Advertisement

Kaalapatthar Celebrity Show: ಸೆಲೆಬ್ರೆಟಿ ಶೋನಲ್ಲಿ ಕಾಲಾಪತ್ಥರ್‌

06:52 PM Sep 25, 2024 | Team Udayavani |

ವಿಕ್ಕಿ ವರುಣ್‌ ನಿರ್ದೇಶಿಸಿ, ನಾಯಕರಾಗಿ ನಟಿಸಿರುವ “ಕಾಲಾಪತ್ಥರ್‌’ ಚಿತ್ರದ ಸೆಲೆಬ್ರೆಟಿ ಶೋ ಇತ್ತೀಚೆಗೆ ನಡೆಯಿತು.

Advertisement

ಸ್ಯಾಂಡಲ್‌ವುಡ್‌ನ‌ ಅನೇಕ ತಾರೆಯರು ಕಾಲಾಪತ್ಥರ್‌ ವೀಕ್ಷಿಸಿ ತಂಡದ ಬೆನ್ನು ತಟ್ಟಿ, ಪ್ರಶಂಸೆ ವ್ಯಕ್ತಪಡಿಸಿದ್ದಾರೆ.ನಟರಾದ ಸತೀಶ್‌ ನೀನಾಸಂ, ನಿರಂಜನ್‌, ಶಿಷ್ಯ ದೀಪಕ್‌, ಶಿವರಾಜ್‌ ಕೆ.ಆರ್‌. ಪೇಟೆ ಹಾಗೂ ನಟಿಯರಾದ ಸೋನುಗೌಡ, ಅನುಷಾ ರೈ, “ಭೀಮ’ ಖ್ಯಾತಿಯ ಅಶ್ವಿ‌ನಿ ಹಾಜರಿದ್ದರು.

ಹಾಗೆಯೇ ನಿರ್ಮಾಪಕ ಮತ್ತು ವಿತರಕರಾದ ಸುಪ್ರೀತ್‌, ಜಗದೀಶ್‌ ಗೌಡ ಮೊದಲಾದವರು ಸಿನಿಮಾವನ್ನು ವೀಕ್ಷಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಭುವನ್‌ ಮೂವೀಸ್‌ ಲಾಂಛನದಲ್ಲಿ ನಿರ್ಮಾಣವಾದ ಚೊಚ್ಚಲ ಚಿತ್ರ ಇದಾಗಿದೆ. ಭುವನ್‌ ಸುರೇಶ್‌ ಹಾಗೂ ನಾಗರಾಜ್‌ ಬಿಲ್ಲಿನ ಕೋಟೆ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಶೀಘ್ರದಲ್ಲೇ ಇನ್ನೆರಡು ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next