Advertisement

ಕೆ.ಸಿ. ವ್ಯಾಲಿ ಯೋಜನೆ ರೈತರಿಗೆ ವರದಾನ

03:53 PM Nov 13, 2019 | Team Udayavani |

ಮಾಲೂರು: ಶಾಶ್ವತ ನೀರಾವರಿ ಯೋಜನೆಗಳ ಪೈಕಿ ಕೆ.ಸಿ.ವ್ಯಾಲಿಯು ಉಭಯ ಜಿಲ್ಲೆಯ ಜನರ ಪಾಲಿಗೆ ವರದಾನ ಎಂದು ಶಾಸಕ ಕೆ.ವೈ. ನಂಜೇಗೌಡ ತಿಳಿಸಿದರು.

Advertisement

ಪಟ್ಟಣದ ಅಶ್ರಯ ಬಡಾವಣೆಯ ರಾಜೀವ್‌ ನಗರದಲ್ಲಿ 14ನೇ ಹಣಕಾಸು ಯೋಜನೆಯಡಿಯಲ್ಲಿ ಕುಡಿಯುವ ನೀರಿಗಾಗಿ ಕೊಳವೆಬಾವಿ ಕೊರೆಯುವುದಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಸ್ತುತ ಮಾಲೂರು ಪಟ್ಟಣವು ಸೇರಿ ತಾಲೂಕಿನ ಅನೇಕ ಹಳ್ಳಿಗಳಲ್ಲಿ ಅಂತರ್ಜಲದ ಮಟ್ಟ 1500 ರಿಂದ 1800 ಅಡಿಗೆ ಕುಸಿದಿದೆ. ಇದರಿಂದ ತಾಲೂಕಿನಲ್ಲಿ ಕುಡಿಯುವ ನೀರಿನ ಬವಣೆ ಹೆಚ್ಚಾಗಿದೆ. ಆಳದ ನೀರಿನಲ್ಲಿ ಫ್ಲೋರೈಡ್‌ ಅಂಶವು ಹೆಚ್ಚಾಗಿದ್ದು, ಜನರ ಅರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.

ನೀರಿನ ಸಮಸ್ಯೆ ನಿವಾರಣೆ: ಇತ್ತೀಚಿಗೆ ಅರಂಭವಾಗಿರುವ ಕೆ.ಸಿ.ವ್ಯಾಲಿ ಯೋಜನೆಯಿಂದ ತಾಲೂಕಿನ 27 ಕೆರೆಗಳಿಗೆ ನೀರು ಹರಿಯಲಿದೆ. ಇದರಿಂದ ಶುದ್ಧ ಕುಡಿಯುವ ನೀರಿನ ಬವಣೆ ನೀಗುವ ವಿಶ್ವಾಸವಿದೆ. ಪ್ರಸ್ತುತ ತಾಲೂಕಿನ ಶಿವಾರಪಟ್ಟಣದ ಸುತ್ತ  ಮುತ್ತಲಿನ ಹಳ್ಳಿಗಳಲ್ಲಿ ರೈತರ ಮತ್ತು ಕುಡಿಯುವ ನೀರಿನ ಕೊಳವೆಬಾವಿಗಳಲ್ಲಿ ಅಂತರ್ಜಲದ ಮಟ್ಟ ಹೆಚ್ಚುತ್ತಿದೆ ಎಂದು ಹೇಳಿದರು.

ಅಂತರ್ಜಲ ಹೆಚ್ಚಳ: ಭಾವನಹಳ್ಳಿ ಕೆರೆಯ ಮಾರ್ಗವಾಗಿ ತಂಬಿಹಳ್ಳಿ, ಅಬ್ಬೇನಹಳ್ಳಿ, ಮಾಲೂರು ಪಟ್ಟಣಕ್ಕೆ ಕುಡಿಯುವ ನೀರು ಪೂರೈಸಲು ಕೊಳವೆ ಬಾವಿ ಕೊರೆಯಲಾಗುತ್ತಿದೆ. ಅರೋಹಳ್ಳಿ ಕೆರೆಯಲ್ಲಿ ನೀರು ಇಂಗುವುದರಿಂದ ಅಂತರ್ಜಲ ವೃದ್ಧಿಯಾಗಿ ಮಾಲೂರು ಪಟ್ಟಣದ ಕುಡಿಯುವ ನೀರಿನ ಬವಣೆಯೂ ಕಡಿಮೆಯಾಗಲಿದೆ. ಅರೋಹಳ್ಳಿ ಕೆರೆಯಿಂದ ಮಾಲೂರು ದೊಡ್ಡಕೆರೆಗೆ ನೀರು ಬರಲಿದ್ದು, ಅಂತರ್ಜಲದ ಪ್ರಮಾಣ ಮತ್ತಷ್ಟು ಉತ್ತಮವಾಗಲಿದೆ ಎಂದು ಹೇಳಿದರು.

ಇಂತಹ ಶಾಶ್ವತ ಯೋಜನೆಗಳಿಂದ ಜನರ ನೀರಿನ ಬವಣೆ ಸರಿದೂಗಿಸಲು ಸಾಧ್ಯವಿದೆ. ಕಳೆದ 9 ವರ್ಷಗಳ ಹಿಂದೆ ಆರಂಭವಾದ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪೂರ್ಣಗೊಂಡಿಲ್ಲ. ಕಾರಣ ಮಾರ್ಕಂಡಯ್ಯ ಜಲಾಶಯದಲ್ಲಿ ನೀರು ಇರಲಿಲ್ಲ. ಆದರೆ, ಕಳೆದ ಆರೇಳು ತಿಂಗಳುಗಳ ಹಿಂದೆ ಡ್ಯಾಮ್‌ನಲ್ಲಿ ಸಂಗ್ರಹವಾಗಿರುವ ನೀರನ್ನು ತಾಲೂಕಿನ ಅನೇಕ ಗ್ರಾಮಗಳಿಗೆ ಪ್ರಾಯೋಗಿಕವಾಗಿ ಪೂರೈಕೆ ಮಾಡಲಾಗುತ್ತಿದೆ ಎಂದು ಹೇಳಿದರು.

Advertisement

154 ಹಳ್ಳಿಗಳಿಗೆ ನೀರು: ಪ್ರಸ್ತುತ ವರ್ಷದ ಮಳೆಗಾಲದಲ್ಲಿ ಸಂಗ್ರಹವಾಗಿರುವ ನೀರಿನ ಜೊತೆಗೆ ಸಹಜವಾಗಿ ಹಳ್ಳದ ಮಾರ್ಗವಾಗಿ ಕೆ.ಸಿ. ವ್ಯಾಲಿ ನೀರು ಈ ಭಾಗದ ಕೆರೆಗಳಿಗೆ ಬರುವುದರಿಂದ ಮಾರ್ಕಂಡಯ್ಯ ಜಲಾಶಯದ ಕುಡಿಯುವ ನೀರಿನ ಯೋಜನೆಯು ಕಾರ್ಯಗತವಾಗಿ, ತಾಲೂಕಿನ 154 ಹಳ್ಳಿಗಳಿಗೆ ನೀರು ಪೂರೈಕೆಯಾಗುವ ವಿಶ್ವಾಸವಿದೆ ಎಂದು ಹೇಳಿದರು.

ನಾಲ್ಕು ಕೊಳವೆ ಬಾವಿ: ಇನ್ನೇರಡು ಮೂರು ವರ್ಷಗಳಲ್ಲಿ ಕುಡಿಯುವ ನೀರಿನ ಯೋಜನೆಯಾಗಿ ರೂಪುಗೊಂಡಿರುವ ಎತ್ತಿನಹೊಳೆ ಯೋಜನೆಯ ನೀರು ಸಿಕ್ಕಲ್ಲಿ ಕುಡಿಯುವ ನೀರಿನ ಬವಣೆ ಶಾಶ್ವತವಾಗಿ ದೂರವಾಗಲಿದೆ. ಪ್ರಸುತ್ತ 14ನೇ ಹಣಕಾಸು ಯೋಜನೆಯಡಿಯಲ್ಲಿ ಪಟ್ಟಣದಲ್ಲಿ ನಾಲ್ಕು ಕೊಳವೆ ಬಾವಿ ಕೊರೆಯುವ ಕಾರ್ಯಕ್ರಮ ಇದೆ. ಪ್ರಥಮ ಪ್ರಯತ್ನವಾಗಿ ರಾಜೀವ ನಗರದಲ್ಲಿ ಕೊರೆಯುತ್ತಿರುವ ಕೊಳವೆ ಬಾವಿ ಯಲ್ಲಿಉತ್ತಮ ನೀರು ಸಿಕ್ಕಿದ್ದು, ಈ ಭಾಗದ ಜನರಿಗೆ ಕುಡಿಯುವ ನೀರಿನ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next