Advertisement

ಆಟೋ ಚಾಲಕರೂ ಕೂಡ ನನ್ನನ್ನು ಮೆರೆಸಿಬಿಟ್ಟಿದ್ದಾರೆ ; ಎಲ್ಲರೂ ನನಗೆ ಸ್ನೇಹಿತರೇ

08:20 AM May 04, 2020 | Hari Prasad |

ಬೆಂಗಳೂರು: ಸಾಮಾನ್ಯವಾಗಿ ಕವಿಗಳು, ಸಾಹಿತಿಗಳು ಎಂದರೆ ಅವರು ಜನಸಾಮಾನ್ಯರಿಂದ ದೂರವಾಗಿ ಅಥವಾ ಅವರೊಂದಿಗೆ ಒಂದು ಅಂತರವನ್ನಿಟ್ಟುಕೊಂಡೇ ಬದುಕುವವರು ಎಂಬ ಮಾತಿದೆ.

Advertisement

ಆದರೆ ಕೆಲವು ಕವಿಗಳು, ಸಾಹಿತಿಗಳು ಇದಕ್ಕೆಲ್ಲಾ ಅಪವಾದ ಎಂಬಂತಿರುತ್ತಾರೆ. ಅಂತವರ ಸಾಲಿಗೆ ಸೇರುತ್ತಿದ್ದವರಲ್ಲಿ ನಿತ್ಯೋತ್ಸವದ ಕವಿ ನಿಸಾರ್ ಅಹಮದ್ ಕೂಡ ಒಬ್ಬರು.

ಅವರೇ ಹೇಳಿಕೊಂಡಿರುವಂತೆ ನಿಸಾರ್ ಅವರು ಪ್ರಕೃತಿಯಿಂದ ಮತ್ತು ಜನಸಾಮಾನ್ಯರಿಂದ ಸ್ಪೂರ್ತಿಯನ್ನು ಪಡೆದುಕೊಳ್ಳುತ್ತಿದ್ದರು. ಲಾಲ್ ಬಾಗ್ ನಲ್ಲಿರುವ ಮರ-ಗಿಡಗಳ ನಡುವೆ ಏಕಾಂತ ಚಿಂತನೆಯಲ್ಲಿ ಅವರ ಬಹುತೇಕ ಕಾವ್ಯಗಳು ಅಕ್ಷರ ರೂಪವನ್ನು ಪಡೆದುಕೊಂಡಿವೆ.

ಇನ್ನು ಶಿವಮೊಗ್ಗದಲ್ಲಿ ತಾವಿದ್ದ ಎಂಟು ವರ್ಷಗಳು ಅವರ ಸಾಹಿತ್ಯ ಕೃಷಿಯನ್ನು ಸಮೃದ್ಧಗೊಳಿಸಿದವು ಎಂಬುದನ್ನು ಕವಿ ನಿಸಾರ್ ಅಹಮದ್ ಅವರು ಹಲವಾರು ಸಂದರ್ಭಗಳಲ್ಲಿ ನೆನಪಿಸಿಕೊಂಡಿದ್ದಾರೆ.

ಶಿವಮೊಗ್ಗದಲ್ಲಿ ನಿಸಾರ್ ಅವರು ತಮ್ಮ ಕುಟುಂಬ ಸದಸ್ಯರನ್ನು ಬಿಟ್ಟು ಒಂಟಿಯಾಗಿದ್ದರಂತೆ, ಆ ಸಂದರ್ಭದಲ್ಲಿ ಅವರ ಕುಟುಂಬ ಬೆಂಗಳೂರಿನಲ್ಲೇ ವಾಸವಾಗಿತ್ತು. ಈ ಸಮಯವನ್ನು ಅವರೊಳಗಿದ್ದ ಕವಿ ಮನಸ್ಸು ಸದುಪಯೋಗಪಡಿಸಿಕೊಂಡಿತ್ತು.

Advertisement

ಸಾಯಂಕಾಲದ ಸಮಯಗಳಲ್ಲಿ ತಮ್ಮ ರೂಂ ಬಿಟ್ಟು ಹೊರಬಂದರೆ ಎಲ್ಲರನ್ನೂ ನಿಸಾರ್ ಆಪ್ತವಾಗಿ ಮಾತನಾಡಿಸುತ್ತಿದ್ದರು. ಮತ್ತು ಅಲ್ಲಿದ್ದ ಹಸುರು ಗದ್ದೆಗಳ ಬದುವಿನಲ್ಲಿ ನಡೆದುಕೊಂಡು ಗುಬ್ಬಚ್ಚಿಗಳ ಕಲರವಕ್ಕೆ ಕಿವಿಯಾಗುತ್ತಿದ್ದರು.

ರಿಕ್ಷಾ ಚಾಲಕರು ಸಾಮಾನ್ಯವಾಗಿ ಚಿತ್ರ ನಟ-ನಟಿಯರು, ಕ್ರೀಡಾ ತಾರೆಯರ ಚಿತ್ರಗಳನ್ನು ತಮ್ಮ ಆಟೋ ಹಿಂದೆ ಹಾಕಿಕೊಳ್ಳುತ್ತಾರೆ. ಆದರೆ ನಿತ್ಯೋತ್ಸವ ಕವಿತೆ ಪ್ರಕಟಗೊಂಡ ಬಳಿಕ ಅದರಲ್ಲೂ ಅದು ಧ್ವನಿಮುದ್ರಣಗೊಂಡು ಜನಮಾನಸವನ್ನು ತಲುಪಿದ ನಂತರವಂತೂ ಆಟೋ ಚಾಲಕರು ನಿಸಾರ್ ಅಹಮ್ಮದ್ ಅವರ ಭಾವಚಿತ್ರವನ್ನು ತಮ್ಮ ಆಟೋ ರಿಕ್ಷಾಗಳಲ್ಲಿ ಹಾಕಿಕೊಂಡು ಅವರನ್ನು ಮೆರೆಸಿಬಿಟ್ಟಿದ್ದರು. ಈ ಮಾತನ್ನು ಸ್ವತಃ ನಿಸಾರ್ ಅವರೇ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು.

ಸಂಗ್ರಹ: ಹರಿಪ್ರಸಾದ್

Advertisement

Udayavani is now on Telegram. Click here to join our channel and stay updated with the latest news.

Next