ಹೊಸದಿಲ್ಲಿ : ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ಅವರ ಹೊಸ ಚಿತ್ರ ರಯೀಸ್ ತೆರೆ ಕಂಡ ದಿನವೇ ಬಿಡುಗಡೆಗೊಂಡಿದ್ದ ಸೂಪರ್ ಸ್ಟಾರ್ ಹೃತಿಕ್ ರೋಷನ್ ಅವರ ಹೊಸ ಚಿತ್ರ ಕಾಬಿಲ್ ಬಿಡುಗಡೆಗೊಂಡಿತ್ತು.
ಕಾಬಿಲ್ ಚಿತ್ರ ನಿನ್ನೆ ಗುರುವಾರದ ಹದಿನಾರನೇ ದಿನದಂದು ಬಾಕ್ಸ್ ಆಫೀಸ್ನಲ್ಲಿ 1.10 ಕೋಟಿ ರೂ. ಗಳಿಸಿದೆ ಮತ್ತು ಮೂಲಕ 16ನೇ ದಿನದ ಗಳಿಕೆಯ ಮಟ್ಟಿಗೆ ರಯೀಸ್ ಚಿತ್ರವನ್ನು ಹಿಂದಿಕ್ಕಿದೆ. ನಿನ್ನೆಯ ಹದಿನಾರನೇ ದಿನದಂದು ಶಾರುಖ್ ಖಾನ್ ಅವರ ರಯೀಸ್ ದಾಖಲಿಸಿರುವ ಗಳಿಕೆ ಭರ್ತಿ 1 ಕೋಟಿ ರೂ.
ಅಂದ ಹಾಗೆ ಹೃತಿಕ್ ರೋಷನ್ ಅವರ ಕಾಬಿಲ್ ಚಿತ್ರದ ಈ ವರೆಗಿನ ಗಳಿಕೆ ಈಗ 99.04 ಕೋಟಿ ರೂ.ಗೆ ತಲುಪಿದೆ. ಆದರೆ ಶಾರುಖ್ ಅವರ ರಯೀಸ್ ಚಿತ್ರದ ದೇಶೀಯ ಗಳಿಕೆ ಈಗಾಗಲೇ 150 ಕೋಟಿ ದಾಟಿದ್ದು ಇದರ ಜಾಗತಿಕ ಗಳಿಕೆ 300 ಕೋಟಿ ದಾಟಿರುವುದಾಗಿ ವರದಿಯಾಗಿದೆ.
ಹೃತಿಕ್ ರೋಷನ್ ಅವರ ಕಾಬಿಲ್ ಚಿತ್ರದ ಗಳಿಕೆ ನೂರು ಕೋಟಿ ದಾಟುವುದಕ್ಕೆ ಈಗಿನ್ನು ಕೇವಲ 0.96 ಕೋಟಿ ರೂ. ಸಂಪಾದನೆ ಆಗಬೇಕಿದ್ದು ಅದೇನೂ ಕಷ್ಟದ ವಿಷಯವಲ್ಲ ಎಂದು ಸಿನೇಮಾ ಉದ್ಯಮ ರಂಗದ ವಿಶ್ಲೇಷಕರು ಹೇಳಿದ್ದಾರೆ.
ಆದರೆ ಈ ನಡುವೆ ಇಂದು ತೆರೆಕಂಡಿರುವ ಅಕ್ಷಯ್ ಕುಮಾರ್ ಅವರ ಜಾಲಿ ಎಲ್ಎಲ್ಬಿ ಚಿತ್ರದಿಂದ ಹೃತಿಕ್ ರೋಷನ್ ಅವರ ಕಾಬಿಲ್ ಚಿತ್ರಕ್ಕೆ ಸ್ವಲ್ಪ ಮಟ್ಟಿಗೆ ಅಡ್ಡಗಾಲು ಬೀಳುವ ಸಾಧ್ಯತೆ ಇದೆ. ಹೃತಿಕ್ ರೋಷನ್ ಚಿತ್ರ 2014ರಲ್ಲಿ ನೂರು ಕೋಟಿ ದಾಟಿದ್ದೇ ಈ ವರೆಗಿನ ದಾಖಲೆಯಾಗಿದೆ. ಎಂದರೆ ಕಾಬಿಲ್ ಈಗಿನ್ನು ನೂರು ಕೋಟಿ ಗಳಿಕೆ ದಾಟಿದರೆ, ಹೃತಿಕ್ ಮೂರು ವರ್ಷಗಳ ತರುವಾಯ 100 ಕೋಟಿ ಕ್ಲಬ್ಗ ಸೇರುವ ಭಾಗ್ಯ ಪಡೆಯುತ್ತಾರೆ.
ಇದೇ ಫೆ.17ರಂದು ರಾಣಾ ದಗ್ಗುಬತಿ ಅವರ “ದಿ ಘಾಜಿ ಅಟ್ಯಾಕ್’ ತೆರೆ ಕಾಣಲಿದೆ. ಅಷ್ಟರೊಳಗೆ ಹೃತಿಕ್ ಅವರ ಕಾಬಿಲ್ ನೂರು ಕೋಟಿ ದಾಟಿದರೆ ಅದೇ ಒಂದು ತೃಪ್ತಿಯ ಸಂಗತಿ ಎನಿಸಲಿದೆ.