Advertisement
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ| ಬಸವಪ್ರಭು ಪಾಟೀಲ್ ಬೆಟ್ಟದೂರು ಅವರ ಏಕಪಕ್ಷೀಯ ನಡೆಯಿಂದಾಗಿ ಆಮಂತ್ರಣ ಪತ್ರ ವಿತರಣೆ ಹಾಗೂ ಪ್ರಚಾರದ ಕೊರತೆ ಸೇರಿದಂತೆ ಅನೇಕ ಕಾರಣಗಳಿಂದ ಸಾಹಿತ್ಯಿಕ ವಲಯದಲ್ಲೇ ಅಪಸ್ವರ ಕೇಳಿಬರುತ್ತಿದೆ. ಆರಂಭದಿಂದಲೂ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ| ಬಸವಪ್ರಭು ಪಾಟೀಲ್ ಬೆಟ್ಟದೂರು ಅವರ ಏಕಪಕ್ಷೀಯ ನಡೆಗೆ ವಿರೋಧ ವ್ಯಕ್ತವಾಗುತ್ತಲೇ ಇದೆ. ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಮಾನ್ವಿ ತಾಲೂಕಿನ ಪೋತ್ನಾಳ ಗ್ರಾಮ ಆಯ್ಕೆ ಮಾಡುವಾಗ, ಸಮ್ಮೇಳನಾಧ್ಯಕ್ಷರನ್ನಾಗಿ ಕಥೆಗಾರ ಡಾ| ರಾಜಶೇಖರ ನೀರಮಾನ್ವಿ ಅವರನ್ನು ಆಯ್ಕೆ ಮಾಡುವಾಗ, ಸಮಿತಿಗಳ ರಚನೆ ಮಾಡುವಾಗಲೂ ಜಿಲ್ಲಾಧ್ಯಕ್ಷರು ಯಾವುದೇ ಪೂರ್ವಭಾವಿ ಸಭೆಗಳಲ್ಲಿ ಚರ್ಚಿಸದೆ ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಂಡಿರುವುದು ಸಾಹಿತ್ಯಾಸಕ್ತರು ಹಾಗು ಆಜೀವ ಸದಸ್ಯರ ವಿರೋಧಕ್ಕೆ ಕಾರಣವಾಗಿದೆ.
Related Articles
Advertisement
ಸಮ್ಮೇಳನ ಕುಟುಂಬಕ್ಕೆ ಸೀಮಿತ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಜಿಲ್ಲಾಧ್ಯಕ್ಷ ಡಾ| ಬಸವಪ್ರಭು ಪಾಟೀಲ್‌ರ ಕುಟುಂಬಕ್ಕೆ ಮಾತ್ರ ಸೀಮಿತವಾಗಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ. ಡಾ| ಬಸವಪ್ರಭು ಪಾಟೀಲ್‌ರ ತಂದೆ ಚೆನ್ನಬಸಪ್ಪ ಬೆಟ್ಟದೂರು ಅವರ ಹೆಸರನ್ನು ವೇದಿಕೆಗೆ ಇಡಲಾಗಿದೆ. ದೊಡ್ಡಪ್ಪನವರಾದ ಶಂಕರಗೌಡ ಬೆಟ್ಟದೂರು ಅವರ ಹೆಸರನ್ನು ದ್ವಾರಕ್ಕೆ ಇಡಲಾಗಿದೆ. ಸಹೋದರರಾದ ಚಾಮರಸ ಪಾಟೀಲ್ ಬೆಟ್ಟದೂರು ಹಾಗೂ ಅಲ್ಲಮಪ್ರಭು ಬೆಟ್ಟೂದೂರು ಅವರು ಗೋಷ್ಠಿಯಲ್ಲಿ ವಿಷಯ ಮಂಡನೆ ಮಾಡಲಿದ್ದಾರೆ. ಇವರು ಕಳೆದ ವರ್ಷ ರಾಯಚೂರಿನಲ್ಲಿ ನಡೆದ ಅ.ಭಾ.ಕ.ಸಾಹಿತ್ಯ ಸಮ್ಮೇಳನದಲ್ಲಿಯೂ ಭಾಗವಹಿಸಿದ್ದರು. ಶರಣಬಸವ ಬೆಟ್ಟದೂರು ಅವರನ್ನು ಜಿಲ್ಲಾ ಘಟಕದಲ್ಲಿ ಗೌರವ ಸಂಘಟನಾ ಕಾರ್ಯದರ್ಶಿ ಎಂದು ನೇಮಿಸಲಾಗಿದೆ. ಇದಲ್ಲಕ್ಕಿಂತ ಹೆಚ್ಚಾಗಿ ಸಮ್ಮೇಳನಾಧ್ಯಕ್ಷರಾಗಿರುವ ಡಾ| ರಾಜಶೇಖರ ನೀರಮಾನ್ವಿ ಕೂಡ ಸಹ ಹತ್ತಿರದ ಸಂಬಂಧಿಯಾಗಿದ್ದಾರೆ. ಇವರ ಬದಲಾಗಿ ಇತರರಿಗೆ ಅವಕಾಶ ನೀಡಬೇಕಾಗಿತ್ತು ಎಂಬುದು ಸಾರ್ವಜನಿಕರು ಮತ್ತು ಸಾಹಿತ್ಯಿಕ ವಲಯದಲ್ಲೇ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಸಮ್ಮೇಳನವು ಏಕಪಕ್ಷೀಯವಾಗಿ ನಡೆಯುತ್ತಿದೆ. ಕುಟುಂಬಕ್ಕೆ ಸೀಮಿತವಾಗಿದೆ. ಅಲ್ಲದೆ ಕಸಾಪಕ್ಕೆ ದುಡಿದ ಜಿಲ್ಲಾಧ್ಯಕ್ಷರಾಗಿದ್ದ ಪಂಪಯ್ಯ ಶೆಟ್ಟಿ, ಎಸ್. ಶರಣೇಗೌಡ, ಅಯ್ಯಪ್ಪ ತುಕ್ಕಾಯಿಯಂಥ ಹಿರಿಯರನ್ನು ಕಡೆಗಣಿಸಲಾಗಿದೆ. ಸೌಜನ್ಯಕ್ಕೂ ಇವರನ್ನು ಪರಿಗಣಿಸಿಲ್ಲ. ಕಸಾಪ ತಾಲೂಕು ಅಧ್ಯಕ್ಷರಾಗಿದ್ದ ದಿ| ಹನುಮನಗೌಡ ನಲ್ಗಂದಿನ್ನಿಯವರ ಹೆಸರನ್ನು ದ್ವಾರ ಬಾಗಿಲಿಗೆ ಇಡಬಹುದಿತ್ತು.ತಾಯಪ್ಪ ಬಿ. ಹೊಸೂರು, ಕಸಾಪ ಮಾಜಿ ತಾಲೂಕು ಅಧ್ಯಕ್ಷರು, ಮಾನ್ವಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರ ಏಕಪಕ್ಷೀಯ ನಡೆ ಬೇಸರ ತರಿಸಿದೆ. ಕನ್ನಡಪರ ಸಂಘಟನೆಗಳನ್ನು ನಿರ್ಲಕ್ಷಿಸಲಾಗಿದೆ. ಸಮ್ಮೇಳನ ಸ್ಥಳ ನಿಗದಿ, ಸಮ್ಮೇಳನಾಧ್ಯಕ್ಷರ ಆಯ್ಕೆ, ಪೂರ್ವಭಾವಿ ಸಭೆಗಳ ಕುರಿತು ಯಾವುದೇ ಸಂಘಟನೆಗಳಿಗೆ ಮಾಹಿತಿ ನೀಡಿಲ್ಲ. ಬೆರಳೆಣಿಕೆಯಷ್ಟು ಹಿಂಬಾಲಕರಿಗೆ ಕಾರ್ಯಕ್ರಮ ಸೀಮಿತವಾಗಿದೆ.
ಡಿ.ಬಸನಗೌಡ, ತಾಲೂಕು ಅಧ್ಯಕ್ಷರು, ಕರವೇ ನಾರಾಯಣಗೌಡ ಬಣ ರವಿ ಶರ್ಮಾ