Advertisement
ಮಾರುಕಟ್ಟೆಯಲ್ಲಿ ಮೀನಿನ ತ್ಯಾಜ್ಯ ನೀರು ಅಲ್ಲಲ್ಲಿ ಸಂಗ್ರಹವಾಗಿ ನೋಡುಗರಿಗೆ ಅಸಹ್ಯ ಹುಟ್ಟಿಸುವಂತಿದೆ. ಮಾರುಕಟ್ಟೆಯ ವಾರ್ಷಿಕ ಹರಾಜಿನಲ್ಲಿ ಲಕ್ಷಗಟ್ಟಲೆ ಆದಾಯ ಸಂಗ್ರಹಿಸುವ ಕಡಬ ಗ್ರಾ.ಪಂ. ಮಾತ್ರ ಶುಚಿತ್ವದ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವುದು ಸಾರ್ವಜನಿಕರ ದೂರು.
ಮಾರುಕಟ್ಟೆಯನ್ನು ತೊಳೆದ ನೀರು ಮತ್ತು ಮೀನು ಶುಚಿಗೊಳಿಸಿದ ವೇಳೆ ಹರಿಯುವ ತ್ಯಾಜ್ಯ ನೀರನ್ನು ಸಂಗ್ರಹಿಸಲು ನಿರ್ಮಿಸಲಾಗಿರುವ ಭೂಗತ ತೊಟ್ಟಿಯಲ್ಲಿ ನೀರು ಹೊರಚೆಲ್ಲಿ ದುರ್ವಾಸನೆ ಹೊರಸೂಸುತ್ತಿದ್ದು ಗ್ರಾಹಕರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಶುಚಿತ್ವದ ಕೊರತೆಯಿಂದಾಗಿ ಗ್ರಾಹಕರು ಮಾರುಕಟ್ಟೆಗೆ ಬರಲು ಹಿಂದೇಟು ಹಾಕುತ್ತಿರುವುದರಿಂದ ವ್ಯಾಪಾರಕ್ಯೂ ಹೊಡೆತ ಬಿದ್ದಿದೆ ಎನ್ನುವುದು ವ್ಯಾಪಾರಿಗಳ ಅಳಲು. ಕ್ರಮ ಕೈಗೊಳ್ಳಲಾಗುವುದು
ಮೀನು ಮಾರುಕಟ್ಟೆಯ ವ್ಯವಸ್ಥೆಗಳನ್ನು ಸರಿಪಡಿಸಲು ರೂ. 2 ಲಕ್ಷದ ಅಂದಾಜುಪಟ್ಟಿ ತಯಾರಿಸಿ ಸಂಬಂಧಪಟ್ಟವರಿಗೆ ಕಳುಹಿಸಿಕೊಡಲಾಗಿದೆ. ಅನುದಾನ ಬಿಡುಗಡೆಯಾದ ಕೂಡಲೇ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು.
– ಬಾಬು ಮುಗೇರ ಕಡಬ ಗ್ರಾ.ಪಂ. ಅಧ್ಯಕ್ಷರು