Advertisement

ಒಳ್ಳೆಯ ಕಥೆ ಮಾಡಿ, ನಿರ್ಮಾಪಕರು ಬರ್ತಾರೆ

10:43 AM Apr 27, 2020 | Suhan S |

ಒಳ್ಳೆಯ ಕಥೆಗಾಗಿ ಎದುರು ನೋಡುತ್ತಿದ್ದೇನೆ…. ಚಿತ್ರರಂಗದಲ್ಲಿ ಹೀಗೆ ಅನೇಕ ಕಲಾವಿದರು, ನಿರ್ಮಾಪಕರು ಹೇಳುತ್ತಲೇ ಇರುತ್ತಾರೆ. ಅದರಲ್ಲೂ ಇತ್ತೀಚೆಗೆ ಕಂಟೆಂಟ್‌ ಸಿನಿಮಾಗಳನ್ನು ಜನ ಇಷ್ಟಪಡಲಾರಂಭಿಸಿದ ದಿನದಿಂದ ಕಥೆಗೆ ಮಹತ್ವ ನೀಡುವವರ ಸಂಖ್ಯೆ ಹೆಚ್ಚಾಗಿದೆ. ಈಗ ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಕೆ.ಮಂಜು ಕೂಡಾ ನಿರ್ದೇಶಕರಿಗೆ ಒಂದು ಕಿವಿಮಾತು ಹೇಳಿದ್ದಾರೆ. ಅದೇನೆಂದರೆ ಒಳ್ಳೆಯ ಕಥೆ ಮಾಡಿ ಎಂದು. ಸದ್ಯ ಲಾಕೌ ಡೌನ್‌ನಿಂದಾಗಿ ಎಲ್ಲರೂ ಮನೆಯಲ್ಲೇ ಇದ್ದಾರೆ. ಈ ಸಮಯವನ್ನು ನಿರ್ದೇಶಕರು ಸದುಪಯೋಗ ಮಾಡಬೇಕೆಂಬುದು ಮಂಜು ಅವರ ಮಾತು.

Advertisement

ಈಗ ನಿರ್ದೇಶಕರೆಲ್ಲಾ ಮನೆಯಲ್ಲೇ ಇದ್ದಾರೆ. ಈ ಸಮಯದಲ್ಲಿ ಯೋಚಿಸಿ, ಒಳ್ಳೆಯ ಕಥೆ ಮಾಡಬೇಕು. ಕಡಿಮೆ ಬಜೆಟ್‌ನಲ್ಲಿ ಮಾಡುವಂತಹ, ಇಡೀ ಫ್ಯಾಮಿಲಿ ಮಂದಿ ಕುಳಿತು ನೋಡುವಂತಹ ಸ್ಕ್ರಿಪ್ಟ್ ಮಾಡಿದರೆ, ಲಾಕ್‌ ಡೌನ್‌ ಮುಗಿದ ಬಳಿಕ ನಿರ್ಮಾಪಕರು ಸಿನಿಮಾ ಮಾಡಲು ಮುಂದಾಗುತ್ತಾರೆ. ಆ ನಿಟ್ಟಿನಲ್ಲಿ ನಿರ್ದೇಶಕರು ಗಮನಹರಿಸಬೇಕು ಎನ್ನುವುದು ಮಂಜು ಮಾತು. ಒಳ್ಳೆಯ ಕಥೆ ಮಾಡಿಟ್ಟುಕೊಂಡರೆ ಮುಂದಿನ ದಿನಗಳಲ್ಲಿ ಚಿತ್ರರಂಗಕ್ಕೆ ಸಹಾಯವಾಗಲಿದೆ ಎನ್ನುತ್ತಾರೆ ಮಂಜು. ನಿರ್ಮಾಪಕ ಕೆ.ಮಂಜು ಸದ್ಯ ವಿಷ್ಣುಪ್ರಿಯಾ ಚಿತ್ರ ನಿರ್ಮಿಸುತ್ತಿದ್ದು, ಈ ಚಿತ್ರದಲ್ಲಿ ಅವರ ಪುತ್ರ ಶ್ರೇಯಸ್‌ ನಾಯಕರಾಗಿ ನಟಿಸುತ್ತಿದ್ದಾರೆ. ಇದು ಕೂಡಾ ನೈಜ ಘಟನೆಯನ್ನಾಧರಿಸಿದ ಸಿನಿಮಾ. ಚಿತ್ರದಲ್ಲಿ ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್‌ ನಾಯಕಿ ನಟಿಸುತ್ತಿದ್ದು, ಇದು ಆಕೆಯ ಮೊದಲ ಕನ್ನಡ ಚಿತ್ರ. ನಾಯಕ ಶ್ರೇಯಸ್‌ ಪಡ್ಡೆಹುಲಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಲಾಂಚ್‌ ಆಗಿದ್ದು, ಸದ್ಯ ಆ ಚಿತ್ರ ಡಿಜಿಟಲ್‌ ವೇದಿಕೆಯಲ್ಲಿ ಲಭ್ಯವಿದೆ.

ಚಿತ್ರರಂಗದ ಸದ್ಯದ ಪರಿಸ್ಥಿತಿ ಬಗ್ಗೆ ಮಾತನಾಡುವ ಕೆ.ಮಂಜು, ಚಿತ್ರರಂಗದಲ್ಲಿ ಅನೇಕರಿಗೆ ಕಷ್ಟವಿದೆ. ಈ ನಿಟ್ಟಿನಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿ ಇರುವವರಿಗೆ ಮೊದಲ ಆದ್ಯತೆ ನೀಡಬೇಕು ಎನ್ನುವುದು ಮಂಜು ಮಾತು.

Advertisement

Udayavani is now on Telegram. Click here to join our channel and stay updated with the latest news.

Next