Advertisement

ರಾಹುಲ್ ಗಾಂಧಿ ಸಿಂಹವೋ, ನರಿಯೋ, ಇಲಿಯೋ ಎಂದು ಉಪಚುನಾವಣೆ ಬಳಿಕ ತಿಳಿಯಲಿದೆ: ಈಶ್ವರಪ್ಪ

03:07 PM Apr 14, 2021 | Team Udayavani |

ಶಿವಮೊಗ್ಗ: ರಾಹುಲ್ ಗಾಂಧಿ ಚುನಾವಣೆ ಸಂದರ್ಭದಲ್ಲಿ ಎಲ್ಲೆಲ್ಲಿ ಕಾಲಿಟ್ಟಿದ್ದಾರೋ ಅಲ್ಲೆಲ್ಲಾ ಕಾಂಗ್ರೆಸ್ ಗೆ ಸೋಲಾಗಿದೆ. ಲೋಕಸಭೆ ಚುನಾವಣೆ ವೇಳೆ ರಾಹುಲ್ ಗಾಂಧಿ ರಾಜ್ಯದ ಎಲ್ಲಾ ಕಡೆ ಪ್ರಚಾರ ಮಾಡಿದರು ಆದರೆ ರಾಜ್ಯದಲ್ಲಿ 25 ಕಡೆ ಬಿಜೆಪಿ ಗೆಲುವು ಸಾಧಿಸಿತು. ಕಳೆದ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇತ್ತು, ಆದರೂ ಸೋಲು ಅನುಭವಿಸಿತ್ತು. ರಾಹುಲ್ ಗಾಂಧಿ ಸಿಂಹ ಎಂಬ ಮಾತು ಹೇಳಿದ್ದಾರೆ. ರಾಹುಲ್ ಗಾಂಧಿ ಸಿಂಹವೋ, ನರಿಯೋ, ಇಲಿಯೋ ಎಂಬುದು ಉಪ ಚುನಾವಣೆ ಫಲಿತಾಂಶ ಬಂದ ನಂತರ ತಿಳಿಯಲಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದರು.

Advertisement

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಕಂಡರೆ ಬಿಜೆಪಿಯವರಿಗೆ ಭಯ ಖರ್ಗೆ ಹೇಳಿಕೆ ವಿಚಾರಕ್ಕೆ ತಿರುಗೇಟು ನೀಡಿದರು.

ರಾಹುಲ್ ಗಾಂಧಿ ಅವರು ಅವರ ಕ್ಷೇತ್ರ ಬಿಟ್ಟು ಕೇರಳಕ್ಕೆ ಏಕೆ ಓಡಿ ಹೋದರೆಂದು ಖರ್ಗೆ ಮೊದಲು ಹೇಳಬೇಕು. ಅವರಪ್ಪ, ಅವರಮ್ಮ, ಅವರಜ್ಜಿ, ಅವರು ಎಲ್ಲರೂ ಕೂಡಾ ಉತ್ತರ ಪ್ರದೇಶದಲ್ಲಿ ಸ್ಪರ್ಧೆ ಮಾಡಿ ಗೆಲ್ಲುತ್ತಿದ್ದರು. ಆದರೆ ರಾಹುಲ್ ಯಾಕೆ ಅಲ್ಲಿ ಬಿಟ್ಟು ಕೇರಳಕ್ಕೆ ಓಡಿ ಹೋದರು ಎಂದು ಪ್ರಶ್ನಿಸಿದರು.

ಎಲೆಕ್ಷನ್ ಎಂದರೆ ಬಿಜೆಪಿ ಗೆಲುವು ಎಂದರ್ಥ. ಇತ್ತೀಚಿನ ದಿನಗಳಲ್ಲಿ ನಡೆದ ಯಾವುದೇ ಚುನಾವಣೆಯಲ್ಲಿ ಬಿಜೆಪಿ ಹಿಂದೆ ಬಿದ್ದಿಲ್ಲ. ಬೆಳಗಾವಿ ನಮ್ಮದೇ ಕ್ಷೇತ್ರ. ಸುರೇಶ್ ಅಂಗಡಿ ನಿಧನದ ನಂತರ ಚುನಾವಣೆ ಎದುರಾಗಿದೆ. ಸಂಘಟಿತವಾಗಿ, ಸಂಘಟನಾತ್ಮಕವಾಗಿ ಬೂತ್ ಮಟ್ಟದಲ್ಲಿ ಕೆಲಸ ನಡೆಯುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಅಭಿವೃದ್ಧಿ ಕಾರ್ಯಗಳು ಕೈ ಹಿಡಿಯುತ್ತವೆ ಎಂದರು.

ಸುರೇಶ್ ಅಂಗಡಿ ಗ್ರಾಮೀಣ ಮಟ್ಟದಲ್ಲಿ ಒಂದೊಂದು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಹೀಗಾಗಿ ಬೆಳಗಾವಿಯಲ್ಲಿ ಗೆದ್ದೇ ಗೆಲ್ಲುತ್ತೇವೆ. ಮಸ್ಕಿ ಹಾಗೂ ಬಸವ ಕಲ್ಯಾಣದಲ್ಲಿ ಕಾಂಗ್ರೆಸ್, ಜೆಡಿಎಸ್ ಅಬ್ಬರ ಮಾಡುತ್ತಿದ್ದಾರೆ. ಏನೇ ಅಬ್ಬರ ಮಾಡಿದರೂ ಸಹ ಮೂರು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next