Advertisement

“ಪ್ರತೀ ಜಿಲ್ಲೆಯಲ್ಲೂ ಕಬಡ್ಡಿ ತರಬೇತಿ ಕೇಂದ್ರ ಅಗತ್ಯ’

09:28 AM Nov 19, 2019 | sudhir |

ಸುಬ್ರಹ್ಮಣ್ಯ : ಕಬಡ್ಡಿಯಲ್ಲಿ ಅಂತಾ ರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದವರಲ್ಲಿ ಗಡಿನಾಡು ಕಾಸರಗೋಡು ಜಿಲ್ಲೆಯ ಜಗದೀಶ ಕುಂಬಳೆ ಹೆಸರು ಬಹಳ ಎತ್ತರದಲ್ಲಿದೆ. ಪ್ರೊ ಕಬಡ್ಡಿಯಲ್ಲಿ ಬೆಂಗಾಲ್‌ ವಾರಿಯರ್ ಮತ್ತು ತೆಲುಗು ಟೈಟಾನ್ಸ್‌ ತಂಡದ ತರಬೇತುದಾರರಾಗಿದ್ದ ಅವರು ಭಾರತೀಯ ಸೇನೆಯಲ್ಲೂ ಸೇವೆ ಸಲ್ಲಿಸಿದ್ದಾರೆ. ಅವರು ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದ ವೇಳೆ “ಉದಯವಾಣಿ’ ಜತೆ ಮಾತುಕತೆ ನಡೆಸಿದರು.

Advertisement

– ಕಬಡ್ಡಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಿಮ್ಮ ಯೋಜನೆ, ಪರಿಕಲ್ಪನೆ ಏನು?
ಶಿಕ್ಷಣ ಕೌಶಲವನ್ನು ನೀಡುವ ಅಭ್ಯಾಸ ಕೇಂದ್ರವನ್ನು ಕಾಸರಗೋಡಿನಲ್ಲಿ ಆರಂಭಿಸಿದ್ದೇನೆ. ಕಬಡ್ಡಿ ಅಕಾಡೆಮಿ ತೆರೆದ ಬಳಿಕ ಅಲ್ಲಿ ಸಾಕಷ್ಟು ಆಟಗಾರರು ಹೊರಬಂದಿದ್ದಾರೆ. ಸೂಕ್ತ ತರಬೇತಿ ದೊರೆತರೆ ಸಾಮಾನ್ಯ ಆಟಗಾರ ಕೂಡ ದೊಡ್ಡ ಮಟ್ಟದಲ್ಲಿ ಬೆಳೆಯಲು ಸಾಧ್ಯವಿದೆ.

– ಕಬಡ್ಡಿಗೆ ಸರಕಾರದ ನೆರವು ಹೇಗಿರಬೇಕು?
ಸರಕಾರವು ಇಚ್ಛಾಶಕ್ತಿಯಿಂದ ಎಲ್ಲ ಜಿಲ್ಲೆಗಳಲ್ಲಿ ಕಬಡ್ಡಿ ಕ್ರೀಡೆಯನ್ನು ಪ್ರೋತ್ಸಾಹಿಸಬೇಕಿದೆ. ಪ್ರತೀ ಜಿಲ್ಲೆಯಲ್ಲಿ ಕಬಡ್ಡಿ ಕೋಚಿಂಗ್‌ ಸೆಂಟರ್‌ ತೆರೆಯುವ ಬಗ್ಗೆ ಸರಕಾರ ಗಮನಹರಿಸಬೇಕು.

– ತರಬೇತಿ ಕೇಂದ್ರ ವಿಸ್ತರಿಸುವ ಯೋಜನೆ ಇದೆಯೇ?
ಮಂಗಳೂರಿನಲ್ಲಿ ಕಬಡ್ಡಿ ತರಬೇತಿ ನೀಡಲು ನನಗೆ ಆಸಕ್ತಿ ಇದೆ. ಅವಕಾಶ ದೊರೆತರೆ ಕೋಚಿಂಗ್‌ ನೀಡ ಲು ಸಿದ್ಧ. ಮಂಗಳೂರು ಜಿಲ್ಲಾ ಕೇಂದ್ರ. ಇಲ್ಲಿ ಕಬಡ್ಡಿ ತರಬೇತಿ ಕೇಂದ್ರ ತೆರೆಯುವುದು ನನ್ನ ಕನಸಾಗಿ ತ್ತು. ಇದಕ್ಕೆ ಸಾಕಷ್ಟು ಪ್ರಯತ್ನ ಕೂಡ ನಡೆಸಿದೆ. ಕಾರಣಾಂತರಗಳಿಂದ ಅದು ಸಾಧ್ಯವಾಗಿಲ್ಲ. ರಾಜ್ಯದ ಇತರ ಜಿಲ್ಲೆಗಳಲ್ಲೂ ಕಬಡ್ಡಿ ಕೇಂದ್ರ ತೆರೆಯಲು ಪ್ರಯತ್ನಿಸುತ್ತಿದ್ದೇನೆ.

– ಕಬಡ್ಡಿ ಆಟಗಾರನಾದ ನೀವು ಸೈನಿಕನಾಗಿದ್ದು ಹೇಗೆ?
ಕಾಲೇಜು, ವಿಶ್ವವಿದ್ಯಾಲಯದಲ್ಲಿ ಕಬಡ್ಡಿ ತಂಡದ ಸದಸ್ಯನಾಗಿ ಹಲವು ಕಡೆ ಸ್ಪರ್ಧೆಗಳಲ್ಲಿ ಭಾಗವಹಿಸಲು ತೆರಳುತ್ತಿದ್ದೆ. ಜಿಲ್ಲಾ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಆಡುತ್ತಿದ್ದಾಗ ತರಬೇತುದಾರರೊಬ್ಬರ ಸಲಹೆಯಂತೆ ಸೈನಿಕ ನೇಮಕಾತಿ ಕ್ಯಾಂಪಿನಲ್ಲಿ ಭಾಗವಹಿಸಿದೆ. ತೇರ್ಗ ಡೆಗೊಂಡು ಸೈನಿಕ ಸೇವೆಗೆ ಸೇರಿದೆ. ಆಟವನ್ನೂ ಮುಂದುವರಿಸಿದೆ.

Advertisement

– ಮ್ಯಾಟ್‌ಗೆ ಹೇಗೆ ಹೊಂದಿಕೊಂಡಿರಿ?
ರಜೆಯಲ್ಲಿ ಊರಿಗೆ ಬಂದಾಗಲೂ ಆಟ ಮುಂದು ವರಿಸುತ್ತಿದ್ದೆ. ಸರ್ವೀಸಸ್‌ ತಂಡ‌ದಿಂದ ಇಂಡಿ ಯನ್‌ ತಂಡಕ್ಕೆ ಆಯ್ಕೆಯಾದೆ. ಸರ್ವೀಸಸ್‌ ತಂಡದಲ್ಲಿ ಹೆಚ್ಚಾಗಿ ಉತ್ತರ ಭಾರತದ ಆಟಗಾರರೇ ಇರುತ್ತಿದ್ದರು. ಅವರಲ್ಲಿ ಮ್ಯಾಟ್‌ನಲ್ಲಿ ಆಡುವವರೇ ಜಾಸ್ತಿ. ನಾನು ಮಾತ್ರ ನೆಲದಲ್ಲಿ ಆಡುತ್ತಿದ್ದೆ. ಮ್ಯಾಟ್‌ ಕಬಡ್ಡಿ ಹಾಗೂ ಮಣ್ಣಿನ ಅಂಗಳದಲ್ಲಿ ಆಡುವ ಕಬಡ್ಡಿಗೆ ಬಹಳ ವ್ಯತ್ಯಾಸವಿದೆ. ಇದನ್ನು ಮನಗಂಡು ಯುವ ಕಬಡ್ಡಿ ಪಟುಗಳಿಗೆ ಅಭ್ಯಾಸ ನೀಡುವ ಅಗತ್ಯವಿದೆ.

– ಗ್ರಾಮೀಣ ಭಾಗದಲ್ಲಿ ಕಬಡ್ಡಿ ಸ್ಥಿತಿ ಹೇಗಿದೆ?
ಇಲ್ಲಿ ಪ್ರತಿಭಾನ್ವಿತ ಕಬಡ್ಡಿ ಆಟಗಾರರಿದ್ದೂ ಸೂಕ್ತ ತರಬೇತಿ ಸಿಗುತ್ತಿಲ್ಲ. ಹೀಗಾಗಿ ಪ್ರತಿಭೆಗಳು ಹೊರಬ ರುತ್ತಿಲ್ಲ. ಸಂಘ ಸಂಸ್ಥೆಗಳು ಸ್ಥಳೀಯ ಕಬಡ್ಡಿ ಕೋಚಿಂ ಗ್‌ ಸೆಂಟರ್‌ ತೆರೆಯಲು ಗಮನಹರಿಸಬೇಕು. ಇಲ್ಲಿ ಉತ್ತಮ ತರಬೇತುದಾರರಿದ್ದು, ಅವರನ್ನು ಸದುಪ ಯೋಗಪಡಿಸಿಕೊಳ್ಳಬೇಕಿದೆ.

– ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next