Advertisement

ದಕ್ಷಿಣ ಭಾರತದ ಖ್ಯಾತ ವಿಲನ್, ನಟ ಕಬೀರ್ ಸಿಂಗ್, ಗಾಯಕಿ ಡಾಲಿ ನಿಶ್ಚಿತಾರ್ಥ

09:48 AM Jun 26, 2019 | Nagendra Trasi |

ಚೆನ್ನೈ: ತಮಿಳಿನ ಸೂಪರ್ ಹಿಟ್ ಸಿನಿಮಾ ವೇದಾಳಂ ವಿಲನ್ ಕಬೀರ್ ದುಹಾನ್ ಸಿಂಗ್ ಸೋಮವಾರ ಖ್ಯಾತ ಹಿನ್ನೆಲೆ ಗಾಯಕಿ ಡಾಲಿ  ಸಿಂಧು ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಕಬೀರ್ ತಮ್ಮ ಎಂಗೇಜ್ ಮೆಂಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Advertisement

ಅಜಿತ್ ಅಭಿನಯದ ವೇದಾಳಂ ಸಿನಿಮಾದಲ್ಲಿ ಕಬೀರ್ ದುಹಾನ್ ಸಿಂಗ್ ವಿಲನ್ ಪಾತ್ರದ ಮೂಲಕ ಹೆಚ್ಚು ಪ್ರಸಿದ್ಧರಾಗಿದ್ದರು. ಅಲ್ಲದೇ ವಿಜಯ್ ಸೇತುಪತಿ ಜೊತೆ ರೆಕ್ಕಾ, ರಾಘವ್ ಲಾರೆನ್ಸ್ ಜೊತೆ ಕಾಂಚನಾ 3 ತಮಿಳು ಸಿನಿಮಾದಲ್ಲಿ ನಟಿಸಿದ್ದರು.

ಕಬೀರ್ ದುಹಾನ್ ದಕ್ಷಿಣ ಭಾರತದ ಬಿಡುವಿಲ್ಲದ ವಿಲನ್ ನಟರಲ್ಲಿ ಒಬ್ಬರಾಗಿದ್ದಾರೆ. ತಮಿಳು, ಕನ್ನಡ (ಹೆಬ್ಬುಲಿ) ಹಾಗೂ ತೆಲುಗು ಸಿನಿಮಾರಂಗದಲ್ಲಿ ಕಬೀರ್ ಬಹುಬೇಡಿಕೆಯ ನಟರಾಗಿದ್ದಾರೆ. ಮುಂದಿನ ವರ್ಷ ಡೋಲೈ ಜೊತೆ ಕಬೀರ್ ಸಪ್ತಪದಿ ತುಳಿಯಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next