Advertisement
ಭಾರತದ ಗ್ರಾಮೀಣ ಆಟ ಕಬಡ್ಡಿ, ಗ್ರಾಮೀಣ ಯುವ ಪೀಳಿಗೆಯ ಕನಸಿನ ಕೂಸು. ಕಬಡ್ಡಿಯ ಕುರಿತು ಅಪಾರ ಪ್ರೀತಿ ಬೆಳೆಸಿಕೊಂಡು ಸಣ್ಣ ವಯಸ್ಸಿನಲ್ಲೇ ಬಹಳಷ್ಟು ತೊಡಕುಗಳನ್ನು ಮೆಟ್ಟಿನಿಂತು ಸಾಧನೆಯ ಹಾದಿಯಲ್ಲಿ ಸಾಗುತ್ತಿರುವವರು ಚೇತನ್ ಗೌಡ. ಈತ ಪ್ರಸ್ತುತ ಪುತ್ತೂರು ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದಾರೆ. ಇವರು ಮಿತ್ತೂರು ಸಮೀಪದ ಕುವೆತ್ತಿಲ ನಿವಾಸಿ ಶಾಂತಪ್ಪ ಗೌಡ ಹಾಗೂ ಲತಾ ದಂಪತಿ ಪುತ್ರ.
Related Articles
ಮೊದಲು ಗುರು
ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ ಎಂಬಂತೆ ಚೇತನ್‌ಗೆ ಅವರ ತಂದೆಯೇ ಮೊದಲ ಗುರು. ಈ ಪ್ರತಿಭೆಗೆ ಪ್ರೋತ್ಸಾಹ ನೀಡಿ ಎಲ್ಲಾವೂ ನಿನ್ನಿಂದ ಸಾಧ್ಯ. ನೀನು ಸಾಧಿಸಬಲ್ಲೆ ಎಂದು ಹುರಿದುಂಬಿಸಿ, ಆತನಲ್ಲಿದ್ದ ಪ್ರತಿಭೆಯನ್ನು ಬಡಿದೆಬ್ಬಿಸಿದ ಮಾರ್ಗದರ್ಶಕ. ಈತನ ಕನಸಿಗೆ ಸಾಕಾರ ನೀಡಿದ ಪರಿಣಾಮವಾಗಿ ಅವಿರತ ಪ್ರಯತ್ನದಿಂದ ಹರಿಯಾಣದಲ್ಲಿ ನಡೆದ ಆಲ್ ಇಂಡಿಯಾ ಕಬಡ್ಡಿ ಚಾಂಪಿಯನ್‌ಶಿಪ್ ಪದ್ಯಾಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಗೋಲ್ಡ್ ಮೆಡಲ್ ಪಡೆಯುವಲ್ಲಿ ಸಫಲರಾಗಿದ್ದಾರೆ.
Advertisement
ಹೀಗೆಯೇ ತನ್ನನ್ನು ಬೆಳೆಸಿ, ಪ್ರೋತ್ಸಾಹಿಸಿ, ಮಾರ್ಗದರ್ಶನ ನೀಡಿದ ಗುರುಗಳನ್ನು ನೆನಪಿಸುವ ಚೇತನ್ ಗೌಡ ಅದೆಷ್ಟೇ ನೋವಿರಲಿ, ಕ್ರೀಡಾಪಟುವೊಬ್ಬ ಮೈದಾನಕ್ಕೆ ಕಾಲಿಟ್ಟಾಗ ಆ ಎಲ್ಲ ನೋವನ್ನು ಮಾಯ ಮಾಡುವ ಶಕ್ತಿ ಕ್ರೀಡೆಗಿದೆ. ಅದೇ ರೀತಿಯಲ್ಲಿ ಮಾನಸಿಕ ನೆಮ್ಮದಿ ಜತೆಗೆ ದೈಹಿಕ ಸ್ಥೈರ್ಯ ನೀಡುತ್ತದೆ ಎನ್ನುತ್ತಾರೆ. ಸಾಧನೆಯ ಹಾದಿಯಲ್ಲಿ ತೊಡಕುಗಳು ಸಹಜ. ಅವೆಲ್ಲವನ್ನೂ ಹಿಮ್ಮೆಟ್ಟಿ ನಿಂತಾಗ ಯಶಸ್ಸು ಖಂಡಿತ ದೊರೆಯುತ್ತದೆ ಎನ್ನುವುದು ಕ್ರೀಡಾಪಟು ಚೇತನ್ ಗೌಡ ಅವರ ಅಭಿಪ್ರಾಯ.
ಕಬಡ್ಡಿಯಲ್ಲಿ ವಿಶೇಷ ಸಾಧಕನಾಗಿ ಹೊರಹೊಮ್ಮಬೇಕೆಂಬ ಮಹದಾಸೆಯನ್ನು ಹೊಂದಿರುವ ಚೇತನ್ ಗೌಡ ತನ್ನ ಮುಂದಿನ ಕ್ರೀಡಾ ಭವಿಷ್ಯದಲ್ಲಿ ಧ್ರುವತಾರೆಯಂತೆ ಹೊಳೆದು ತನ್ನ ಹೆಸರನ್ನು ಜಗದೆಲ್ಲೆಡೆ ಪಸರಿಸಲಿ ಎನ್ನುವುದು ಅಭಿಮಾನಿಗಳ ಹಾರೈಕೆ.
ಆಲ್‌ರೌಂಡರ್ ಆಟಗಾರಈಗಾಗಲೇ ಒಪನ್ ಮ್ಯಾಚ್ ಮತ್ತು ರಾಜ್ಯಮಟ್ಟದ ಮ್ಯಾಚ್‌ಗಳಲ್ಲಿ ಗುರುತಿಸಿಕೊಂಡು ಯುವಪೀಳಿಗೆಯಲ್ಲಿ ಸಾಧಿಸುವ ಛಲ ತುಂಬಲು ಅವರು ಮಾದರಿಯಾಗಿದ್ದಾರೆ. ಇತ್ತೀಚೆಗೆ ಕೇರಳದಲ್ಲಿ ನಡೆದ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ, ಕೇನ್ಯಾದಲ್ಲಿ ನಡೆದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ, ಕೋಲ್ಪೆ ಷಣ್ಮುಖ ಸುಬ್ರಹ್ಮಣ್ಯ ಯುವಕ ಮಂಡಲವನ್ನು ಪ್ರತಿನಿಧಿಸುವ ಚೇತನ್ ಗೌಡ ಒಬ್ಬ ಆಲ್ ರೌಂಡರ್ ಆಟಗಾರ.