Advertisement

ಕಬಡ್ಡಿ, ಬಾಸ್ಕೆಟ್‌ಬಾಲ್‌ ದತ್ತು; ಸಿಎಂ ಬೊಮ್ಮಾಯಿ ಘೋಷಣೆ

12:37 AM May 04, 2022 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಸರ್ಕಾರವು ಕಬಡ್ಡಿ ಮತ್ತು ಬಾಸ್ಕೆಟ್‌ಬಾಲ್‌ ಅನ್ನು ದತ್ತು ಪಡೆಯಲು ನಿರ್ಧರಿಸಿದೆ.

Advertisement

ಮುಂದಿನ ದಿನಗಳಲ್ಲಿ ಈ ಎರಡೂ ಕ್ರೀಡೆಗಳಿಗೆ ಅಗತ್ಯ ಸಹಕಾರ ನೀಡಿ, ಬೆಳವಣಿಗೆಗೆ ಪ್ರೋತ್ಸಾಹ ನೀಡಲಾಗುವುದು ಎಂದು ಪ್ರಕಟಿಸಿದರು.

ಇನ್ನು ಈಗಾಗಲೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ 75 ಕ್ರೀಡಾಪಟುಗಳನ್ನು ದತ್ತುಪಡೆದು, ತರಬೇತಿ ನೀಡಲಾಗುತ್ತಿದೆ. ಇದರಲ್ಲಿ ಕನಿಷ್ಠ ಹತ್ತು ಕ್ರೀಡಾಪಟುಗಳು ಮುಂದಿನ ಒಲಿಂಪಿಕ್‌ನಲ್ಲಿ ಭಾಗವಹಿಸಬೇಕು ಎಂಬ ಗುರಿ ಹೊಂದಲಾಗಿದೆ ಎಂದ ಅವರು, ಕ್ರೀಡೆಯು ಜೀವನದ ಪ್ರಮುಖ ಭಾಗವಾಗಿದ್ದು, ಇದರಿಂದ ಜೀವನದಲ್ಲಿ ಶಿಸ್ತು ಬರಲಿದೆ.

ಗೆಲ್ಲುವ ಗುರಿ ಇಟ್ಟುಕೊಂಡು ಆಡಬೇಕು. ಒಂದು ವೇಳೆ ಸೋತರೂ ಚಿಂತೆ ಇಲ್ಲ. ಅದರಿಂದ ಗೆಲ್ಲುವ ಛಲ ಬರಲಿದೆ ಎಂದು ಕಿವಿಮಾತು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next