Advertisement
ಮಹಿಳೆಯರು ಇಂದು ಬ್ಲೌಸ್‌ಗಳ ಆಯ್ಕೆಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದಾರೆ. ತಾವು ಉಡಬೇಕಾಗಿರುವ ಸೀರೆಯ ಬಣ್ಣಕ್ಕೆ ತಕ್ಕಂತೆ ಮ್ಯಾಚಿಂಗ್ ಬ್ಲೌಸ್‌ಗಳನ್ನು ಹೊಲಿಸಿಕೊಳ್ಳುವುದಲ್ಲದೆ, ಆಕರ್ಷಕವಾದ ನೆಕ್, ಕುಸುರಿಗಳನ್ನು ಬ್ಲೌಸ್‌ಗಳ ಮೇಲೆ ಅರಳಿಸಿ ಸೌಂದರ್ಯವತಿಯಾಗಿ ಕಾಣಲು ಬಯಸುತ್ತಾರೆ.
Related Articles
Advertisement
ಗುಜರಾತ್‌ನ ಕಚ್ಛ್ ಜಿಲ್ಲೆಯ ಬುಡಕಟ್ಟು ಜನಾಂಗದವರ ಸಿಗ್ನೇಚರ್ ಆರ್ಟ್ ಈ ಕಚ್ಛ್ ಎಂಬ್ರಾಯಿಡರಿ. ಭಾರತೀಯ ಪರಂಪರೆಯಲ್ಲಿ ಕಚ್ಛ್ ಎಂಬ್ರಾಯಿಡರಿಗೆ ಅಗ್ರಸ್ಥಾನ. ಕಾಟನ್ ಬಟ್ಟೆಗಳ ಮೇಲೆ ರೇಷ್ಮೆ ಅಥವಾ ಹತ್ತಿಯ ನೂಲುಗಳಿಂದ ಕನ್ನಡಿಗಳನ್ನು ಉಪಯೋಗಿಸಿ ಮಾಡುವ ಈ ಎಂಬ್ರಾಯಿಡರಿಗೆ ಅಂತಾರಾಷ್ಟ್ರೀಯ ಮಾನ್ಯತೆ ಇದೆ. ಪ್ರತಿಯೊಂದು ಎಳೆಯನ್ನೂ ಕೈಯಿಂದಲೇ ನೇಯುವ ಕಾರಣ ಡಿಸೈನ್‌ನಲ್ಲಿ ಸಾಮ್ಯತೆಯಿದ್ದರೂ ಪ್ರತಿಯೊಂದು ಬ್ಲೌಸ್‌ನಲ್ಲೂ ಅನನ್ಯತೆ ಅಥವಾ ಯುನಿಕ್‌ನೆಸ್ ಇದೆ.
90ರ ದಶಕದಲ್ಲಿ ಬಾಲಿವುಡ್‌ಗೆ ರಂಗು ತುಂಬಿದ್ದು ಈ ಕಚ್ಛ್ ಬ್ಲೌಸ್. ಒಂದು ಬಗೆಯ ಎಥಿ°ಕ್ ಲುಕ್ ಈ ಬ್ಲೌಸ್‌ಗಿದ್ದಿದ್ದು ಸುಳ್ಳಲ್ಲ. ಈಗ ಮತ್ತೆ ರೆಟ್ರೋ ಸ್ಟೈಲ್ ಥರ ಈ ಕಚ್ಛ್ ಬ್ಲೌಸ್ ಬಂದಿದೆ. ಅದಕ್ಕೆ ಕಾರಣ ಸಾಕಷ್ಟಿವೆ. ಸೀರೆಗೆ ಕಾಂಟ್ರಾಸ್ಟ್ ಬ್ಲೌಸ್ ತೊಡುವ ಸ್ಟೈಲ್ ಬಂದು ಸಾಕಷ್ಟು ಕಾಲವಾಯ್ತು. ಈ ಬ್ಲೌಸ್‌ಗಳಲ್ಲಿ ಬಣ್ಣಗಳು ನಾಲ್ಕೈದು. ನೀವು ನಾಲ್ಕೈದು ಬಗೆಯ ಸೀರೆಗೆ ಈ ಬ್ಲೌಸ್ ತೊಡಬಹುದು.
ಕಾರಣಗಳು ಏನೇ ಇರಲಿ, ಈಗ ಕಚ್ಛ್ ಸೀರೆ ಬ್ಲೌಸ್‌ಗಳು ಸಖತ್ ಫೇಮಸ್ ಆಗುತ್ತಿವೆ. ಪ್ಲೇನ್ ಕಾಟನ್ ಸೀರೆಗೆ ಈ ಕಚ್ಛ್ ಬ್ಲೌಸ್ ಹಾಕ್ಕೊಂಡರೆ ಅದರ ಗತ್ತೇ ಬೇರೆ. ತಿಳಿಬಣ್ಣದ ಲೆನಿನ್ ಸೀರೆಗಳಿಗೆ ಕಚ್ಛ್ ಬ್ಲೌಸ್ ಕಾಂಬಿನೇಶನ್ ಬ್ಯೂಟಿಫುಲ್. ಇದಲ್ಲದೇ ತಿಳಿಬಣ್ಣದ ಪ್ಲೇನ್ ಶಿಫಾನ್, ಜಾರ್ಜೆಟ್‌ಗೂ ಕಚ್ಛ್ ಬ್ಲೌಸ್ ಚೆನ್ನಾಗಿರುತ್ತೆ.
ಕಚ್ಛ್ ಬ್ಲೌಸ್‌ನಲ್ಲಿ ಸೂಕ್ಷ್ಮವಾಗಿ ನೋಡಿದರೆ ಸಾಕಷ್ಟು ವೆರೈಟಿಗಳು ಕಾಣುತ್ತವೆ. ಬ್ಲೌಸ್‌ನ ಕೈಗೆ ಮಾತ್ರ ಕಚ್ಛ್ ಡಿಸೈನ್ ಇರುವ ಬ್ಲೌಸ್‌ಗಳದ್ದು ಒಂದು ಕತೆಯಾದರೆ, ಮೈಯಿಡೀ ಎಂಬ್ರಾಯಿಡರಿ ಇರುವ ಬ್ಲೌಸ್‌ಗಳ ಚೆಂದವೇ ಬೇರೆ. ಎದ್ದುಕಾಣುವ ಗಾಢ ಬಣ್ಣಗಳು ಅಥವಾ ಪಾರಂಪರಿಕ ಡೀಸೆಂಟ್ ಲುಕ್ ಇರುವ ಹದವಾದ ಬಣ್ಣ . ನಿಮ್ಮ ದೇಹಶೈಲಿ, ವ್ಯಕ್ತಿತ್ವಕ್ಕೆ ಚೆಂದ ಕಂಡದ್ದನ್ನು ಆರಿಸಿಕೊಳ್ಳಬಹುದು. ಅಥವಾ ನಿಮ್ಮಲ್ಲಿರುವ ಸೀರೆಗೆ ತಕ್ಕಂಥ ಕಚ್ಛ್ ಬ್ಲೌಸ್‌ನ° ಆರಿಸಿಕೊಳ್ಳಬಹುದು.
ಆಯ್ಕೆ ಹೀಗಿರಲಿ.ಪ್ಲೇನ್ ಕಾಟನ್ ಸೀರೆಗೆ ಈ ಕಚ್ಛ್ ಬ್ಲೌಸ್ ಹಾಕ್ಕೊಂಡರೆ ಚೆನ್ನಾಗಿರುತ್ತೆ. ಬ್ಲ್ಯಾಕ್ ಬಟ್ಟೆಗೆ ಕಚ್ಛ್ ಡಿಸೈನ್ ಇರುವ ಬ್ಲೌಸ್‌ಗಳನ್ನು ಹೆಚ್ಚಿನ ಸೀರಗೆಗಳಿಗೆ ಮ್ಯಾಚ್ ಆಗುತ್ತವೆ. ಸಾಧಾರಣ ಮೈಕಟ್ಟಿನ ಕೃಷ್ಣವರ್ಣದವರು ನೀವಾದರೆ ಮೈತುಂಬ ಎಂಬ್ರಾಯಿಡರಿ ಇರುವ ಕಚ್ಛ್ ಬ್ಲೌಸ್ ಬೆಸ್ಟ್. .ಸ್ವಲ್ಪ ದಪ್ಪ , ಬಿಳಿ ಬಣ್ಣದವರಾಗಿದ್ದರೆ ಕೈಗೆ ಮಾತ್ರ ಕಚ್ಛ್ ಡಿಸೈನ್ ಇರುವ ಬ್ಲೌಸ್ ಚೆನ್ನಾಗಿರುತ್ತೆ.
.ಈ ಬ್ಲೌಸ್‌ನಲ್ಲೇ ರಿಚ್‌ನೆಸ್ ಇರುವ ಕಾರಣ ಸೀರೆ ಸಿಂಪಲ್ ಆಗಿರಲಿ. .ಎಥಿಕ್ ಹ್ಯಾಂಗಿಂಗ್ಸ್ ಚೆನ್ನಾಗಿರುತ್ತೆ.
.ಹೀಲ್ಸ್ ಇರೋ ಸ್ಯಾಂಡಲ್ಸ್ ತೊಟ್ಟುಕೊಳ್ಳಿ.
.ಮುಖಕ್ಕೆ ಮೇಕಪ್ ಇರಲಿ