ಕೆ.ಆರ್.ಪೇಟೆ: ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮಳೆ, ಪ್ರವಾಹಕ್ಕೆ ಸಿಲುಕಿ ಬದುಕು ಕಳೆದುಕೊಂಡಿರುವ ಸಂತ್ರಸ್ತರ ನೆರವಿಗೆ ಕೈಜೋಡಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಾಲೂಕಿನ ಹೊಸಹೊಳಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸ‌್ಯಕ್ಷ ಎಚ್.ಕೃಷ್ಣೇಗೌಡ ತಿಳಿಸಿದರು.
ಹೊಸಹೊಳಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಮುಖ್ಯ ಮಂತ್ರಿಗಳ ಪ್ರವಾಹ ಸಂತ್ರಸ್ತರ ಪರಿಹಾರ ನಿಧಿಗೆ 25 ಸಾವಿರ ರೂ. ಚೆಕ್ ಅನ್ನು ತಹಶೀಲ್ದಾರ್ ಎಂ.ಶಿವಮೂರ್ತಿ ಅವರಿಗೆ ನೀಡಿ ಮಾತನಾಡಿದರು.
ಪರಿಹಾರದ ಚೆಕ್ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಶಿವಮೂರ್ತಿ, ನಮ್ಮ ಕರ್ನಾಟಕದ ಸುಮಾರು 17 ಜಿಲ್ಲೆಗಳಲ್ಲಿ ಭೀಕರ ಪ್ರವಾಹ ಉಂಟಾಗಿ ಕೋಟ್ಯಂತರ ರೂಪಾಯಿ ಆಸ್ತಿಪಾಸ್ತಿ ನಷ್ಟ ಉಂಟಾಗಿದೆ. ಲಕ್ಷಾಂತರ ಮಂದಿ ಸಂತ್ರಸ್ತರಾಗಿದ್ದಾರೆ. ಅವರ ನೆರವಿಗೆ ಪ್ರತಿಯೊಬ್ಬರೂ ಮಾನ ವೀಯ ನೆಲೆಗಟ್ಟಿನಲ್ಲಿ ನಿಲ್ಲಬೇಕಾಗಿದೆ. ಇದೇ ತಾಲೂಕಿನ ಇತರೆ ಎಲ್ಲಾ ಸಂಘ ಸಂಸ್ಥೆಗಳು, ದಾನಿಗಳು, ಉದಾರವಾಗಿ ದೇಣಿಗೆ ನೀಡುವ ಮೂಲಕ ಸಂತ್ರಸ್ತರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ಗಾಯತ್ರಿ ನಿರ್ದೇಶಕರಾದ ಪ್ರಕಾಶ್, ಕೃಷ್ಣೇಗೌಡ, ಈರಯ್ಯ, ಸಂಘದ ಸಿಇಒ ಯೋಗೇಂದ್ರ, ಎಚ್.ಕೆ.ಅಶೋಕ್, ಚಂದ್ರೇಗೌಡ, ನಾಗರತ್ನ, ಚಂದ್ರಹಾಸ, ಎಚ್.ಎಸ್.ರಘು, ಕಾಂತರಾಜು ಇದ್ದರು.
ಮಂಡ್ಯ: ನೆರೆ ಹಾವಳಿಗೆ ಸಿಲುಕಿರುವವರ ಕಣ್ಣೀರೊರೆಸಿ ಅವರ ಸಂಕಷ್ಟಕ್ಕೆ ಸ್ಪಂದಿಸುವುದು ಮಾನವೀಯ ಧರ್ಮ. ಪ್ರವಾಹದಿಂದ ನೆಲೆ ಕಳೆದುಕೊಂಡು ನಿರಾಶ್ರಿತರಾದವರ ನೆರವಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಸರ್ಕಾರಿ ಕಾಲೇಜು ಬಾಲಕಿಯರ ವಿದ್ಯಾರ್ಥಿ ನಿಲಯದ ನಿಲಯಪಾಲಕಿ ವೈ,ಡಿ.ನಿರ್ಮಲಾ ಹೇಳಿದರು.
ನಗರದ ಪೊಲೀಸ್ ಕಾಲೋನಿಯಲ್ಲಿರುವ ಸರ್ಕಾರಿ ಕಾಲೇಜು ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ನೆರೆ ಸಂತ್ರಸ್ತರ ನೆರವಿಗಾಗಿ ಅಳಿಲು ಸೇವೆ ಎಂಬ ಘೋಷಣೆಯೊಂದಿಗೆ ವಿದ್ಯಾರ್ಥಿನಿಯರು ತಿಂಡಿ-ತಿನಿಸು ಮತ್ತು ಆಹಾರ ಪದಾರ್ಥಗಳನ್ನು ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ರಾಜ್ಯದ ಉತ್ತರ ಕರ್ನಾಟಕ, ಕೊಡಗು, ದಕ್ಷಿಣ ಕನ್ನಡ ಜಿಲ್ಲೆ ನೆರೆಯಿಂದ ಅಪಾರ ಜನ-ಸಂಪತ್ತು ನಾಶವಾಗಿದೆ. ಮಕ್ಕಳು ಮಹಿಳೆಯರು, ಜಾನುವಾರುಗಳು ಜೀವ ಉಳಿಸಿಕೊಳ್ಳಲು ಪರದಾಡುತ್ತಿವೆ.
ಪ್ರವಾಹದ ಹೊಡೆತದಿಂದ ಜರ್ಜರಿತರಾಗಿರುವ ಅವರ ಸಂಕಷ್ಟಗಳಿಗೆ ಸ್ಪಂದಿಸಿ ಹೊಸ ಜೀವನವನ್ನು ಕಟ್ಟಿಕೊಡುವುದಕ್ಕೆ ಎಲ್ಲರೂ ಮುಂ ದಾಗಬೇಕು ಎಂದು ಹೇಳಿದರು.
ವಿದ್ಯಾರ್ಥಿನಿಲಯದ ವಿದ್ಯಾರ್ಥಿನಿ ಯರು ಮಾನವೀಯತೆ ಮೆರದು ನೆರೆ ಸಂತ್ರಸ್ತರ ನೆರವಿಗೆ ಧಾವಿಸಿ, ಆಹಾರ ಪದಾರ್ಥಗಳನ್ನು ನೀಡುತ್ತಿದ್ದಾರೆ.
ಇದನ್ನು ನಗರಸಭೆ ಮೂಲಕ ರವಾ ನಿಸಲಾಗುವುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನಿಲಯದ ವಿದ್ಯಾರ್ಥಿ ನಿಯರು ಹಾಜರಿದ್ದರು.