Advertisement

Shivamogga: ಕಾಂಗ್ರೆಸ್ ನ ಗುಂಪುಗಾರಿಕೆಯೇ ಅವರ 100 ದಿನದ ಸಾಧನೆ : ಈಶ್ವರಪ್ಪ ಕಿಡಿ

01:06 PM Sep 20, 2023 | Team Udayavani |

ಶಿವಮೊಗ್ಗ: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಂದಿನಿಂದ ಇಂದಿನವರೆಗೆ ಗುಂಪುಗಾರಿಕೆ, ಅವ್ಯವಹಾರ, ವರ್ಗಾವಣೆ ದಂಧೆಗಳೇ ಕಾಂಗ್ರೆಸ್ ಪಕ್ಷದ ನೂರು ದಿನಗಳ ಸಾಧನೆಯಾಗಿದ್ದು ಬೇರೆ ಅಭಿವೃದ್ಧಿ ಕಾರ್ಯಗಳು ಯಾವುದೂ ನಡೆಯಲಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

Advertisement

ಮಾಧ್ಯಮದವರ ಜೊತೆ ಶಿವಮೊಗ್ಗದಲ್ಲಿ ಮಾತನಾಡಿದ ಅವರು ಡಿಕೆಶಿ ಓರ್ವ ನೀರಿನ ಕಳ್ಳ, ನಮ್ಮ ರಾಜ್ಯದ ರೈತರಿಗೆ ದ್ರೋಹ ಮಾಡಿ ತಮಿಳುನಾಡಿಗೆ ನೀರು ಬಿಡುತ್ತಿದ್ದಾರೆ, ನಮ್ಮ ರಾಜ್ಯದ ರೈತರಿಗೆ ಮೋಸ ಮಾಡಿದ್ದಾರೆ, ಡಿಕೆಶಿ ಒಬ್ಬ ಅಯೋಗ್ಯ ಉಪಮುಖ್ಯಮಂತ್ರಿ ಎಂದು ಆರೋಪಿಸಿದ್ದಾರೆ.

ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಈ ಬಗ್ಗೆ ಚರ್ಚೆ ನಡೆಯುತ್ತಿದೆ ಅದರಾಚೆಗೆ ಏನು ನಡೆದಿದೆ ಎಂಬುದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯನ ಚೇಲಾಗಳು ಡಿಕೆಶಿಗೆ ಅವಮಾನ ಮಾಡಲೆಂದೇ ಮೂರು ಡಿಸಿಎಂಗಳ ಬೇಡಿಕೆ ಇಟ್ಡಿದ್ದಾರೆ, ಮೂರು ಡಿಸಿಎಂಗೆ ಹೋಗುತ್ತದೋ, ಐದು ಡಿಸಿಎಂ ಗೆ ಹೋಗುತ್ತದೋ ಗೊತ್ತಿಲ್ಲ, ಕಾಂಗ್ರೆಸ್ ನ ಗುಂಪುಗಾರಿಕೆಯೇ ಅವರ 100 ದಿನದ ಸಾಧನೆ ಎಂದು ಹೇಳಿದ್ದಾರೆ.

ಲೋಕಸಭೆ ಚುನಾವಣೆಯವರೆಗೆ ಈ ಸರಕಾರ ಇರುತ್ತದೋ ಇಲ್ಲವೋ ಗೊತ್ತಿಲ್ಲ, ಗುಂಪುಗಾರಿಕೆ, ಅವ್ಯವಹಾರ, ವರ್ಗಾವಣೆ ದಂಧೆ ನಡೆಯುತ್ತಿದೆ ನಮ್ಮ ಸರಕಾರ ಇದ್ದಾಗ 40% ಸರಕಾರ ಅಂತಿದ್ದರು ಆದರೆ ಯಾವುದೇ ಒಬ್ಬ ಒಂದೇ ಒಂದು ಸಾಕ್ಷಿ‌ ಕೊಡಲಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ನಂತರ ಭ್ರಷ್ಟಾಚಾರ ನಡೆಯುತ್ತಿದೆ, ಒಬ್ಬೊಬ್ಬ ಅಧಿಕಾರಿಯಿಂದಲೂ‌ ಲಂಚ ಪಡೆಯುತ್ತಿದ್ದಾರೆ ಇದನ್ನು ಅವರ ಪಕ್ಷದ ಶಾಸಕರೇ ಆರೋಪ ಮಾಡುತ್ತಿದ್ದಾರೆ. 40% ಕ್ಕಿಂತ ಹೆಚ್ಚಿನ ಲಂಚವನ್ನು ಸಿದ್ದರಾಮಯ್ಯ, ಅವರ ಮಗ ಯತೀಂದ್ರ ಪಡೆಯುತ್ತಿದ್ದಾರೆ. ಈ ಬಗ್ಗೆ ಬೇಕಾದರೆ ನಾನು‌ ಸಾಕ್ಷಿ ಒದಗಿಸುತ್ತೇನೆ, ನಿವೃತ್ತ ನ್ಯಾಯಾಧೀಶರು ಅಥವಾ ಹಾಲಿ ನ್ಯಾಯಾಧೀಶರಿಂದ ತನಿಖೆ ಮಾಡಿಸಿ ಎಂದು ಸವಾಲ್ ಹಾಕಿದರು.

Advertisement

ವರ್ಗಾವಣೆ ದಂಧೆಯಲ್ಲಿ ಸಿದ್ದರಾಮಯ್ಯ, ಯತೀಂದ್ರ ಲೂಟಿ ಮಾಡ್ತಿದ್ದಾರೆ. ನ್ಯಾಯಾಧೀಶರ ನೇಮಕ ಮಾಡಿದ್ರೆ ನಾನೇ 25 ಕ್ಕೂ ಹೆಚ್ಚು ಅಧಿಕಾರಿಗಳನ್ನು ಕರೆದುಕೊಂಡು ಹೋಗ್ತೀನಿ, ಅಧಿಕಾರಿಗಳು ಮುಂದೆ ಬಂದು ಹೇಳಲು ಹೆದರುತ್ತಿದ್ದಾರೆ ಎಂದರು.

ಚೈತ್ರಾ ಕುಂದಾಪುರ ಪ್ರಕರಣ ವಿಚಾರವಾಗಿ ಹೇಳಿಕೆ ನೀಡಿದ ಅವರು ಹಿಂದು ಸಂಘಟನೆ ಹೆಸರು ಹೇಳಿಕೊಂಡು ಅಲ್ಲೊಬ್ಬರು ಇಲ್ಲೊಬ್ವರು ಇಂತಹ ಕೆಲಸ ಮಾಡುತ್ತಾ ಇದ್ದಾರೆ ಬಿಜೆಪಿಗೂ ಇದಕ್ಕೂ ಯಾವ ಸಂಬಂಧ ಇಲ್ಲ, ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಆಗಲಿ ಎಂದು ಹೇಳಿದರು.

ರಾಜ್ಯದಲ್ಲಿ ಒಂದೇ ಒಂದು ಅಭಿವೃದ್ಧಿ ಆಗುತ್ತಿಲ್ಲ, ಒಂದು ಬುಟ್ಟಿ ಮಣ್ಣು ರಸ್ತೆಗೆ ಬಿದ್ದಿಲ್ಲ, ಪ್ರತಿ ಕ್ಷೇತ್ರಕ್ಕೆ 2 ಕೋಟಿ ರೂ ಕೊಡ್ತೀವಿ ಅಂದಿದ್ರು 50 ಲಕ್ಷ ರೂ ಬಿಡುಗಡೆ ಮಾಡುವುದಾಗಿ ಆದೇಶ ಕೊಟ್ಟಿದ್ದಾರೆ. ಅಭಿವೃದ್ಧಿ ಕಾರ್ಯ ನಡೆಯದಿದ್ದರೆ ಹೋರಾಟ ಅನಿವಾರ್ಯ ಎಂದು ಹೇಳಿದರು.

ಸ್ಮಾರ್ಟ್ ಸಿಟಿ, ಏರ್ಪೋರ್ಟ್ ಕಾಮಗಾರಿ ತನಿಖೆ ವಿಚಾರ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ ಕಾಮಗಾರಿ ಕುರಿತು ಸಿಬಿಐ ತನಿಖೆ ನಡೆಸಲಿ, ತನಿಖಾಧಾರಿ ನೇಮಕ‌ಮಾಡಿ, ಮೂರು ತಿಂಗಳಲ್ಲಿ ವರದಿ ತರಲಿ ಎಂದು ಹೇಳಿದರು, ಬರೇ ಲೂಟಿಯಾಗಿದೆ ಅಂತ ಹೇಳೋದು ಯಾಕೆ ಸ್ವತಃ ಸಚಿವ ಎಂ‌ಬಿ‌ ಪಾಟೀಲರೇ ಏರ್ಪೋರ್ಟ್ ಕಾಮಗಾರಿ ಬಗ್ಗೆ ಪ್ರಶಂಶೆ ವ್ಯಕ್ತಪಡಿಸಿದ್ದಾರೆ ಒಂದು ವೇಳೆ ಅವ್ಯವಹಾರ ನಡೆದಿದೆ ಎಂದಿದ್ದರೆ ಅವತ್ತೇ ಮಧು ಬಂಗಾರಪ್ಪ ಹೇಳಬಹುದಿತ್ತಲ್ಲ ಅಧಿಕಾರಿಗಳನ್ನು ಹೆದರಿಸಲು ಈ ತಂತ್ರವೇ ಎಂದು ಕಿಡಿಕಾರಿದರು.

ಇದನ್ನೂ ಓದಿ: Dinesh Gundu Rao: ತಂಬಾಕು ನಿಷೇಧ ಕಾಯಿದೆ ತಿದ್ದುಪಡಿಗೆ ಚಿಂತನೆ: ದಿನೇಶ್ ಗುಂಡೂರಾವ್

Advertisement

Udayavani is now on Telegram. Click here to join our channel and stay updated with the latest news.

Next