Advertisement

ಮಾರ್ಚ್ 4ರಂದು ಉಪ್ಪಿ, ಕಿಚ್ಚ ಅಭಿನಯದ ʼಕಬ್ಜʼ ಚಿತ್ರದ ಟ್ರೈಲರ್ ರಿಲೀಸ್…

05:03 PM Mar 02, 2023 | Team Udayavani |

ಬೆಂಗಳೂರು: ಪ್ರಪಂಚದಾದ್ಯಂತದ ಕುತೂಹಲದಿಂದ ಕಾಯುತ್ತಿರುವ ಕನ್ನಡದ ಹೆಮ್ಮೆಯ “ಕಬ್ಜ” ಚಿತ್ರದ ಟ್ರೇಲರ್ ಮಾರ್ಚ್ 4 ರಂದು ಬಿಡುಗಡೆ.

Advertisement

ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ಆರ್ ಚಂದ್ರು ನಿರ್ದೇಶನದ, ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿ ಹಾಗೂ ಕಿಚ್ಚ ಸುದೀಪ ವಿಶೇಷ ಪಾತ್ರದಲ್ಲಿ ನಟಿಸಿರುವ ಕನ್ನಡದ ಹೆಮ್ಮೆಯ ಪ್ಯಾನ್ ಇಂಡಿಯಾ “ಕಬ್ಜ” ಚಿತ್ರದ ಹಾಡುಗಳು ಹಾಗೂ ಟೀಸರ್ ಈಗಾಗಲೇ ಜಗತ್ತಿನಾದ್ಯಂತ ಜನಪ್ರಿಯವಾಗಿದೆ.

ಈ ಚಿತ್ರದ ಟ್ರೇಲರ್ ಬಿಡುಗಡೆ ಯಾವಾಗ? ಎಂದು ಪ್ರಪಂಚದಾದ್ಯಂತ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. “ಕೆ.ಜಿ.ಎಫ್” ಚಿತ್ರದ ನಂತರ ವಿಶ್ವದಾದ್ಯಂತ ಕುತೂಹಲದಿಂದ ನಿರೀಕ್ಷಿಸುತ್ತಿರುವ ಚಿತ್ರ “ಕಬ್ಜ”.

ಕೊನಗೂ ಎಲ್ಲರ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಬಹು ನಿರೀಕ್ಷಿತ ಈ ಚಿತ್ರದ ಟ್ರೇಲರ್ ಬಿಡುಗಡೆಗೆ ಸಮಯ ನಿಗದಿಯಾಗಿದೆ.

ಮಾರ್ಚ್ 4 ರ ಶನಿವಾರ ಸಂಜೆ 5 ಗಂಟೆ 2 ನಿಮಿಷಕ್ಕೆ ‘ಕಬ್ಜ’ ಚಿತ್ರದ ಎಲ್ಲಾ ಭಾಷೆಗಳ ಟ್ರೇಲರ್ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಲಿದೆ.

Advertisement

ಇದನ್ನೂ ಓದಿ: ಮುಂಬೈ ತಂತ್ರಜ್ಞಾನ ಕ್ಷೇತ್ರವನ್ನು ಬೆಂಗಳೂರಿಗೆ ಬಿಟ್ಟುಕೊಟ್ಟಿತು: ಫಡ್ನವಿಸ್

Advertisement

Udayavani is now on Telegram. Click here to join our channel and stay updated with the latest news.

Next