Advertisement

ವ್ಯರ್ಥವಾಗುವ ನೀರು ತಾಲೂಕಿನ ಕೆರೆಗಳಿಗೆ ಹರಿಸಿ

03:35 PM Aug 12, 2019 | Team Udayavani |

ಕೆ.ಆರ್‌.ಪೇಟೆ: ನಿರೀಕ್ಷೆಗೂ ನಿಲುಕದಂತೆ ಧಾರಾಕಾರ ಮಳೆ ಸುರಿಯುತ್ತಿದ್ದರುವುದರಿಂದ ರಾಜ್ಯದಲ್ಲಿನ 15 ಜಿಲ್ಲೆಗಳಲ್ಲಿ ಸಾವಿರಾರು ಮನೆಗಳು ನೀರಿನಲ್ಲಿ ಮುಳುಗುತ್ತಿರುವಾಗಲೂ ಗೋರೂರು ಮತ್ತು ಕೆಆರ್‌ಎಸ್‌ ಅಣೆಕಟ್ಟೆಗೆ ಹೊಂದಿಕೊಂಡಂತಿರುವ ತಾಲೂಕಿನಲ್ಲಿರುವ ಕೆರೆಗಳು ನೀರಿಲ್ಲದೆ ಬಣಗುಡುತ್ತಿವೆ.

Advertisement

ತಾಲೂಕಿನಲ್ಲಿ 200ಕ್ಕೂ ಹೆಚ್ಚು ಕೆರೆಗಳಿದ್ದು 92 ಕೆರೆಗಳನ್ನು ಕಾವೇರಿ ನೀರಾವರಿ ನಿಗಮದಿಂದ ನಿರ್ವಹಣೆ ಮಾಡುತ್ತಿದ್ದರೆ, 7 ಕೆರೆಗಳನ್ನು ಸಣ್ಣ ನೀರಾವರಿ ಇಲಾಖೆ ಜಿಪಂ ವತಿಯಿಂದ 169 ಕೆರೆಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ. ಕಾವೇರಿ ನೀರಾವರಿ ನಿಗಮದಿಂದ ನಿರ್ವಹಣೆ ಮಾಡುತ್ತಿರುವ 92 ಕೆರೆಗಳನ್ನು ಹೊರತು ಪಡಿಸಿ ಇನ್ನುಳಿದ ಕರೆಗಳು ಮಳೆಯಾಶ್ರಿತವಾಗಿದ್ದು ಮಳೆ ಬಂದರೆ ಮಾತ್ರ ನೀರು ಸಂಗ್ರಹವಾಗುತ್ತದೆ. ತಾಲೂಕಿನಲ್ಲಿ ಕಳೆದ ಮೂರು ವರ್ಷಗಳಿಂದ ಸರಿಯಾಗಿ ಮಳೆಯಾಗದಿರುವ ಕಾರಣ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕೆರೆಗಳಿಗೆ ನೀರು ತುಂಬಿಸಲು ಆಸಕ್ತಿ ವಹಿಸದೇ ಇದ್ದು, ತಾಲೂಕಿನಲ್ಲಿರುವ ಎಲ್ಲಾ ಕೆರೆಗಳು ಖಾಲಿಯಾಗಿವೆ. ಅಂತರ್ಜಲ ಸಂಪೂರ್ಣ ಕುಸಿತ ಕಂಡಿದ್ದು ರೈತರು ನೀರಿಗಾಗಿ 1000 ಅಡಿಗಳಷ್ಟು ಆಳಕ್ಕೆ ಕೊಳವೆ ಬಾವಿ ಕೊರೆಸುತ್ತಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯ: ಸಣ್ಣ ನೀರಾವರಿ ಮತ್ತು ಜಿಪಂ ಇಲಾಖೆಗಳು ನಿರ್ವಹಣೆ 176 ಕೆರೆಗಳಿಗೆ ಮಳೆಬಂದರೆ ಮಾತ್ರ ನೀರು ತುಂಬುತ್ತವೆ. ಆದರೆ ಕಾವೇರಿ ನೀರಾವರಿ ನಿಗಮದಿಂದ ನಿರ್ವಹಣೆ ಮಾಡುತ್ತಿರುವ ಸಾರಂಗಿ, ಕೆ.ಆರ್‌.ಪೇಟೆ, ಸಿಂಧುಘಟ್ಟ, ಹರಳಹಳ್ಳಿ, ಹೊಸಹೊಳಲು, ವಳಗರೆ ಮೆಣಸ, ಸಾದಗೋನಹಳ್ಳಿ, ಅಗ್ರಹಾರಬಾಚಹಳ್ಳಿ, ಸೇರಿದಂತೆ 92 ಕೆರೆಗಳಿಗೆ ಗೊರೂರು ಅಣೆಕಟ್ಟೆಯಿಂದ ಸಾಹುಕಾರ್‌ ಚನ್ನಯ್ಯ, ಭಾರತೀಪುರ ನಾಲೆಗಳ ಮೂಲ ನೀರನ್ನು ಹರಿಸಿ ಕೆರೆಗಳನ್ನು ತುಂಬಿಸ ಬಹುದಾಗಿದೆ. ಆದರೆ ಅಧಿಕಾರಿ ಗಳು ಹಾಗೂ ಜನ ಪ್ರತಿನಿಧಿಗಳ ನಿರಾಸಕ್ತಿ ಅಥವಾ ಬೇಜವ್ದಾರಿ ಯಿಂದ ಕೆರೆಗಳು ಖಾಲಿಯಾಗಿವೆ. ಆದರೆ ರಾಜ್ಯದಲ್ಲಿ ಪ್ರವಾಹ ಬಂದಿ ದ್ದರೂ ನಮ್ಮ ತಾಲೂಕಿನಲ್ಲಿ ಅದರಲ್ಲಿಯೂ ನೀರಾವರಿ ಪ್ರದೇಶಗಳ ಕೆರೆಗಳು ಖಾಲಿ ಇವೆ ಎಂದರೆ ನಂಬಲಸಾಧ್ಯ. ಆದರೆ ನಮ್ಮ ತಾಲೂಕಿನಲ್ಲಿ 200 ಕ್ಕೂ ಹೆಚ್ಚು ಕೆರೆಗಳಲ್ಲಿಯೂ ಶೇ. 10-20 ಮಾತ್ರ ನೀರು ಸಂಗ್ರಹವಾಗಿದ್ದು, ಇನ್ನುಳಿದ ಜಾಗ ಖಾಲಿ ಇರುವುದು ಸತ್ಯ. ಗೋರೂರು ಅಣೆಕಟ್ಟೆಯಿಂದ ನೀರನ್ನು ನೇರವಾಗಿ ಕೆಆರ್‌ಎಸ್‌ಗೆ ಹರಿಸುತ್ತಿರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next