Advertisement

ಮತ್ತೆ ದರ್ಬಾರ್ ಶುರು; ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಕೆಸಿಆರ್

02:14 PM Dec 13, 2018 | Team Udayavani |

ಹೈದರಾಬಾದ್: ತೆಲಂಗಾಣದ ಮುಖ್ಯಮಂತ್ರಿಯಾಗಿ 2ನೇ ಬಾರಿಗೆ ಟಿಆರ್ ಎಸ್(ತೆಲಂಗಾಣ ರಾಷ್ಟ್ರ ಸಮಿತಿ) ಅಧ್ಯಕ್ಷ ಕೆ.ಚಂದ್ರಶೇಖರ್ ರಾವ್ ಗುರುವಾರ ಹೈದರಾಬಾದ್ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣವಚನ ಸ್ವೀಕರಿಸಿದರು.

Advertisement

ಇತ್ತೀಚೆಗೆ ತೆಲಂಗಾಣ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ 119 ಸದಸ್ಯ ಬಲದ ವಿಧಾನಸಭೆಯಲ್ಲಿ ಕೆಸಿಆರ್ ನೇತೃತ್ವದ ಟಿಆರ್ ಎಸ್ ಪಕ್ಷ 88ಸ್ಥಾನಗಳ ಸ್ಪಷ್ಟ ಬಹುಮತ ಪಡೆದು ಅಧಿಕಾರದ ಗದ್ದುಗೆ ಏರಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್, ತೆಲುಗು ದೇಶಂ ಪಕ್ಷ(ಟಿಡಿಪಿ), ಸಿಪಿಐ, ತೆಲಂಗಾಣ ಜನ ಸಮಿತಿಯ ಪ್ರಜಾಕುಟಾಮಿ ಮಹಾಮೈತ್ರಿಕೂಟ ಧೂಳಿಪಟವಾಗಿತ್ತು.

ಕೆ.ಚಂದ್ರಶೇಖರ್ ರಾವ್ ಅವರು ಗಾಜ್ವೆಲ್ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 1985ರಿಂದ ಚುನಾವಣಾ ಅಖಾಡದಲ್ಲಿ ಸ್ಪರ್ಧಿಸುತ್ತಿರುವ ಕೆಸಿಆರ್ ಈವರೆಗೂ ಸೋಲನ್ನು ಕಾಣದೆ ದಾಖಲೆ ಬರೆದಿದ್ದಾರೆ.

ಅಸಾದುದ್ದೀನ್ ಒವೈಸಿಯ ಎಐಎಂಎಂ ತೆಲಂಗಾಣದಲ್ಲಿ ಏಳು ಸ್ಥಾನಗಳಲ್ಲಿ ಜಯ ಸಾಧಿಸಿದ್ದು, ಎಐಎಂಎಂ ಕೂಡಾ ಟಿಆರ್ ಎಸ್ ಗೆ ಬೆಂಬಲ ನೀಡಿದೆ. ಪ್ರತ್ಯೇಕ ತೆಲಂಗಾಣ ರಾಜ್ಯ ಹೋರಾಟದಲ್ಲಿ ಕೆಸಿಆರ್ ಮುಂಚೂಣಿಯಲ್ಲಿದ್ದರು. ತೆಲಂಗಾಣ ರಾಜ್ಯ ರಚನೆಯಾದ ನಂತರ 2014ರಲ್ಲಿ ಕೆಸಿಆರ್ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next