Advertisement

ಏನು ದನ ಕಾಯುತ್ತಿದ್ದಾರಾ?:ಎಸ್ ಪಿಗೆ ಕರೆ ಮಾಡಿ ಸಚಿವ ಈಶ್ವರಪ್ಪ ವಾರ್ನಿಂಗ್

11:25 AM Nov 17, 2021 | Team Udayavani |

ಶಿವಮೊಗ್ಗ: ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಭಂದಿಸಿ ಸಚಿವ ಈಶ್ವರಪ್ಪ ಅವರು ಬುಧವಾರ ಆಸ್ಪತ್ರೆಯಿಂದಲೇ ಎಸ್ ಪಿ ಅವರಿಗೆ ಕರೆ ಮಾಡಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

Advertisement

ಪೌರ ಕಾರ್ಮಿಕ ದೇವರಾಜ್ ಮತ್ತು ಮಂಜುನಾಥ್ ಮೇಲೆ ಜೆ.ಪಿ. ನಗರದಲ್ಲಿ ಕಸವಿಲೇವಾರಿ ವೇಳೆ ಗುಂಪೊಂದು ಹಲ್ಲೆ ಮಾಡಿತ್ತು. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಹಲ್ಲೆಯಿಂದ ಗಾಯಗೊಂಡು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಚಿಕಿತ್ಸೆ ಪಡೆಯುತ್ತಿರುವ ಪೌರಕಾರ್ಮಿಕರ ಆರೋಗ್ಯ ವಿಚಾರಿಸಿದ ಸಚಿವ ಈಶ್ವರಪ್ಪ ಅವರು ಆಸ್ಪತ್ರೆಯಿಂದಲೇ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕರೆ ಮಾಡಿ ಕೆಂಡಾಮಂಡಲವಾದರು.ತುಂಗಾ ನಗರ ಪೊಲೀಸರ ವಿರುದ್ಧ ಕಿಡಿ ಕಾರಿದ ಸಚಿವ ಈಶ್ವರಪ್ಪ, ”ಠಾಣೆಯ ಅಧಿಕಾರಿಗಳು ಏನು ದನ ಕಾಯುತ್ತಿದ್ದಾರಾ..? ಗಾಂಜಾ ಮತ್ತಿನಲ್ಲಿ ಹಲ್ಲೆ ಮಾಡಿದ್ದಾರೆ. ನಾನು ಸಂಜೆ ನಿಮ್ಮ ಕಚೇರಿಗೆ ಬರುವಷ್ಟರಲ್ಲಿ ಎಲ್ಲರ ಬಂಧನ ಆಗಬೇಕು” ಎಂದು ಖಡಕ್ ಎಚ್ಚರಿಕೆ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಈಶ್ವರಪ್ಪ, ‘ಶಿವಮೊಗ್ಗ ನಗರದಲ್ಲಿ ಪೌರ ಕಾರ್ಮಿಕರು ಬಹಳ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಬೇಕಾದಂತಹ ಸೌಲಭ್ಯಗಳನ್ನು ಪಾಲಿಕೆ ನೀಡಿದೆ. ಇಂತಹ ಸಂದರ್ಭದಲ್ಲಿ ಕೆಲವು ಕಡೆ ಪೌರ ಕಾರ್ಮಿಕರನ್ನು ಹೀನಾಯವಾಗಿ ಕಾಣುವುದು, ಅವರ ಮೇಲೆ ದಬ್ಬಾಳಿಕೆ ನಡೆಯುತ್ತಿರುವುದು ಕಾಣುತ್ತಿದೆ. ಜೆ.ಪಿ.ನಗರದಲ್ಲಿ ಪೌರ ಕಾರ್ಮಿಕರು ಕಸ ತುಂಬಲು ಹೋಗಿದ್ದಾಗ ಐದಾರು ಜನ ಸೇರಿಕೊಂಡು ಇಬ್ಬರನ್ನು ಹೊಡೆದಿದ್ದಾರೆ. ಹಲ್ಲೆಯಾದ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಾಯಾಳುಗಳು ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದಾರೆ. ಐದಾರು ಜನ ಸೇರಿಕೊಂಡು ಹೊಡೆದಿದ್ದರೂ, ಇಬ್ಬರನ್ನು ಮಾತ್ರ ಬಂಧಿಸಿದ್ದಾರೆ.ಈ ಬಗ್ಗೆ ಪಾಲಿಕೆ ಸದಸ್ಯರು ಡಿವೈಎಸ್ ಪಿ ಅವರನ್ನು ವಿಚಾರಿಸಿದರೆ ಅದು ಇನ್ನು ನನಗೆ ಗೊತ್ತಿಲ್ಲ ಅಂತಾರಂತೆ.ಪೊಲೀಸ್ ಇಲಾಖೆ ಏನು ಮಾಡ್ತಿದೆ ಗೊತ್ತಿಲ್ಲ.ಇಂದು ಸಂಜೆ ಎಸ್ ಪಿ ಕಚೇರಿಗೆ ತೆರಳಿ ಶಿವಮೊಗ್ಗದಲ್ಲಿ ಏನೇನು ನಡೆಯುತ್ತಿದೆ ಎಂಬ ಬಗ್ಗೆ ಅವರ ಗಮನಕ್ಕೆ ತರುತ್ತೇನೆ. ಪೊಲೀಸ್ ಇಲಾಖೆ ಅಲರ್ಟ್ ಆಗಬೇಕು‌. ಶಿವಮೊಗ್ಗದಲ್ಲಿ ಗೂಂಡಾಗಳಿಗೆ, ಈ ರೀತಿ ಗಲಾಟೆ ಮಾಡುವವರಿಗೆ ಏನು ಭಯ ಇಲ್ಲ ಎಂಬ ವಾತಾವರಣ ಇದೆ.ಈ ಬಗ್ಗೆ ಎಸ್ ಪಿ ಜೊತೆ ಚರ್ಚೆ ಮಾಡಿ ಅದನ್ನು ಸರಿಪಡಿಸುವ ದಿಕ್ಕಿನಲ್ಲಿ ವ್ಯವಸ್ಥೆ ಸರಿಪಡಿಸುವಂತೆ ತಿಳಿಸುತ್ತೇನೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next