Advertisement

ಬಾಲಿವುಡ್ ಗಲ್ಲಾಪೆಟ್ಟಿಗೆಯಲ್ಲಿ ಶಾಹಿದ್ ಕಪೂರ್ “ಕಬೀರ್ ಸಿಂಗ್’ ಚಿತ್ರದ ಹವಾ!

09:03 AM Jun 27, 2019 | Nagendra Trasi |

ಮುಂಬೈ: ಶಾಹಿದ್ ಕಪೂರ್, ಕಿಯಾರಾ ಅಡ್ವಾಣಿ ಮುಖ್ಯಭೂಮಿಕೆಯಲ್ಲಿರುವ “ ಕಬೀರ್ ಸಿಂಗ್” ಸಿನಿಮಾ ಬಾಲಿವುಡ್ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಕಬೀರ್ ಸಿಂಗ್ ಚಿತ್ರ ಸಿನಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

Advertisement

ಕಬೀರ್ ಮತ್ತು ಪ್ರೀತಿಯ ಪ್ರೇಮ್ ಕಹಾನಿಗೆ ಪ್ರೇಕ್ಷಕರು ಫಿದಾ ಆಗಿದ್ದು, ಶಾಹಿದ್ ಕಪೂರ್ ಮತ್ತು ಕಿಯಾರಾ ಸರಳತೆ ಪ್ರೇಕ್ಷಕರನ್ನು ಹೆಚ್ಚು ಸೆಳೆದಿದೆ ಎಂದು ಸಿನಿ ಪಂಡಿತರು ವಿಶ್ಲೇಷಿಸಿದ್ದಾರೆ.

ಹೊಸ ವರದಿ ಪ್ರಕಾರ, ಸೋಮವಾರ ಕಬೀರ್ ಸಿಂಗ್ ಕಲೆಕ್ಷನ್ 17 ಕೋಟಿ ರೂಪಾಯಿ. ಕಳೆದ ನಾಲ್ಕು ದಿನಗಳ ಒಟ್ಟು ಕಲೆಕ್ಷನ್ 88 ಕೋಟಿ ರೂಪಾಯಿ ಎಂದು ತಿಳಸಿದೆ. ಮೊದಲ ವಾರಾಂತ್ಯದಲ್ಲಿ ಕಬೀರ್ ಸಿಂಗ್ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ 125ರಿಂದ 130 ಕೋಟಿ ರೂಪಾಯಿ ಗಳಿಕೆ ಕಂಡಿರುವುದಾಗಿ ಊಹಾಪೋಹ ಹರಿದಾಡುತ್ತಿದೆ.

ಮುಂಬೈ, ಪುಭೆ ಹಾಗೂ ದಕ್ಷಿಣದಲ್ಲಿ ಕಬೀರ್ ಸಿಂಗ್ ಸಿನಿಮಾ ಚಿತ್ರಮಂದಿರದಲ್ಲಿ ಉತ್ತಮ ಗಳಿಕೆ ಕಾಣುತ್ತಿದೆ ಎಂದು ವರದಿ ತಿಳಿಸಿದೆ. ತೆಲುಗಿನಲ್ಲಿ “ಅರ್ಜುನ್ ರೆಡ್ಡಿ” ಸಿನಿಮಾ ನಿರ್ದೇಶಿಸಿದ್ದ ಸಂದೀಪ್ ವಂಗಾ ಬಾಲಿವುಡ್ ನಲ್ಲಿ ಕಬೀರ್ ಸಿಂಗ್ ಹೆಸರಿನಲ್ಲಿ ಸಿನಿಮಾ ನಿರ್ದೇಶಿಸಿ ಯಶಸ್ಸು ಕಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next