ಕಾರ್ಯಕರ್ತರು, ಬ್ಯಾಂಕ್‌ಗೆ ಈ ಸಂಬಂಧ ಒಂದು ತಿಂಗಳ ಗಡುವು ನೀಡಿದರು. ಟಿ.ಎ. ನಾರಾಯಣಗೌಡ ನೇತೃತ್ವದಲ್ಲಿ ಬ್ಯಾಂಕ್
ನ ಪ್ರಧಾನ ಕಚೇರಿ ಎದುರು ಬುಧವಾರ ಜಮಾವಣೆಗೊಂಡ ವೇದಿಕೆ ಕಾರ್ಯಕರ್ತರು, ಸ್ಥಳೀಯ ಭಾಷೆಯಲ್ಲಿಯೇ ಎಲ್ಲಾ ರೀತಿಯ
ವ್ಯವಹಾರ ನಡೆಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ರೂಪಿಸಿರುವ ನಿಯಮ ಹೇಳುತ್ತದೆ. ಆದರೆ ನಿಯಮ ಸಮರ್ಪಕ ಪಾಲನೆ ಆಗುತ್ತಿಲ್ಲ. ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದ್ದು, ಇದು ಪ್ರಜಾಪ್ರಭುತ್ವದ ವಿರೋಧಿ ಧೋರಣೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ನಾರಾಯಣಗೌಡ, ಮುಂದಿನ ಒಂದು ತಿಂಗಳಲ್ಲಿ ಬ್ಯಾಂಕ್‌ನ ಎಲ್ಲಾ ವ್ಯವಹಾರಗಳನ್ನು ಕನ್ನಡದಲ್ಲಿಯೇ ಮಾಡಬೇಕು. ಕನ್ನಡಬಾರ
ದವರನ್ನು ವರ್ಗಾವಣೆ ಮಾಡಿ ಅವರ ಸ್ಥಾನಕ್ಕೆ ಕನ್ನಡಿಗರನ್ನು ನೇಮಿಸಬೇಕು ಎಂದು ಗಡುವು ನೀಡಿದರು. ಎಟಿಎಂ, ಆನ್‌ಲೈನ್ ಹಾಗೂ ಮೊಬೈಲ್ ಸೇವೆಗಳು ಸೇರಿದಂತೆ ಎಸ್‌ಬಿಎಂನ ಎಲ್ಲಾ ಸೇವೆಗಳು ಕನ್ನಡದಲ್ಲಿ ಸಿಗುವಂತಾಗಬೇಕು. ಬ್ಯಾಂಕ್‌ನ ಎಲ್ಲಾ ಹಂತದ ಹುದ್ದೆಗಳ ನೇಮಕಾತಿಯಲ್ಲಿಯೂ ಕನ್ನಡಿಗರಿಗೆ ಅವಕಾಶ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಕನ್ನಡದ ಹಿರಿಯ ಸಾಹಿತಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ. ಬ್ಯಾಂಕ್ ಗಳಲ್ಲಿ ಕನ್ನಡ ಅನುಷ್ಠಾನದ ಬಗ್ಗೆ ವರದಿ ತರಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಎಸ್‌ಬಿಐನಲ್ಲಿ ಇಂಗ್ಲಿಷ್ ಮತ್ತು ಹಿಂದಿಯ ನಾಮಫಲಕ, ಸೂಚನೆಗಳು, ಪ್ರಕಟಣೆಗಳು, ಅರ್ಜಿ ನಮೂನೆಗಳಿಗೆ ಕನ್ನಡದಲ್ಲಿ ಯಾವ ವ್ಯವಹಾರವೂ ನಡೆಯುತ್ತಿಲ್ಲ ಎಂಬ ಆರೋಪಗಳು ಬರುತ್ತಿವೆ. ಚೆಕ್ ಪುಸ್ತಕಗಳಲ್ಲೂ ಇಂಗ್ಲಿಷ್ ಮತ್ತು ಹಿಂದಿ ಮಾತ್ರ ಇದೆ. ನೇಮಕಾತಿಯಲ್ಲೂ ಕನ್ನಡಿಗರನ್ನು ಕಡೆಗಣಿಸಿ ಅನ್ಯಭಾಷಿಕರನ್ನೇ ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸಿಕೊಳ್ಳಲಾಗುತ್ತಿದೆ. ಉತ್ತರ ಭಾರತೀಯ
ನೌಕರರು ಕನ್ನಡ ಗ್ರಾಹಕರೊಂದಿಗೆ ಉದ್ಧಟತನದಿಂದ ವರ್ತಿಸುತ್ತಿದ್ದಾರೆ. ಕನ್ನಡ ನಾಡಿನಲ್ಲಿ ವ್ಯವಹರಿಸುವ ಎಸ್‌ಬಿಐ ಅಧಿಕಾರಿಗಳು ಕೂಡಲೇ ಕನ್ನಡ ವಿರೋಧಿ ಧೋರಣೆ ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಕನ್ನಡಕ್ಕೆ ಧಕ್ಕೆಯಾಗಿಲ್ಲ ರಾಜ್ಯದಲ್ಲಿರುವ ಎಸ್‌ಬಿಐನ ಎಲ್ಲಾ ಶಾಖೆಗಳಲ್ಲಿ ಕನ್ನಡ ಭಾಷೆಗೆ ಹೆಚ್ಚು ಅದ್ಯತೆ ನೀಡಲಾಗಿದೆ. ಅಲ್ಲದೆ, ನೇಮಕಾತಿಗಳಲ್ಲಿಯೂ ಕನ್ನಡಿಗರಿಗೆ ಸಮಾನ ಅವಕಾಶ ನೀಡಲಾಗುತ್ತಿದೆ. ಎಸ್‌ಬಿಐ ಪ್ರಕಟಿಸುವ ಕ್ಯಾಲೆಂಡರ್‌ಗಳೂ ಸಹ ಕನ್ನಡದಲ್ಲಿಯೇ ಪ್ರಕಟವಾಗುತ್ತಿವೆ. ಕನ್ನಡ ಭಾಷೆಗೆ ದಕ್ಕೆಯಾಗುವುದಕ್ಕೆ ಅವಕಾಶ ನೀಡಿಲ್ಲ ಎಂದು ಮಾನವ ಸಂಪನ್ಮೂಲ ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕ ವಾಸುದೇವ ಅಡಿಗ ಸ್ಪಷ್ಟನೆ ನೀಡಿದರು.
Advertisement