Advertisement

ಕೆ.ಪಿ. ರಾವ್‌ ಅವರಿಗೆ ಕಾರಂತ ಬಾಲವನ ಪ್ರಶಸ್ತಿ

01:58 AM Sep 30, 2021 | Team Udayavani |

ಪುತ್ತೂರು: ಕಂಪ್ಯೂಟರ್‌ಗೆ ಕನ್ನಡ ಪರಿಚಯಿಸಿದ ವಿಜ್ಞಾನಿ, “ಕೆ.ಪಿ. ರಾವ್‌ ಕೀಲಿಮಣೆ’ ವಿನ್ಯಾಸ ತಜ್ಞ ಕಿನ್ನಿಕಂಬಳ ಪದ್ಮನಾಭ ರಾವ್‌ ಅವರಿಗೆ 11ನೇ ವರ್ಷದ ಬಾಲವನ ಪ್ರಶಸ್ತಿಯನ್ನು ಅ. 10ರಂದು ಪರ್ಲಡ್ಕದಲ್ಲಿರುವ ಡಾ| ಶಿವರಾಮ ಕಾರಂತ ಬಾಲವನದಲ್ಲಿ ಪ್ರದಾನ ಮಾಡಲಾ ಗುವುದು ಎಂದು ಪುತ್ತೂರು ಸಹಾಯಕ ಆಯುಕ್ತ ಡಾ| ಯತೀಶ್‌ ಉಳ್ಳಾಲ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advertisement

ಕಂಪ್ಯೂಟರ್‌, ಟ್ಯಾಬ್ಲೆಟ್‌, ಮೊಬೈಲ್‌ಗ‌ಳಲ್ಲಿ ಬಳಸುವ ಕನ್ನಡ ಕೆ.ಪಿ. ರಾಯರು ಅಭಿವೃದ್ಧಿಪಡಿಸಿದ ಕೀಲಿಮಣೆ ವಿನ್ಯಾಸವನ್ನು ಅವಲಂಬಿಸಿದೆ. ತನ್ನ ಈ ಸಂಶೋಧನೆಗಾಗಿ ಪೇಟೆಂಟನ್ನೂ ಪಡೆಯದೆ ಅದನ್ನು ಕನ್ನಡಕ್ಕಾಗಿ ಸಮರ್ಪಿಸಿದ ಮಹಾನುಭಾವರಾದ ಇವರಿಗೆ ಅರ್ಹವಾಗಿಯೇ ಪ್ರಶಸ್ತಿ ಸಲ್ಲುತ್ತಿದೆ.

ಇದನ್ನೂ ಓದಿ:ಇನ್ಫಿ, ವಿಪ್ರೋ ಉದ್ಯೋಗಿಗಳಿಗೆ ಸೆಬಿ ನಿರ್ಬಂಧ

ಡಾ| ಕುರಂಜಿ ವೆಂಕಟ್ರಮಣ ಗೌಡರ ಹೆಸರಿನ ದತ್ತಿನಿಧಿಯಿಂದ ಹಾಗೂ ಬಾಲವನದ ವತಿಯಿಂದ ನೀಡಲ್ಪಡುವ ಈ ಪ್ರಶಸ್ತಿಯು 25,000 ಸಾವಿರ ರೂ. ನಗದು, ಸ್ಮರಣಿಕೆ, ಸಮ್ಮಾನ ಪತ್ರವನ್ನು ಹೊಂದಿರುತ್ತದೆ. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಅಂಗಾರ ಉಪಸ್ಥಿತಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್‌ ಕುಮಾರ್‌ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next