Advertisement

ಕಾನು ತೋಟ ಬೆಳೆಸಲು ಯೋಜನೆ

10:47 AM Jun 03, 2019 | Suhan S |

ಧಾರವಾಡ: ಜೂ. 5ರಂದು ವಿಶ್ವ ಪರಿಸರ ದಿನದ ಪ್ರಯುಕ್ತ ‘ಚಿನ್ನದ ಬೆಳೆಸು’ ತೋಟದ ಮಾದರಿಯಲ್ಲಿ ಕಾನನದ ಪಕ್ಷಿ-ಪಶುಗಳಿಗಾಗಿ ಮೀಸಲಿಟ್ಟ ಹಣ್ಣಿನ ಮರಗಳ ‘ಕಾನು ತೋಟ’ ಬೆಳೆಸಲು ನೇಚರ್‌ ರಿಸರ್ಚ್‌ ಸೆಂಟರ್‌ ಹಾಗೂ ನೇಚರ್‌ ಫಸ್ಟ್‌ ಇಕೋ ವಿಲೇಜ್‌, ಅರಣ್ಯ ಇಲಾಖೆ ಸಹಯೋಗದಲ್ಲಿ ಯೋಜನೆ ರೂಪಿಸಿವೆ.

Advertisement

ಧಾರವಾಡದಿಂದ ಹಳಿಯಾಳ ರಸ್ತೆಯಲ್ಲಿ 14 ಕಿಮೀ ದೂರದಲ್ಲಿದೆ ಹಳ್ಳಿಗೇರಿ. ಅಲ್ಲಿಂದ ಅಂದಾಜು ಕೇವಲ 1 ಕಿಮೀ ದೂರದಲ್ಲಿ ಬಣದೂರ ನಾಕಾ ಕೆರೆ. ಆಹಾರ-ನೀರನ್ನರಿಸಿ ಕಾಡಂಚಿಗೆ, ರಸ್ತೆಗೆ, ತೋಟಗಳಿಗೆ ನುಗ್ಗಿ ಬಂದು ಮಾನವ-ವನ್ಯ ಜೀವಿ ಸಂಘರ್ಷ ಹುಟ್ಟದಂತೆ ತಡೆಯಲೂ ಕೂಡ ಈ ‘ಚಿನ್ನದ ಬೆಳೆಸು’ ಹಣ್ಣಿನ ತೋಟ ಒಂದು ಮಾದರಿ ಪ್ರಯೋಗ ಆಗಿದೆ.

ಜೂ. 5ರಂದು ಬೆಳಗ್ಗೆ 10:30 ಗಂಟೆಗೆ ಡಿಸಿ ದೀಪಾ ರಾಜೇಂದ್ರ ಚೋಳನ್‌, ಜಿಪಂ ಸಿಇಒ ಡಾ| ಬಿ.ಸಿ. ಸತೀಶ, ನೇಚರ್‌ ಫಸ್ಟ್‌ ಇಕೋ ವಿಲೇಜ್‌ ಸಿಇಒ ಪಂಚಾಕ್ಷರಿ ಹಿರೇಮಠ ಹಾಗೂ ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಹೇಶ್‌ಕುಮಾರ್‌ ಮೊದಲಾದವರು ಪಾಲ್ಗೊಂಡು, 250ಕ್ಕೂ ಹೆಚ್ಚು ಹಣ್ಣಿನ ಗಿಡಗಳನ್ನು ನೆಡಲಿದ್ದಾರೆ. ಜೊತೆಗೆ, ಇಲ್ಲಿ ಮನುಷ್ಯರಿಗೆ ಪ್ರವೇಶವಿಲ್ಲ ಎಂಬ ಸೂಚನಾ ಫಲಕ ಅನಾವರಣಗೊಳಿಸಲಿದ್ದಾರೆ.

ನೇಚರ್‌ ರಿಸರ್ಚ್‌ ಸೆಂಟರ್‌ನ ಉಪಾಧ್ಯಕ್ಷ ಚಂದ್ರಶೇಖರ ಬೈರಪ್ಪನವರ, ಯೋಜನಾ ವಿಭಾಗದ ಮುಖ್ಯಸ್ಥ ಹರ್ಷವರ್ಧನ ಶೀಲವಂತ, ಖಜಾಂಚಿ ಡಾ|ಧೀರಜ್‌ ವೀರನಗೌಡರ, ಕಲಾವಿದ ಮಂಜುನಾಥ ಹಿರೇಮಠ, ಪರಿಸರವಾದಿ ಅಸ್ಲಂ ಜಹಾನ್‌ ಅಬ್ಬೀಹಾಳ, ಸಾವಯವ ಕೃಷಿಕ ಕೃಷ್ಣಕುಮಾರ ಭಾಗವತ್‌, ಪಕ್ಷಿ ಪ್ರೇಮಿ ಆರ್‌. ಜಿ. ತಿಮ್ಮಾಪುರ ಹಾಗೂ ಅನಿಲ ಅಳ್ಳೊಳ್ಳಿ ಭಾಗವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next