Advertisement

ಹೊಡೆದ್ರೆ ವಾಪಸ್ ಅದರಲ್ಲಿ ಹೊಡಿರಿ ಎಂದಿದ್ದು ತಪ್ಪಾ?: ಹೇಳಿಕೆ ಸಮರ್ಥಿಸಿಕೊಂಡ ಈಶ್ವರಪ್ಪ

11:42 AM Aug 09, 2021 | Team Udayavani |

ಶಿವಮೊಗ್ಗ: ಬಿಜೆಪಿ ಕಾರ್ಯಕರ್ತರನ್ನು ಮುಟ್ಟಿದರೆ ಸುಮ್ಮನಿರೆವು ಎಂದು ರವಿವಾರ ಹೇಳಿಕೆ ನೀಡಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಇಂದು ತಮ್ಮ ಹೇಳಿಕೆ ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ.

Advertisement

“ನಾನು ತುಂಬಾ ಸ್ಪಷ್ಟವಾಗಿ ಕಾರ್ಯಕರ್ತರಿಗೆ ಈಗಲೂ ಹೇಳುತ್ತಿದ್ದೇನೆ. ಒಂದು ಕಾಲದಲ್ಲಿ ಬಿಜೆಪಿಗೆ ಶಕ್ತಿ ಇರಲಿಲ್ಲ. ಉದಾಹರಣೆಗೆ ಕೇರಳದ ಬಗ್ಗೆ ಹೇಳಿದ್ದೆ. ರಾಷ್ಟ್ರೀಯ ಜನಸಂಘದ ಅಧ್ಯಕ್ಷ ದೀನದಯಾಳ್ ಉಪಾಧ್ಯಾಯ ಅವರನ್ನು ಕೊಲೆ ಮಾಡಿ, ಬಿಸಾಕಿ ಹೋಗಿದ್ದರು. ಅದರ ಬಗ್ಗೆ ನಮಗೆ ನೋವಿದೆ. ಅವಾಗ ನಮಗೆ ಶಕ್ತಿ ಇರಲಿಲ್ಲ. ಯಾರು ಹೊಡೆದರೂ ಯಾಕೆ ಕೊಲೆ ಮಾಡಿದರು ಎಂದು ತಿಳಿದುಕೊಳ್ಳುವ ಶಕ್ತಿಯೇ ಇರಲಿಲ್ಲ. ಕೇರಳದಲ್ಲಿ ಆರ್ ಎಸ್ಎಸ್ ಶಾಖೆ ಮಾಡುತ್ತಿದ್ದರೆ ಯುವಕರನ್ನು ಕೊಂದು ಹಾಕುತ್ತಿದ್ದರು. ಯಾರು ಹೇಳೋರು ಕೇಳೋರು ಇರಲಿಲ್ಲ‌‌. ಅದರೆ ಈಗ ಆ ಪರಿಸ್ಥಿತಿ ಇಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ.

ನಾವಾಗಿಯೇ ನಾವೇ ಯಾರನ್ನು ಮುಟ್ಟಲು ಹೋಗಲ್ಲ. ಯಾರ ಸುದ್ದಿಗೂ ಹೋಗಲ್ಲ. ಎಂತಹ ಸ್ಥಿತಿ ಬಂದರೂ ಶಾಂತವಾಗಿರಿ ಎಂದು ಹಿರಿಯರು ಹೇಳಿದ್ದರು. ಶಕ್ತಿ ಬಂದಮೇಲೆ ಹಿರಿಯರು ‘ಫೇಸ್ ವಿತ್ ದಿ ಸೇಮ್ ಸ್ಟಿಕ್’ ಎಂದು ಹೇಳಿದ್ದಾರೆ. ಇದು ನಾನು ಹೇಳಿದ್ದಲ್ಲ. ಹಿರಿಯರು ಹೇಳಿದ್ದನ್ನು ಮತ್ತೆ ಹೇಳಿದ್ದೆನೆ. ಹೊಡೆದರೆ ವಾಪಸ್ ಅದರಲ್ಲಿ ಹೊಡಿರಿ ಎಂದಿದ್ದು ತಪ್ಪಾ? ಎಂದು ಸಚಿವ ಈಶ್ವರಪ್ಪ ಪ್ರಶ್ನಿಸಿದರು.

ಇದನ್ನೂ ಓದಿ:ಬಿಗಿ ಉಡುಪು ಧರಿಸಿದ್ದಾರೆಂಬ ಕಾರಣಕ್ಕೆ ಯುವತಿಯನ್ನು ಗುಂಡಿಕ್ಕಿ ಕೊಂದ ತಾಲಿಬಾನ್!

ಬದಲಾಗಿ ಒದ್ದರೂ ಒದೆಸಿಕೊಂಡಿರಿ, ಕೊಲೆ ಮಾಡಿದರೆ ಸುಮ್ಮನೀರಿ ಎನ್ನಲೇ‌? ಉಡುಪಿಯಲ್ಲಿ ಕೊಟ್ಟಿಗೆಯಲ್ಲಿದ್ದ ಕರು ಕದ್ದುಕೊಂಡು ಹೋಗೋದ್ದನ್ನು ಕೇಳಿದ್ದಕ್ಕೆ ಕೊಲೆ ಮಾಡಿದ್ದರು. ಆ ಸಂದರ್ಭದಲ್ಲಿ ಕಂಪ್ಲೇಂಟ್ ಕೊಟ್ಟಿದ್ದರೂ ಕೂಡ ತೆಗೆದುಕೊಂಡಿರಲಿಲ್ಲ. ಸಿದ್ದರಾಮಯ್ಯನವರ ಸರ್ಕಾರ ಇದ್ದಾಗ ಕೇಳಿದರೆ ಕೋಮುವಾದಿಗಳನ್ನು ಬಗ್ಗು ಬಡಿತೀವಿ ಎಂದಿದ್ದರು. ಗೋ ಕಳ್ಳತನ ತಡೆಯಲು ಹೋದ ಯುವಕರನ್ನೇ ಕೊಂದರು‌. ಸರ್ಕಾರ ಕೊಲೆ ಮಾಡಿದವರ ಪರವಾಗಿ ಹೋಯ್ತು. ಗೋಮಾತೆ ಶಾಪದಿಂದ ಸಿಎಂ ಸ್ಥಾನ ಹೊಯ್ತು. ಸರ್ಕಾರನೂ ಹೋಯ್ತು ಎಂದು ಹೇಳಿದರು.

Advertisement

ನಾನು ಈಗಲು ಹಿರಿಯರು ಹೇಳಿದನ್ನೇ ಹೇಳುತ್ತಿದ್ದೇನೆ.  ನೀವಾಗಿಯೇ ಯಾರ ಸುದ್ದಿಗೂ ಹೋಗ್ಬೇಡಿ. ನಿಮಗ್ಯಾರು ಹೊಡೆದರೆ ಬಿಡಬೇಡಿ ಎಂದೆ ಅದರಲ್ಲಿ ತಪ್ಪೇನಪ್ಪಾ? ಅಂದಿನ ಕಾಲಕ್ಕೂ, ಇಂದಿನ ಕಾಲಕ್ಕೂ ಇರುವ ವ್ಯತ್ಯಾಸವನ್ನು ಕಾರ್ಯಕರ್ತರಿಗೆ ತಿಳಿಸಿದ್ದೆನೆ. ನಾನೇನು ಸಾರ್ವಜನಿಕ ಸಭೆಯಲ್ಲಿ ಕರೆ ಕೊಟ್ಟಿಲ್ಲ. ನಮ್ಮ ಕಾರ್ಯಕರ್ತರ ಸಭೆಯಲ್ಲಿ ಹೇಳಿದ್ದೆನೆ. ಗ್ರಾ.ಪಂ ಸದಸ್ಯರಿಂದ ಪ್ರಧಾನಿವರೆಗೂ ಬಿಜೆಪಿಯವರೇ ಇದ್ದೆವೆ. ಈಗಲೂ ಸುಮ್ಮನಿರಬೇಕೆ? ಪ್ರಾಮಾಣಿಕವಾಗಿ ಇರುವುದನ್ನು ಹೇಳಿದ್ದೇನೆ. ನನ್ನ ಹೇಳಿಕೆಗೆ ಈಗಲೂ ಬದ್ಧ ಎಂದ ಈಶ್ವರಪ್ಪ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next