Advertisement
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಮ್ಮ ಪಕ್ಷದ ಒಳ ಸಂಚಿನಿಂದ ಸೋತಿದ್ದಾಗಿ ಹೇಳುತ್ತಾರೆ. ಅವರ ಪಕ್ಷದ ಹಲವು ಶಾಸಕರುಗಳು ಸಹ ಸೋತಿದ್ದಾರೆ. ಅದು ಯಾರ ಸಂಚಿನಿಂದ? ಪರಮೇಶ್ವರ, ಮಲ್ಲಿಕಾರ್ಜುನ ಖರ್ಗೆ ಸೋತರು, ಅವರನ್ನು ಮನಸ್ಸಲ್ಲಿ ಇಟ್ಟು ಕೊಂಡು ಈ ಮಾತನ್ನು ಹೇಳಿದ್ದಾರೋ ಎಂದು ತಿರುಗೇಟು ನೀಡಿದರು.
Related Articles
Advertisement
ಜಾತಿವಾರು ಸಮೀಕ್ಷೆ ಬಿಡುಗಡೆ ಮಾಡಲು ಜೆಡಿಎಸ್ ಬಿಜೆಪಿ ಷಡ್ಯಂತ್ರ ಹೂಡಿದೆ ಎನ್ನುತ್ತಿದ್ದಾರೆ. ಹಾಗಾದರೆ ಸಿದ್ದರಾಮಯ್ಯನವರೇ ತಾವೇ ಮುಖ್ಯಮಂತ್ರಿಯಾಗಿದ್ದಾಗ ಯಾಕೆ ಬಿಡುಗಡೆ ಮಾಡಲಿಲ್ಲ? ಸಿದ್ದರಾಮಯ್ಯ ಸಿಎಂ ಆಗಿದ್ದಾಗಲು ಬಿಡುಗಡೆ ಮಾಡಲಿಲ್ಲ, ಸಮ್ಮಿಶ್ರ ಸರ್ಕಾರ ಇದ್ದಾಗ್ಯೂ ಬಿಡುಗಡೆ ಮಾಡಲಿಲ್ಲ ಯಾಕೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಎಲ್ಲ ರೀತಿಯ ಅಧಿಕಾರ ಪಡೆದು ಪಕ್ಷದ ನಾಯಕರಿಗೆ-ಕಾರ್ಯಕರ್ತರಿಗೆ ಅವಮಾನ ಮಾಡುತ್ತಿದ್ದೀರಿ. ಇದು ಒಳ್ಳೆಯ ರಾಜಕಾರಣಿಯ ಲಕ್ಷಣ ಅಲ್ಲ ಎಂದು ಈಶ್ವರಪ್ಪ ಕಿವಿಮಾತು ಹೇಳಿದರು.
ಸಿದ್ದರಾಮಯ್ಯನವರು ಬೇರೆ ಪಕ್ಷ ಕಟ್ಟುತ್ತಾರೆ. ಇಲ್ಲವೇ ಯಾವುದಾದರೂ ಪಕ್ಷ ದ ಜೊತೆಗೆ ಹೋಗುತ್ತಾರೆ ಎಂದ ಈಶ್ವರಪ್ಪ, ರಾಷ್ಟ್ರದಲ್ಲಿ ಬಿಜೆಪಿ ಪಕ್ಷದ ಒಂದೇ ಗಟ್ಟಿಯಾಗಿ ಉಳಿಯುತ್ತದೆ. ಬಿಜೆಪಿ ನಾಯಕರನ್ನು ನಿರ್ಮಾಣ ಮಾಡುವ ಪಕ್ಷ ಎಂದರು.