Advertisement
ಈ ಆರೋಪಿಗಳು ತಾಲಿಬಾನ್ ಮತ್ತಿತರ ಉಗ್ರ ಸಂಘಟನೆಗಳ ಜತೆ ಸೇರಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯಕ್ಕೆ ರಾಜ್ಯ ಅಥವಾ ದೇಶಕ್ಕೆ ಅವರಿಂದ ತೊಂದರೆ ಇಲ್ಲವಾದರೂ ಮುಂದಿನ ದಿನಗಳಲ್ಲಿ ರಾಜ್ಯದ ಉಗ್ರ ಸ್ಲಿàಪರ್ ಸೆಲ್‌ಗಳ ಜತೆ ಸಂಪರ್ಕ ಸಾಧಿಸಿ ದುಷ್ಕೃತ್ಯಗಳನ್ನು ನಡೆಸುವ ಸಾಧ್ಯತೆ ಇದೆ ಎಂಬ ಆತಂಕ ಇದೆ.
Related Articles
Advertisement
ಜೈಲು ತೆರವು ವೇಳೆ ಪರಾರಿ? :
ಕಾಬೂಲ್‌ನಿಂದ ದಿಲ್ಲಿಗೆ ಬರಲು ಯತ್ನಿಸಿದ ನೌಶಿದುಲ್É ಹಮ್ಜಫರ್ ಎಂಬಾತನನ್ನು ಅಫ್ಘಾನ್ ಭದ್ರತ ಪಡೆಗಳು 2017ರಲ್ಲಿ ಬಂಧಿಸಿದ್ದವು. ಈತ 2016ರಲ್ಲಿ ಕೇರಳದಲ್ಲಿ ದಾಖಲಾಗಿದ್ದ ಐಸಿಸ್ ಉಗ್ರ ಸಂಘಟನೆ ನೇಮಕಾತಿ ಪ್ರಕರಣದ ಆರೋಪಿ. ಈತ ತಪ್ಪಿಸಿಕೊಂಡಿರುವ ಸಾಧ್ಯತೆ ಇದೆ. 2020ರ ಮಾ. 20ರಂದು ಕಾಬೂಲ್‌ನಲ್ಲಿ ನಡೆದ ಶೋರ್ ಬಜಾರ್‌ಪ್ರದೇಶದ ಗುರುದ್ವಾರದ ದಾಳಿ ವೇಳೆ 27 ಮಂದಿಯ ಹತ್ಯೆಯಾಗಿತ್ತು. ಇದರ ಹೊಣೆಯನ್ನು ಐಎಸ್-ಕೆಪಿ ಹೊತ್ತಿತ್ತು. ಇದೇ ಪ್ರಕರಣದಲ್ಲಿ ಆಗ ತಾನೇ ಸಂಘಟನೆ ಸೇರಿಕೊಂಡಿದ್ದ ಕಾಸರಗೋಡಿನ ಮುಹ್ಸಿನ್ ಎಂಬಾತನ ಕೈವಾಡ ಪತ್ತೆಯಾಗಿತ್ತು. ಈತನಲ್ಲದೆ ಇತರ ಕೆಲವು ಉಗ್ರರೂ ಜೈಲಿನಿಂದ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ.
ಬೆಂಗಳೂರು ಸಂಪರ್ಕ :
2020ರ ಅಕ್ಟೋಬರ್‌ನಲ್ಲಿ ಬೆಂಗಳೂರಿನ ವೈದ್ಯ ಡಾ| ಅಬುರ್ ರೆಹಮಾನ್ ಅಲಿಯಾಸ್ ಬ್ರೇವ್ ಸಿರಿಯಾದಲ್ಲಿರುವ ಉಗ್ರ ಸಂಘಟನೆ ಸದಸ್ಯರಿಗೆ ವೈದ್ಯಕೀಯ ಸಹಾಯ ಮತ್ತು ಶಸ್ತ್ರಾಸ್ತ್ರಗಳ ಖರೀದಿ ಬಗ್ಗೆ ಮಾಹಿತಿ ನೀಡಿದ್ದ. ಐಸ್-ಕೆಪಿ ಸಂಘಟನೆ ಸದಸ್ಯರ ಜತೆಗೂ ನಿರಂತರ ಸಂಪರ್ಕ ಹೊಂದಿದ್ದು, ತಮಿಳುನಾಡು ಮೂಲದ ಅಹ್ಮದ್ ಅಬ್ದುಲ್, ಬೆಂಗಳೂರಿನ ಇರ್ಫಾನ್ ನಾಸೀರ್ ಜತೆ ಸೇರಿ ಬೆಂಗಳೂರು, ಮಂಗಳೂರಿನ ಕೆಲವು ಯುವಕರನ್ನು ಸಿರಿಯಾಕ್ಕೆ ಕಳುಹಿಸಿದ್ದ.
ಈ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ತಾಂತ್ರಿಕ ತನಿಖೆ ವೇಳೆ ಬೆಂಗಳೂರು, ಮಂಗಳೂರಿನಲ್ಲಿ ಅಮರ್ ಅಬ್ದುಲ್ ರೆಹಮಾನ್, ಬೆಂಗಳೂರಿನ ಮಾದೇಶ್ ಪೆರುಮಾಳ್ ಅಲಿಯಾಸ್ ಅಬ್ದುಲ್ ಮತ್ತು ಅನಂತರ ಭಟ್ಕಳದ ಝಫ್ರಿ ಜವಾರ್ ದಾಮುದಿ ಎಂಬವರನ್ನು ಬಂಧಿಸಲಾಗಿತ್ತು. ಈ ಪೈಕಿ ಝಫ್ರಿ ಜವಾರ್ ದಾಮುದಿ, ಐಸಿಸ್ ಜತೆಗೆ ಅಫ್ಘಾನ್ ಮತ್ತು ಪಾಕಿಸ್ಥಾನದಲ್ಲಿ ಸಕ್ರಿಯವಾಗಿದ್ದ ಎಂಬುದು ಪತ್ತೆಯಾಗಿತ್ತು. ಬೆಂಗಳೂರಿನ ಮಾದೇಶ್ ಪೆರುಮಾಳ್, ಮಂಗಳೂರು ಮೂಲದ ಮಹಿಳೆಯ ಸಂದೇಶಗಳಿಂದ ಪ್ರೇರಣೆಗೊಂಡು ಮತಾಂತರಗೊಂಡಿದ್ದು, ಈತ ಅಘ್ಘಾನಿಸ್ಥಾನದ ಐಎಸ್-ಕೆಪಿ ಸಂಘಟನೆ ಸೇರಲು ಸಿದ್ಧತೆ ನಡೆಸಿದ್ದ ಎಂಬುದು ಎನ್‌ಐಎ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
20ಕ್ಕೂ ಹೆಚ್ಚು ಮಂದಿ ಸಕ್ರಿಯ :
ಅಫ್ಘಾನ್ ಮೂಲದ ಐಸ್-ಕೆಪಿ, ಐಸಿಸ್ ಸಂಘಟನೆಯ ಸದಸ್ಯರ ಜತೆ ನಿರಂತರ ಸಂಪರ್ಕದಲ್ಲಿರುವ ಸುಮಾರು 20ಕ್ಕೂ ಅಧಿಕ ಮಂದಿ ರಾಜ್ಯದಲ್ಲಿ ಸಕ್ರಿಯವಾಗಿದ್ದಾರೆ ಎಂದು ರಾಜ್ಯ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆಗಳ ಮೂಲಗಳು ತಿಳಿಸಿವೆ. ಈ ಶಂಕಿತರ ಚಲನವಲನಗಳು ಮತ್ತು ತಂತ್ರಜ್ಞಾನ, ತಾಂತ್ರಿಕ ಚಟುವಟಿಕೆಗಳ ಮೇಲೂ ನಿಗಾ ವಹಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
- ಮೋಹನ್ ಭದ್ರಾವತಿ