Advertisement

Kabaka: ಮಹಿಳೆಗೆ ವರದಕ್ಷಿಣೆ ಹಿಂಸೆ; ಆರೋಪಿಗಳು ದೋಷಮುಕ್ತ

10:05 PM Aug 02, 2023 | Team Udayavani |

ಪುತ್ತೂರು: ವರದಕ್ಷಿಣೆ ಹಿಂಸೆ ಪ್ರಕರಣವೊಂದಕ್ಕೆ ಸಂಬಂಧಿಸಿ ಮಹಿಳೆಯ ಪತಿ ಸಹಿತ ಮೂವರು ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

Advertisement

ಕಬಕ ಗ್ರಾಮದ ವಿದ್ಯಾಪುರ ನಿವಾಸಿ ನಸೀಮಾ ಬಾನು ಎಂಬವರು ಆಕೆಯ ಪತಿ, ಕಲ್ಲಡ್ಕ ಬಾಳಿಲ ಸಿಟಿ ಪ್ಲಾಜಾ ಎಂಬಲ್ಲಿ ವಾಸವಾಗಿರುವ ಅಹಮ್ಮದ್‌ ಎಂಬವರ ಮಗ ಬಿ.ಕೆ. ಜೈನುಲ್‌ ಆಬಿದ್‌, ಅವರ ತಂದೆ ಅಹಮ್ಮದ್‌, ತಾಯಿ ಸಫಿಯಾ ಹಾಗೂ ಜೈನುಲ್‌ ಆಬಿದ್‌ ಅವರ ತಮ್ಮ ಸಫ‌ುìದ್ದೀನ್‌ ಎಂಬವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.

2010ರ ಜೂ. 27ರಂದು ತನಗೆ ಜೈನುಲ್‌ ಆಬಿದ್‌ ಜತೆ ಮದುವೆಯಾಗಿತ್ತು. ಈ ಸಂದರ್ಭ 1.5 ಲಕ್ಷ ರೂ.ಮತ್ತು 20 ಪವನ್‌ ಚಿನ್ನವನ್ನು ವರದಕ್ಷಿಣೆಯಾಗಿ ಪಡೆದುಕೊಂಡಿದ್ದರು. ಆ ಬಳಿಕವೂ 1 ಲಕ್ಷ ರೂ.ñ ‌ರುವಂತೆ ಹೇಳಿ ಆರೋಪಿಗಳು ನನಗೆ ಹಿಂಸೆ ನೀಡುತ್ತಿದ್ದುದರಿಂದ ತಾನು ಗಂಡನ ಮನೆ ಬಿಟ್ಟು ತಾಯಿ ಮನೆಗೆ ಬಂದು ನೆಲೆಸಿದ್ದೆ. 2011ರ ಸೆ.7ರಂದು ರಾತ್ರಿ ಪತಿ ಜೈನುಲ್‌ ಆಬಿದ್‌, ಅವರ ತಮ್ಮ ಸಫ‌ುìದ್ದೀನ್‌ರವರು ಕಬಕದ ನಮ್ಮ ಮನೆಗೆ ಬಂದು ಹÇÉೆ ಮಾಡಿ ಬೆದರಿಕೆಯೊಡ್ಡಿದ್ದರು ಎಂದು ನಸೀಮಾಬಾನು ಅವರು ಪೊಲೀಸರಿಗೆ ದೂರು ನೀಡಿ, ತನಗೆ ವರದಕ್ಷಿಣೆ ಹಿಂಸೆ ನೀಡಿದ ಪತಿ,ಅತ್ತೆ,ಮಾವ ಮತ್ತು ಪತಿಯ ತಮ್ಮನ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಕೋರಿದ್ದರು.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳಾದ ಜೈನುಲ್‌ ಆಬಿದ್‌, ಆತನ ತಾಯಿ ಸಫಿಯಾ ಮತ್ತು ತಮ್ಮ ಸಫ‌ುìದ್ದೀನ್‌ ಅವರನ್ನು ಖುಲಾಸೆಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next