Advertisement

ಕೆ.ಸಿ.ವ್ಯಾಲಿ: ಸೂಕ್ತ ಸಮಯದಲ್ಲಿ ಉತ್ತರ

10:07 AM Jan 27, 2019 | Team Udayavani |

ಶ್ರೀನಿವಾಸಪುರ: ಎತ್ತಿನಹೊಳೆ ಯೋಜನೆಯಿಂದಲೂ ಜಿಲ್ಲೆಗೆ ನೀರು ಹರಿಸಲಾಗುವುದು. ನನಗೆ ಮತ ಮುಖ್ಯವಲ್ಲ. ಮಾನವೀಯತೆ ಮುಖ್ಯ. ಕ್ಷೇತ್ರವನ್ನು ಗುಡಿಸಲು ಮುಕ್ತಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಮೂಲ ಸೌಲಭ್ಯ ಒದಗಿಸಲಾಗುವುದು ಎಂದು ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ಕುಮಾರ್‌ ಭರವಸೆ ನೀಡಿದರು.

Advertisement

ತಾಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ ಏರ್ಪಡಿಸಿದ್ದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕೆ.ಸಿ.ವ್ಯಾಲಿ ನೀರಿನ ಸಂಬಂಧ ಕೆಲವರು ಸುಪ್ರೀಂ ಕೋರ್ಟ್‌ ಮೆಟ್ಟಿಲು ಹತ್ತಿದ್ದಾರೆ. ಆದರೆ, ನಾನು ಅದಕ್ಕೆ ಸರಿಯಾದ ಸಮಯದಲ್ಲಿ ಉತ್ತರ ಕೊಡುತ್ತೇನೆ. ಹಿಂದೂ ವರ್ಷಾರಂಭದ ಒಳಗೆ ಜಿಲ್ಲೆಯ ಕೆರೆಗಳಿಗೆ ನೀರು ಹರಿಸಿ ಯುಗಾದಿ ಯನ್ನು ಅರ್ಥಪೂರ್ಣವಾಗಿ ಆಚರಿಸಿ ನಮ್ಮ ಜಿಲ್ಲೆಯ ವಾಸಿಗಳಿಗೆ ಕೊಡುಗೆ ನೀಡಲಾಗುವುದು ಎಂದು ಹೇಳಿದರು.

ಗ್ರಾಮೀಣ ಪ್ರದೇಶದ ಜನರ ಅನುಕೂಲಕ್ಕಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲಾಗುತ್ತಿದೆ. ಇದರಿಂದ ಬಡವರ ರೋಗಿಗಳಿಗೆ ಸಾಕಷ್ಟು ಅನುಕೂಲವಾಗುತ್ತದೆ. ಕ್ಷೇತ್ರದ ಜನತೆ ಆರೋಗ್ಯದಿಂದ ಇರಬೇಕೆನ್ನುವ ಕನಸು ನನಸಾ ಗುತ್ತದೆ ಎಂದು ಹೇಳಿದರು.

ಲಕ್ಷ್ಮೀಸಾಗರದಲ್ಲಿ 1.70 ಕೋಟಿ ರೂ. ವೆಚ್ಚದಲ್ಲಿ ನೂತನ ಆರೋಗ್ಯ ಕೇಂದ್ರದ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಅದೇ ರೀತಿಯಾಗಿ ಸೋಮಯಾಜಲಹಳ್ಳಿ, ಬೈರಗಾನಪಲ್ಲಿ, ಮುದ ವಾಡಿ, ಮದನಹಳ್ಳಿ ಗ್ರಾಮಗಳಲ್ಲೂ ಇಲ್ಲಿ ನಿರ್ಮಿಸುತ್ತಿರುವ ರೀತಿಯಲ್ಲೇ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.

ನೀರು ಒದಗಿಸಲು ಆದ್ಯತೆ: ಇಲ್ಲಿ ನಿರ್ಮಿಸಲು ಉದ್ದೇಶಿಸಿರುವ ಆರೋಗ್ಯ ಕೇಂದ್ರದ ನಿರ್ಮಾಣ ಕಾಮಗಾರಿಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಲಾಗುವುದು. ಕಾಮಗಾರಿಯ ಗುಣಮಟ್ಟ ಕೆಡದಂತೆ ಅಧಿಕಾರಿಗಳು ಎಚ್ಚರದಿಂದ ನೋಡಿಕೊಳ್ಳಬೇಕು. ಕ್ಷೇತ್ರದಲ್ಲಿ ಬೇಸಿಗೆ ಕಾಲವನ್ನು ಗಮನದಲ್ಲಿಟ್ಟು ಕೊಂಡು ಕುಡಿಯುವ ನೀರಿನ ತೊಂದರೆ ಇರುವ ಕಡೆಯಲ್ಲಿ ಕೊಳವೆಬಾವಿ ಕೊರೆಯಿಸ ಲಾಗುವುದು. ಈಗಾಗಲೇ ಅಂತರ್ಜಲ ವಿರುವೆಡೆ ಕೊಳವೆಬಾವಿ ಕೊರೆ ಯಲು ನೀರಿನ ಲಭ್ಯತೆಯನ್ನು ಹೊಂದಿರುವ ಸ್ಥಳಗಳನ್ನು ನಿಗದಿಪಡಿಸುವಂತೆ ಭೂಗರ್ಭ ಶಾಸ್ತ್ರಜ್ಞರಿಗೆ ತಿಳಿಸಲಾಗಿದೆ ಎಂದು ತಿಳಿಸಿದರು.

Advertisement

ಸ್ತ್ರೀ ಶಕ್ತಿ ಸಂಘದ ಸದಸ್ಯರಿಗೆ ತಲಾ 1 ಲಕ್ಷ ರೂ. ಬಡ್ಡಿ ರಹಿತ ಸಾಲವಾಗಿ ನೀಡಲಾಗುವುದು. ಹೊಸದಾಗಿ ಸಂಘಕಟ್ಟಿದವರಿಗೂ ಈ ಸೌಲಭ್ಯಕ್ಕೆ ಒಳಪಡುತ್ತಾರೆ. ಎಸ್ಸಿ, ಎಸ್ಟಿ ಸಮುದಾಯದ ಫ‌ಲಾನುಭವಿಗಳು ಕೃಷಿ ಕೊಳವೆಬಾವಿಗಾಗಿ ಮಧ್ಯವರ್ತಿಗಳನ್ನು ಅವಲಂಬಿಸದೆ ನೇರವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅರ್ಜಿ ಕೊಡಬೇಕು. 15 ದಿನಗಳ ಒಳಗೆ ಕೊಳವೆಬಾವಿ ನಿರ್ಮಾಣ ಕಾರ್ಯಪ್ರಾರಂಭಿಸುವಂತೆ ನೋಡಿಕೊಳ್ಳ ಲಾಗುವುದು ಎಂದು ಹೇಳಿದರು.

ಸಮುದಾಯ ಭವನಗಳ ನಿರ್ಮಾಣಕ್ಕೆ ಸರ್ಕಾರದಿಂದ 8 ಲಕ್ಷ ರೂ. ನೀಡಲಾಗುವುದು. ಲಕ್ಷ್ಮೀಸಾಗರ ಗ್ರಾಮದಲ್ಲಿ ಎರಡು ಸಮುದಾಯ ಭವನಗಳನ್ನು ನಿರ್ಮಿಸ ಲಾಗುವುದು ಎಂದು ಹೇಳಿದರು.ಜಿಪಂ ಸದಸ್ಯ ಗೋವಿಂದಸ್ವಾಮಿ, ಎಪಿಎಂಸಿ ಅಧ್ಯಕ್ಷ ಎನ್‌.ರಾಜೇಂದ್ರ ಪ್ರಸಾದ್‌, ಜಿಲ್ಲಾ ಆರೋಗ್ಯಾಧಿಕಾರಿ ಡಾ.ವಿಜಯ್‌ಕುಮಾರ್‌, ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ, ಡಾ. ಸರ್ವೋತ್ತಮ್‌, ಡಾ.ಸೈಯದ್‌ ಅಬ್ದುಲ್‌ಸಲಾಂ, ತಾಪಂ ಅಧ್ಯಕ್ಷೆ ಸುಗುಣ ರಾಮಚಂದ್ರ, ಇಒ ನಾರಾಯಣಸ್ವಾಮಿ, ಲಕ್ಷ್ಮೀಸಾಗರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಜಮೀರ್‌ ಪಾಷ, ಉಪಾಧ್ಯಕ್ಷೆ ರುಕ್ಮಿಣಿಯಮ್ಮ, ಅಶೋಕ್‌, ಕೆ.ಕೆ.ಮಂಜುನಾಥ್‌, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಕೃಷ್ಣ, ಗುತ್ತಿಗೆದಾರ ಕೆ.ಎಸ್‌.ರಾಮಚಂದ್ರರೆಡ್ಡಿ, ಎಸ್‌.ಚಕ್ರಧರ್‌ರವರುಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next