Advertisement

Kaatera: 200 ಕೋಟಿ ರೂ ಕ್ಲಬ್ ಗೆ ಸೇರಿದ ದರ್ಶನ್ ಸಿನಿಮಾ

09:02 AM Jan 20, 2024 | Team Udayavani |

ಬಿಡುಗಡೆಯಾದ ದಿನದಿಂದಲೂ ಭರ್ಜರಿ ಕಲೆಕ್ಷನ್‌ ಮಾಡುತ್ತಾ ಮುನ್ನುಗ್ಗುತ್ತಿರುವ “ಕಾಟೇರ’ ಚಿತ್ರ ಈಗ ಮತ್ತೂಂದು ದಾಖಲೆ ಬರೆದಿದೆ. ಚಿತ್ರ 200 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್‌ ಮಾಡುವ ಮೂಲಕ ಸೂಪರ್‌ ಹಿಟ್‌ಲಿಸ್ಟ್‌ಗೆ ಸೇರಿದೆ. ಒಂದು ಕೋಟಿ ಟಿಕೆಟ್‌ ಮಾರಾಟವಾಗುವ ಮೂಲಕ “ಕಾಟೇರ’ ಗೆಲುವಿನ ನಗು ಬೀರುತ್ತಾ ಮುಂದೆ ಸಾಗಿದೆ.

Advertisement

ಈ ಚಿತ್ರದ ಮತ್ತೂಂದು ವಿಶೇಷವೆಂದರೆ ಇದು ಕೇವಲ ಕನ್ನಡದಲ್ಲಿ ಅಷ್ಟೇ ಬಿಡುಗಡೆಯಾದ ಚಿತ್ರ. ಪ್ಯಾನ್‌ ಇಂಡಿಯಾ ಹೊರತಾಗಿ ಬಿಡುಗಡೆಯಾಗಿ ಈ ಮಟ್ಟದ ಕಲೆಕ್ಷನ್‌ ಮಾಡಿರುವುದು “ಕಾಟೇರ’ ಚಿತ್ರದ ಹೆಮ್ಮೆ ಎಂಬ ಮಾತು ಚಿತ್ರರಂಗದಲ್ಲಿ ಕೇಳಿಬರುತ್ತಿದೆ.

ದರ್ಶನ್‌ ನಾಯಕರಾಗಿರುವ ಚಿತ್ರವನ್ನು ರಾಕ್‌ಲೈನ್‌ ವೆಂಕಟೇಶ್‌ ನಿರ್ಮಿಸಿದ್ದು, ತರುಣ್‌ ಸುಧೀರ್‌ ನಿರ್ದೇಶನ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next