Advertisement

ಕಬಕ ಜಂಕ್ಷನ್‌: ಹೆದ್ದಾರಿ ಮಧ್ಯೆ ಜೀವ ಹಿಂಡುವ ಗುಂಡಿಗಳು!

11:25 AM Jul 15, 2018 | Team Udayavani |

ಕಬಕ : ಇಲ್ಲಿನ ಮಾಣಿ – ಮೈಸೂರು ಹೆದ್ದಾರಿಯಿಂದ ಕಬಕ ಸುರತ್ಕಲ್‌ ರಸ್ತೆಗೆ ಕವಲೊಡೆಯುವ ಸ್ಥಳದಲ್ಲಿ ರಸ್ತೆ ಮಧ್ಯಭಾಗದಲ್ಲೇ ಎರಡು ಬೃಹದಾಕಾರದ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸವಾರರು ಹಾಗೂ ಚಾಲಕರ ಜೀವ ಹಿಂಡುತ್ತಿವೆ.

Advertisement

ಪುತ್ತೂರಿನಿಂದ ಬರುವ ವಾಹನಗಳು ವಿಟ್ಲ ಕಡೆಗೆ ಚಲಿಸುವ ರಸ್ತೆಯ ತಿರುವಿನಲ್ಲಿ ಈ ಮರಣ ಗುಂಡಿ ಉಂಟಾಗಿದ್ದು, ವಾಹನ ತಗ್ಗಿಗೆ ಬೀಳುವ ತನಕವೂ ಚಾಲಕರಿಗೆ ಇವು ಕಾಣುವುದಿಲ್ಲ. ದ್ವಿಚಕ್ರ ವಾಹನಗಳು ಈ ಗುಂಡಿಗೆ ಇಳಿದಾಗ ಸವಾರರು ಆಯತಪ್ಪಿ ಬಿದ್ದು ಅಪಾಯ ತಂದುಕೊಂಡಿದ್ದಾರೆ. ಗುಂಡಿ ಕಂಡ ತತ್‌ಕ್ಷಣ ವಾಹನ ನಿಲ್ಲಿಸಲು ಬ್ರೇಕ್‌ ಹಾಕಿದರೆ, ಹಿಂದಿನಿಂದ ಬಂದು ಢಿಕ್ಕಿ ಹೊಡೆಯುತ್ತಾರೆ. ಆಗ ಪರಸ್ಪರ ಜಗಳ, ಕಿತ್ತಾಟಗಳು ನಡೆಯುತ್ತಿವೆ.

ನಿರಂತರ ಮಳೆ ಬರುವ ಸಂದರ್ಭದಲ್ಲಿ ಹೊಂಡಗಳಲ್ಲಿ ನೀರು ನಿಂತು, ಎಷ್ಟು ಆಳ ಇವೆ ಎಂಬುದೂ ತಿಳಿಯುತ್ತಿಲ್ಲ. ಹಠಾತ್ತಾಗಿ ಗುಂಡಿಗೆ ಬೀಳುವಾಗ ಆ್ಯಕ್ಸಿಲ್‌ನಂತಹ ಬಿಡಿಭಾಗಗಳು ತುಂಡಾಗಿ ವಾಹನಗಳೂ ಗ್ಯಾರೇಜ್‌ ಸೇರುತ್ತಿವೆ. ಈ ಗುಂಡಿಗಳ ಆಳ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ ಜನಪ್ರತಿನಿಧಿಗಳು ಅಥವಾ ಅಧಿಕಾರಿಗಳು ಮೌನ ವಹಿಸಿದ್ದಾರೆ. ಹೆದ್ದಾರಿ ಇಲಾಖೆ ಅಧಿಕಾರಿಗಳು ಕಬಕ ಜಂಕ್ಷನ್‌ನಲ್ಲಿ ರಸ್ತೆ ಮಧ್ಯೆ ಉಂಟಾಗಿರುವ ಈ ಗುಂಡಿಗಳನ್ನು ಮುಚ್ಚಿಸಿ, ಸವಾರರು- ಚಾಲಕರಿಗೆ ಉಂಟಾಗುತ್ತಿರುವ ಅಪಾಯ ತಪ್ಪಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next