Advertisement
ಅಶೋಕ್ ಗಸ್ತಿ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಬಿಜೆಪಿಯು ಅವರನ್ನು ಅಭ್ಯರ್ಥಿಯಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ ಅವರೊಂದಿಗೆ “ಉದಯವಾಣಿ’ ನಡೆಸಿದ ಕಿರು ಸಂದರ್ಶನದ ಸಂಕ್ಷಿಪ್ತ ರೂಪ ಇಲ್ಲಿದೆ.
ನಾನು ಮೂಲತಃ ಮಂಗಳೂರಿನ ಅಶೋಕ ನಗರದವನಾಗಿದ್ದು, ಅಲ್ಲಿಯೇ ಓದಿ, ಬೆಳೆದವನು. ಈ ವರೆಗೆ ಯಾವುದೇ ರಾಜಕೀಯ ಪಕ್ಷದಲ್ಲೂ ಗುರುತಿಸಿಕೊಂಡಿರಲಿಲ್ಲ. ತಿಂಗಳ ಹಿಂದಷ್ಟೇ ಬಿಜೆಪಿ ನೇಕಾರ ಪ್ರಕೋಷ್ಠದ ಸಹ ಸಂಚಾಲಕನಾಗಿ ಆಯ್ಕೆಯಾಗಿದ್ದೆ. ಬೆಂಗಳೂರಿನಲ್ಲಿ ಸ್ಪಾನ್ ಮುದ್ರಣಾಲಯ ನಡೆಸುತ್ತಿದ್ದೇನೆ. – ಸಮಾಜ ಸೇವೆಗೆ ಸ್ಫೂರ್ತಿ ಏನು?
ಸಮಾಜದ ಸಮಗ್ರ ಅಭಿವೃದ್ಧಿಯೇ ಸ್ಫೂರ್ತಿ. ಮಂಗ ಳೂರಿನ ಅಶೋಕನಗರದಲ್ಲಿ ಬಡವರಿಗಾಗಿ ಸಭಾಂಗಣ ನಿರ್ಮಿಸಿದ್ದೇನೆ. ಬಡವರಿಗೆ ಭೂದಾನ ಮಾಡಿ, ಅಲ್ಲಿ ಮನೆಗಳನ್ನು ನಿರ್ಮಿಸಿದ್ದು, ದೇವಸ್ಥಾನ ಮತ್ತು ಆಶ್ರಮಗಳ ಅಭಿವೃದ್ಧಿಗೆ ಶ್ರಮಿಸಿರುವ ಜತೆಗೆ ಬಡ ಮಕ್ಕಳ ಶಿಕ್ಷಣಕ್ಕಾಗಿಯೂ ದುಡಿಯುತ್ತಿದ್ದೇನೆ.
Related Articles
ಇಲ್ಲ. ಮಂಗಳವಾರ ನಳಿನ್ ಕುಮಾರ್ ಕಟೀಲು ಅವರು ದೂರವಾಣಿ ಕರೆ ಮಾಡಿ, ನಾಮಪತ್ರ ಸಲ್ಲಿಸಲು ಬೇಕಾದ ದಾಖಲೆಗಳನ್ನು ಸಿದ್ಧಪಡಿಸುವಂತೆ ಹೇಳಿದರು. ಅನಂತರ ದಿಲ್ಲಿಯಿಂದಲೂ ಕರೆ ಬಂತು. ಆಗ ಆಶ್ಚರ್ಯವಾಗಿತ್ತು.
Advertisement
– ಸಂಘ ಪರಿವಾರದೊಂದಿಗೆ ಗುರುತಿಸಿಕೊಂಡಿದ್ದೀರಾ?ಸಂಘ ಪರಿವಾರದ ಸಂಘಟನೆಗಳಲ್ಲಿ 25 ವರ್ಷ ಗಳಿಂದಲೂ ಸಕ್ರಿಯನಾಗಿದ್ದೇನೆ. ಮಂಗಳೂರಿನ ದಿಗಂತ ಮುದ್ರಣಾಲಯದಲ್ಲಿ 25 ವರ್ಷಗಳಿಂದ ತಾಂತ್ರಿಕ ನಿರ್ದೇಶಕನಾಗಿದ್ದೇನೆ. ಹಿಂದೂ ಸೇವಾ ಪ್ರತಿಷ್ಠಾನದಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸಿದ್ದೇನೆ. ಪರಿವಾರದ ಸಂಸ್ಕೃತ ಪತ್ರಿಕೆ “ಸಂಭಾಷಣಾ ಸಂದೇಶ’ದ ಪ್ರಕಾಶಕನಾಗಿದ್ದೇನೆ. – ಬಿಜೆಪಿ ಹಾಗೂ ರಾಜಕಾರಣಿಗಳೊಂದಿಗಿನ ಒಡನಾಟ?
ಬೆಂಗಳೂರಿನಲ್ಲೇ ಇದ್ದರೂ ಬಿಜೆಪಿ ಕಚೇರಿಗೆ ಹೋಗದೆ ಒಂದು ವರ್ಷ ಕಳೆದಿದೆ. ಯಾರನ್ನೂ ಭೇಟಿ ಮಾಡಿಲ್ಲ. ನಮ್ಮ ಇಡೀ ಕುಟುಂಬದಲ್ಲಿ ರಾಜಕೀಯವಾಗಿ ಗುರುತಿಸಿ ಕೊಂಡವರ್ಯಾರೂ ಇಲ್ಲ. ನನಗೂ ಯಾವುದೇ ರಾಜಕೀಯ ನಾಯಕರ ಸಹವಾಸವೂ ಇಲ್ಲ. ಸಮಾಜ ಸೇವೆಯೇ ಈ ಆಯ್ಕೆಗೆ ಮಾನದಂಡವಾದಂತಿದೆ. – ಪಕ್ಷ ಗುರುತಿಸಿರುವ ಬಗ್ಗೆ ಏನೆನ್ನುತ್ತಿರಿ?
ಫಲಾಪೇಕ್ಷೆ ಇಲ್ಲದೆ ಸಮಾಜದ ಸೇವೆ ಮಾಡುತ್ತಿದ್ದರೆ ಒಂದು ದಿನ ಸಮಾಜ ನಮ್ಮನ್ನು ಗುರುತಿಸುತ್ತದೆ ಎನ್ನುವುದಕ್ಕೆ ಇದು ನಿದರ್ಶನ. ನಾವು ಮಾಡಿದ ಸಮಾಜ ಸೇವೆ ಒಂದಲ್ಲೊಂದು ದಿನ ಫಲ ಕೊಟ್ಟೇ ಕೊಡುತ್ತದೆ. – ರಾಜು ಖಾರ್ವಿ ಕೊಡೇರಿ