ತಾನು ಯಾವುದೇ ಸ್ಥಾನವನ್ನು ಏರಿದರೂ ತಾನು ಬೆಳೆದುಬಂದ ಹಾದಿಯನ್ನು ಮರೆಯಬಾರದು ಎಂಬ ಮಾತಿಗೆ ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ಅವರು ಉದಾಹರಣೆಯಾಗಿ ಕಾಣುತ್ತಾರೆ. ಕಾರಣ ಅವರು ತಾನು ಈ ಹಿಂದೆ ಬೆಳೆದು ಬಂದ ಕೃಷಿ ಪರಂಪರೆಯನ್ನು ಈಗಲೂ ನಡೆಸುತ್ತಿರುವುದು.
ಈಗ ಕೋರ್ಟಿಗೆ ಬೇಸಿಗೆ ರಜೆ ಇರುವುದರಿಂದ ನಟರಾಜ್ ಅವರು ತನ್ನ ಊರಾದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಈಶ್ವರಮಂಗಲದಲ್ಲಿ ವೃತ್ತಿಯ ವಿಶ್ರಾಂತಿಯಲ್ಲಿದ್ದಾರೆ. ಅವರು ವೃತ್ತಿಯಲ್ಲಿ ವಿಶ್ರಾಂತಿ ಪಡೆದರೆ ಪ್ರವೃತಿಯಲ್ಲಿ ವಿಶ್ರಾಂತಿ ಪಡೆದಿಲ್ಲ.
ತನ್ನ ಬಾಲ್ಯದ ದಿನಗಳಲ್ಲಿ ಕಣ್ತುಂಬಿಸುತ್ತಿದ್ದ ಭತ್ತದ ಬೇಸಾಯವನ್ನು ತನ್ನ ರಜಾ ಅವಧಿಯಲ್ಲಿ ನಡೆಸುತ್ತಿದ್ದಾರೆ. ತನ್ನ ರಜೆಯ ಅವಧಿಯಲ್ಲಿ ಕೃಷಿಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಇದನ್ನೂ ಓದಿ :ವಿಜಯಪುರ : ಜಮೀನಿನಲ್ಲಿ ಅನಧಿಕೃತ ಮಣ್ಣು ಗಣಿಗಾರಿಕೆ, ಪ್ರಕರಣ ದಾಖಲು
ಕೆ.ಎಂ. ನಟರಾಜ್ ಅವರು ಟಿಲ್ಲರ್ ಹಿಡಿದು ಗದ್ದೆಯನ್ನು ಉಳುಮೆ ಮಾಡುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಈ ಮೂಲಕ ತಾನೇಷ್ಟೆ ಎತ್ತರಕ್ಕೆ ಎರಿದ್ದರೂ ತನ್ನ ಮೂಲ ಕೃಷಿ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ.
– ಪ್ರವೀಣ್ ಚೆನ್ನಾವರ