿರುದ್ಧ ಕುದಿಯಲಾರಂಭಿಸಿದರು. ಚೌಕಿ ಬಳಿ ನಡೆದ ಅಪಘಾತಕ್ಕೆ ಪೊಲೀಸರೇ ಕಾರಣವೆನ್ನುವಂತೆ ಗಲಾಟೆ ಎಬ್ಬಿಸಿದ ಕಿಡಿಗೇಡಿಗಳು ತಮಗೆ ಬೇಡವಾದ ಪೊಲೀಸ್ ಚೌಕಿಯನ್ನು ಧ್ವಂಸ ಮಾಡಿ ಪೊಲೀಸರ ವಿರುದ್ಧವೇ ಏರಿಹೋಗಿದ್ದರು.
ಆತೂರಿನಲ್ಲಿದ್ದ ತಾತ್ಕಾಲಿಕ ಪೊಲೀಸ್ ಚೌಕಿ ನಮ್ಮ ಕರ್ತವ್ಯನಿರತ ಸಿಬಂದಿಗೆ ಬಿಸಿಲು, ಗಾಳಿ ಮಳೆಯಿಂದ ರಕ್ಷಣೆ ಒದಗಿಸುತ್ತಿತ್ತು. ಆದರೆ ಅದನ್ನು ಕಿಡಿಗೇಡಿಗಳು ಪುಡಿಗೈದಿರುವುದು ದುರ ದೃಷ್ಟಕರ. ಅಲ್ಲಿ ಶೀಘ್ರದಲ್ಲಿ ಪೊಲೀಸ್ ಚೌಕಿ ನಿರ್ಮಿಸುವ ಪ್ರಯತ್ನದಲ್ಲಿದ್ದೇವೆ. –ರುಕ್ಮ ನಾಯ್ಕ, ಕಡಬ ಎಸ್ಐ